ಸೆಲೆಬ್ರಿಟಿಗಳ ಆನೆ ಪ್ರೀತಿ; ಕೃತಿ ಕಾರಂತ್‌ ‘ಫ್ಲೈಯಿಂಗ್‌ ಎಲಿಫೆಂಟ್‌’ಕಿರುಚಿತ್ರ ಶೇರ್‌ ಮಾಡಿದ ಪುನೀತ್‌!

Published : Aug 13, 2021, 10:08 AM IST
ಸೆಲೆಬ್ರಿಟಿಗಳ ಆನೆ ಪ್ರೀತಿ; ಕೃತಿ ಕಾರಂತ್‌ ‘ಫ್ಲೈಯಿಂಗ್‌ ಎಲಿಫೆಂಟ್‌’ಕಿರುಚಿತ್ರ ಶೇರ್‌ ಮಾಡಿದ ಪುನೀತ್‌!

ಸಾರಾಂಶ

ಆ. 12 ವಿಶ್ವ ಆನೆಗಳ ದಿನ. ಆ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಕೃತಿ ಕಾರಂತ್‌ ಅವರ ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಆ. 12 ವಿಶ್ವ ಆನೆಗಳ ದಿನ. ಈ ದಿನದಂದು ಸಿನಿಮಾ ಹಾಗೂ ಕಿರುತೆರೆ ನಟ,ನಟಿಯರು ಆನೆ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. 

ನಟಿ ಆಶಾ ಭಟ್‌ ‘ಹಾಥಿ ಮೇರೆ ಸಾಥಿ’ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಆನೆಗಳ ಸ್ನೇಹ ಸ್ವಭಾವದ ಬಗ್ಗೆ ಬರೆದುಕೊಂಡಿದ್ದಾರೆ. ನಟಿ ಸಂಯುಕ್ತಾ ಹೊರನಾಡು ಆನೆಗೆ ಮುತ್ತಿಕ್ಕುವ ವೀಡಿಯೊದೊಂದಿಗೆ ಸಂಭ್ರಮಿಸಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು ಆನೆಗಳ ಕ್ಯಾಂಪ್‌ನಲ್ಲಿರುವ ಫೋಟೋ ಹಾಕಿಕೊಂಡಿದ್ದಾರೆ.

ಪೌರಾಣಿಕ ಗಜಶಾಸ್ತ್ರದ ಹಿನ್ನೆಲೆಯಲ್ಲಿ ‘ಫ್ಲೈಯಿಂಗ್‌ ಎಲಿಫೆಂಟ್ಸ್‌’ ಕಿರುಚಿತ್ರ ರೂಪಿಸಿದ್ದೇವೆ. ನೆರಳು ಬೆಳಕಿನ ಹಿನ್ನೆಲೆಯಲ್ಲಿ ಈ ಸೂಕ್ಷ್ಮ ಮನಸ್ಸಿನ, ಭಾವುಕ ಜೀವಿಗಳ ಕತೆ ಹೇಳಲು ಪ್ರಯತ್ನಿಸಿದ್ದೇನೆ. - ಕೃತಿ ಕಾರಂತ್‌, ವನ್ಯಜೀವಿ ತಜ್ಞೆ

 

ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರ ಬಿಡುಗಡೆ

ವನ್ಯಜೀವಿ ತಜ್ಞೆ ಕೃತಿ ಕಾರಂತ್‌ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಫ್ಲೈಯಿಂಗ್‌ ಎಲಿಫೆಂಟ್‌ - ಎ ಮದರ್ಸ್‌ ಹೋಪ್‌’ ಕಿರುಚಿತ್ರ ಪ್ರಕಾಶ್‌ ಮಠದ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಆರು ನಿಮಿಷಗಳ ಈ ಚಿತ್ರವನ್ನು ಬೆಟ್ಟಕುರುಬ ಭಾಷೆಯಲ್ಲಿ ನಿರೂಪಿಸಿರುವುದು ವಿಶೇಷ. ಅನನ್ಯಾ ಭಟ್‌ ಹಿನ್ನೆಲೆ ದನಿಯಲ್ಲಿ ಆನೆಗಳ ಕತೆ ತೆರೆದುಕೊಳ್ಳುತ್ತದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಾನು ಮಾಡಿದ ಸಿನಿಮಾ ಯಾರೂ ನೋಡ್ಲಿಲ್ಲ, 15 ಮಂದಿ ಅಷ್ಟೇ ಥಿಯೇಟರ್‌ನಲ್ಲಿದ್ರು..' ಹೀರೋ ದಿನಗಳನ್ನು ನೆನೆದ ಅಕುಲ್‌ ಬಾಲಾಜಿ
'ಅನ್ನ ವಿಷ ಮಾಡಿದರೆ ಅವರ ವಂಶವೇ ಸರ್ವನಾಶ..' ಹೋಟೆಲ್ ಮಾಫಿಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್‌