
ಬೆಂಕಿ ಕೆಂಡಗಳಂತಿರುವ ಕಣ್ಣುಗಳು, ಸಾಲ್ಟ್ ಆಂಡ್ ಪೆಪ್ಪರ್ ಲುಕ್ಕಿನ ಗಡ್ಡದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರು ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲಕ್ಕೆ ‘ವೇದ’ ಚಿತ್ರದ ಪೋಸ್ಟರ್ ಸಾಕ್ಷಿ.
ಇದು ಶಿವರಾಜ್‌ಕುಮಾರ್ ನಟನೆಯ 125ನೇ ಸಿನಿಮಾ. ಎ. ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಗೀತಾ ಶಿವರಾಜ್‌ಕುಮಾರ್ ಅವರೇ ಈ ಚಿತ್ರದ ನಿರ್ಮಾಪಕರಾಗಿರುವುದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.
ಯಶ್ ಹೊಸ ಸಿನಿಮಾದ ಕೆಲಸ ಶುರು..! ಇದರಲ್ಲಿ ಯಶ್ ಹೇಗಿರ್ತಾರೆ
ಚಿತ್ರದ ಪೋಸ್ಟರ್‌ನಲ್ಲೇ ಹೇಳಿರುವಂತೆ ಇದು 1960ರ ದಿನಗಳ ಕತೆ ಇರಬಹುದೇ ಎಂಬುದು ಹಲವರ ಪ್ರಶ್ನೆ. ಸಿನಿಮಾ ತೆರೆಗೆ ಬಂದ ಮೇಲೆಯೇ ಇದಕ್ಕೆ ಉತ್ತರ ದೊರೆಯಲಿದೆ.
‘ವೇದ’ ಚಿತ್ರದಲ್ಲಿ ಶಿವಣ್ಣ ಅವರ ಗೆಟಪ್ ತುಂಬಾ ವಿಭಿನ್ನವಾಗಿದೆ ಎಂಬುದರಲ್ಲಿ ಎರಡು ಮಾತಿನಲ್ಲ. ಸದ್ಯಕ್ಕೆ ಹರ್ಷ ಹಾಗೂ ಶಿವಣ್ಣ ‘ಭಜರಂಗಿ 2’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಈ ಸಿನಿಮಾ ನಂತರ ‘ವೇದ’ ಸೆಟ್ಟೇರಲಿದೆ. ‘ಭಜರಂಗಿ 2’ ಮೇ.14ರಂದು ಬಿಡುಗಡೆ ಆಗಲಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.