
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ರಾಬರ್ಟ್ ಬಂದಿದ್ದಾನೆ. ಬಿಗ್ ಬಜೆಟ್ ಚಿತ್ರ ಮೊದಲ ವಾರದಲ್ಲೇ ಬಂಡವಾಳ ಹಿಂಪಡೆಯುವುದರಲ್ಲಿ ಅನುಮಾವಿಲ್ಲ. ಚಿತ್ರದ ಬಹುತೇಕ ಹಾಡುಗಳು ವೈರಲ್ ಆಗಿವೆ, ಅದರಲ್ಲೂ ರಾಮ ನಾಮ ಹಾಡಿರೋ ರಾಮ ಬರುವನು ಡಿ-ಬಾಸ್ ಅಭಿಮಾನಿಗಳು caller tune ಅಗಿದೆ. ಈ ಹಾಡಿನಲ್ಲಿ ದರ್ಶನ್ ಹೆಗಲ ಮೇಲೆ ಕುಳಿತಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ? ಚಿತ್ರದಲ್ಲಿ ಈತ ಪಾತ್ರವೇನು?
"
'ರಾಬರ್ಟ್' ಚಿತ್ರದ ಮೊದಲ ಟಿಕೆಟ್ ಖರೀದಿಸಿದ್ದು ಈ ನಿರ್ದೇಶಕನ ಪುತ್ರ!
ದರ್ಶನ್ ಹನುಮನ ವೇಷಧಾರಿಯಾಗಿ ರಾಮನ ಅವತಾರದಲ್ಲಿರುವ ಪುಟ್ಟ ಬಾಲಕನನ್ನು ಹೊತ್ತು ಕೊಂಡು ಬರುವ ದೃಶ್ಯ ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಪುಟ್ಟ ಚೋರ ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಕಿಡ್ ಜೇಸನ್ ಡಿಸೋಜಾ. ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಸಿದ್ಧಾರ್ಥ್ ಸೇರಿದಂತೆ ಅನೇಕ ಸ್ಟಾರ್‌ಗಳ ಜೊತೆ ಈಗಾಗಲೇ ತೆರೆ ಹಂಚಿಕೊಂಡಿದ್ದಾನೆ ಈ ಪುಟ್ಟ ಪೋರ.
9 ವರ್ಷ ಜೇಸನ್ ಡಿಸೋಜಾ ಬಾಲಿವುಡ್‌ನ ಬಹು ಬೇಡಿಕೆಯ ಬಾಲ ನಟ, ಈಗಾಗಲೇ 100 ಹೆಚ್ಚು ಜಾಹೀರಾತುಗಳಲ್ಲಿ ಮಿಂಚಿರುವ ಜೇಸನ್ ಕೈಯಲ್ಲಿ ನೂರಾರು ಸಿನಿಮಾ ಆಫರ್‌ಗಳಿವೆ ಎನ್ನಲಾಗಿದೆ. ಈ ಪುಟ್ಟ ಬಾಲಕನ ಪಾತ್ರ ಚಿತ್ರದಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ಪಾತ್ರ ವೀಕ್ಷಕರ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ.
ದರ್ಶನ್ 'ರಾಬರ್ಟ್' ಚಿತ್ರದ ಬಗ್ಗೆ ಕಾಶಿನಾಥ್ ಸುಳಿವು ಕೊಟ್ಟಿದ್ರಾ?
ಇಂದು ಬೆಳಗ್ಗೆ 6 ಗಂಟೆಯಿಂದ ರಾಬರ್ಟ್ ಅಬ್ಬರ ಎಲ್ಲೆಡೆ ಶುರುವಾಗಿದೆ. ಶ್ರೀನಿವಾಸ ಥಿಯೇಟರ್‌ನಲ್ಲಿ ಪೂಜೆ ನಡೆದ ನಂತರ ಎಲ್ಲೆಡೆ ಪ್ರದರ್ಶನ ಆರಂಭವಾಗಿದೆ. ಇಡೀ ಚಿತ್ರ ತಂಡಕ್ಕೆ ಚಿತ್ರದ ಬಗ್ಗೆ ಭರವಸೆ ಹೆಚ್ಚಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.