ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ 'ಕಾಮನ್ ಡಿಪಿ' ಬಿಡುಗಡೆ ಮಾಡಿದ ನಟ ಶಿವರಾಜ್ ಕುಮಾರ್

By Shriram Bhat  |  First Published Jan 5, 2024, 10:50 PM IST

ನ್ಯಾಷನಲ್‌ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್‌, 'ಕೆಜಿಎಫ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಹೆಸರಿನ ಕನ್ನಡ ಚಿತ್ರರಂಗವನ್ನು ಪ್ರಪಂಚಕ್ಕೇ ಪರಿಚಯಿಸಿದ ಕೀರ್ತಿಯಲ್ಲಿ ಮಂಚೂಣಿಯಲ್ಲಿ ನಿಲ್ಲುತ್ತಾರೆ. ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಇಡೀ ಕೆಜಿಎಫ್‌ ಟೀಮ್ ಈ ಗೌರವಕ್ಕೆ ಪಾತ್ರವಾಗಿದೆ.


ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ ಕರುನಾಡ ಚಕ್ರವರ್ತಿ ಬಿರುದಿನ ನಟ ಶಿವರಾಜ್‌ಕುಮಾರ್. ಕಾರಣ, ನಟ ಯಶ್ ಈ ಬಾರಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅಂದರೆ, ಅವರಿಗೆ ಫ್ಯಾನ್ಸ್ ಜತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ, ಅವರೀಗ ಮುಂಬರುವ 'ಟಾಕ್ಸಿಕ್‌' ಚಿತ್ರದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗೆ ಮೀಸಲಿಟ್ಟ ಸಮಯದಲ್ಲಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಸಹಜವಾಗಿ ಸಾಧ್ಯವಾಗುವುದಿಲ್ಲ. 

ಈ ಎಲ್ಲ ಬೆಳವಣಿಗೆಗಳನ್ನು ಬಲ್ಲ ಯಶ್ ತಮ್ಮ ಅಭಿಮಾನಿಗಳಿಗೆ ಬೇಸರ ಆಗದಿರಲಿ ಎಂದು, ಈಗಾಗಲೇ ತಮ್ಮದೇ ಆದ ರೀತಿಯಲ್ಲಿ 'ಸಂದರ್ಭ'ವನ್ನು ವಿವರಿಸಿ ಮೀಡಿಯಾದಲ್ಲಿ 'ಕ್ಷಮಾಪಣೆ ಸಹಿತ' ಪತ್ರವನ್ನು ಬರೆದಿದ್ದಾರೆ. ಮೀಡಿಯಾ ಮೂಲಕ ಅದು ಸೋಷಿಯಲ್ ಮೀಡಿಯಾಗಳನ್ನು ತಲುಪಿ ಈಗಾಗಲೇ ಜಗಜ್ಜಾಹೀರಾಗಿದೆ. ಇಂಥ ಸಂದರ್ಭದಲ್ಲಿ ಇಡೀ ಸ್ಯಾಂಡಲ್‌ವುಡ್ ನಟ ಯಶ್ ಸಪೋರ್ಟ್‌ಗೆ ನಿಂತಿದೆ ಎಂಬಂತೆ ನಟ ಶಿವರಾಜ್‌ಕುಮಾರ್ ಅವರು ಯಶ್ ಹುಟ್ಟುಹಬ್ಬಕ್ಕೆ ಸೂಕ್ತವಾದ 'ಸಿಡಿಪಿ' ಅಂದರೆ ಕಾಮನ್ ಡಿಪಿ'ಯನ್ನು ರಿಲೀಸ್ ಮಾಡಿ ಅಡ್ವಾನ್ಸ್‌ ಆಗಿ ವಿಶ್ ಮಾಡಿದ್ದಾರೆ. ಅಭಿಮಾನಿಗಳೂ ಒಮ್ಮತದಿಂದ ವಿಶ್ ಮಾಡುವ ದಾರಿ ತೋರಿಸಿಕೊಟ್ಟಿದ್ದಾರೆ.

Tap to resize

Latest Videos

undefined

Kaatera: ‘ಕಾಟೇರ’ ಸೆಲೆಬ್ರಿಟಿ ಶೋ ಹೌಸ್‌ಫುಲ್‌: ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ ದರ್ಶನ್,ರಾಕ್‌ಲೈನ್‌ !

ನ್ಯಾಷನಲ್‌ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್‌, ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಹೆಸರಿನ ಕನ್ನಡ ಚಿತ್ರರಂಗವನ್ನು ಪ್ರಪಂಚಕ್ಕೇ ಪರಿಚಯಿಸಿದ ಕೀರ್ತಿಯಲ್ಲಿ ಮಂಚೂಣಿಯಲ್ಲಿ ನಿಲ್ಲುತ್ತಾರೆ. ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಇಡೀ ಕೆಜಿಎಫ್‌ ಟೀಮ್ ಈ ಗೌರವಕ್ಕೆ ಪಾತ್ರವಾಗಿದೆ. ಇದೀಗ ನಟ ಯಶ್ 'ಕೆಜಿಎಫ್‌-2' ಬಳಿಕ ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್‌'ಗಾಗಿ ಕೆಲಸ ಶುರು ಮಾಡಿಕೊಂಡಿದ್ದಾರೆ. ಜನವರಿ 8ರಂದು ಯಶ್ ಹುಟ್ಟುಹಬ್ಬವಿದ್ದು, ಅದನ್ನು ಗ್ರಾಂಡ್‌ ಆಗಿ ಆಚರಿಸಲು ನಿರ್ಧರಿಸಿದ್ದ ಯಶ್ ಅಭಿಮಾನಿಗಳಿಗೆ ತಮ್ಮ 'ರಾಕಿಂಗ್ ಸ್ಟಾರ್' ಜತೆಯಲ್ಲಿ ಸಿಗುವುದಿಲ್ಲ. 

ನಟನೆಯಲ್ಲಿದ್ದಾಗ ಸೂಪರ್‌ ಸ್ಟಾರ್‌ ಪಟ್ಟ, ರಾಜಕೀಯಕ್ಕೆ ಬಂದು ಬದುಕೇ ಹಾಳಾಯ್ತು, ಮದುವೆಯಾದ್ರೂ ಒಂಟಿಯಾಗಿರುವ ನಟಿ 

ಇದಕ್ಕೆ ಪರಿಹಾರ ಎಂಬಂತೆ ಇದೀಗ ಶಿವಣ್ಣ ನೇತೃತ್ವದಲ್ಲಿ ಕಾಮನ್ ಡಿಪಿ ಬಿಡುಗಡೆ ಆಗಿದ್ದು, ಅಂದು ಯಶ್ ಅಭಿಮಾನಿಗಳು ತಮ್ಮ ಡಿಪಿಯನ್ನು 'ಯಶ್ ಸಿಡಿಪಿ'ಗೆ ಬದಲಾಯಿಸಿಕೊಂಡು ಆ ಮೂಲಕ ಯಶ್ ಹುಟ್ಟುಹಬ್ಬವನ್ನು ಅವರ ಹಾಜರಿ ಇಲ್ಲದೆಯೂ ರಾಕಿಂಗ್ ಸ್ಟಾರ್ 'ಪ್ರೆಸೆನ್ಸ್‌'ನಲ್ಲಿ ಸೆಲೆಬ್ರೇಟ್ ಮಾಡಬಹುದು. ಸಿಡಿಪಿ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ಡಿಪಿಯಲ್ಲಿಟ್ಟು ಆಚರಿಸಿ ಖುಷಿ ಪಡಬಹುದು. 'ಮನಸ್ಸಿದ್ದಲ್ಲಿ ಮಾರ್ಗ' ಎಂಬ ಮಾತಿನಂತೆಯೇ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಯಶ್ ಅವರ ಹುಟ್ಟುಹಬ್ಬವನ್ನು ಈ ಮೂಲಕ ಗ್ರಾಂಡ್‌ ಸೆಲೆಬ್ರೇಷನ್' ಆಗಿಸಬಹುದು.

 

 

 

click me!