ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

By Kannadaprabha News  |  First Published Apr 8, 2020, 10:25 AM IST

ನಿರ್ದೇಶಕ, ನಟ ರಿಷಬ್‌ ಶೆಟ್ಟಿಪುತ್ರ ರಣ್ವಿತ್‌ಗೆ ಮಂಗಳವಾರ (ಮಾ.7) ಮೊದಲ ವರ್ಷದ ಹುಟ್ಟುಹಬ್ಬ. ಮಗನ ಬತ್‌ರ್‍ಡೇಗೆ ರಿಷಬ್‌ ಶೆಟ್ಟಿವಿಶೇಷ ವಿಡಿಯೋವೊಂದನ್ನು ಗಿಫ್ಟ್‌ ನೀಡಿದ್ದಾರೆ. ಅದನ್ನೀಗ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.


ನಿರ್ದೇಶಕ, ನಟ ರಿಷಬ್‌ ಶೆಟ್ಟಿಪುತ್ರ ರಣ್ವಿತ್‌ಗೆ ಮಂಗಳವಾರ (ಮಾ.7) ಮೊದಲ ವರ್ಷದ ಹುಟ್ಟುಹಬ್ಬ. ಮಗನ ಬತ್‌ರ್‍ಡೇಗೆ ರಿಷಬ್‌ ಶೆಟ್ಟಿವಿಶೇಷ ವಿಡಿಯೋವೊಂದನ್ನು ಗಿಫ್ಟ್‌ ನೀಡಿದ್ದಾರೆ. ಅದನ್ನೀಗ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್‌ ಆಗಿರಿ : ರಮೇಶ್‌ ಅರವಿಂದ್‌

Tap to resize

Latest Videos

undefined

ಅಷ್ಟಕ್ಕೂ ಈ ವೀಡಿಯೋದಲ್ಲಿರುವುದು ಈ ಒಂದು ವರ್ಷದಲ್ಲಿ ರಿಷಬ್‌ ಅವರೇ ಕ್ಲಿಕ್ಕಿಸಿದ ರಣ್ವಿತ್‌ನ ವಿವಿಧ ಭಂಗಿಗಳ ಚಿತ್ರಗಳು. ಜೊತೆಗೆ ಇದಕ್ಕೆ ಹಿನ್ನೆಲೆಯಾಗಿ ‘ಕಥಾ ಸಂಗಮ’ ಚಿತ್ರದ ‘ಇರುಳ ಚಂದಿರನು ...’ ಹಾಡನ್ನು ಬಳಸಿಕೊಂಡಿದ್ದಾರೆ. ಸಿನಿಮಾ ಸಂಕಲನಕಾರ ಪ್ರತೀಕ್‌ ಶೆಟ್ಟಿಎಡಿಟ್‌ ಮಾಡಿದ್ದಾರೆ.

 

ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶಿರ್ವಾದ ಇವನಿಗಿರಲಿ. https://t.co/WWzmo2RQuk

— Rishab Shetty (@shetty_rishab)

ಸದ್ಯ ಕೊರೋನಾದಿಂದಾಗಿ ರಿಷಬ್‌ ಫ್ಯಾಮಿಲಿ ಕುಂದಾಪುರ ಸಮೀಪದ ಕೆರಾಡಿಯಲ್ಲಿದ್ದಾರೆ.

‘ರಣ್ವಿತ್‌ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದುಕೊಂಡಿದ್ದೆ. ಆದರೆ ಕೊರೋನಾದಿಂದಾಗಿ ಯಾರೂ ಹೊರಗೆ ಬರುವಂತಿಲ್ಲ. ನಾವೂ ಈಗ ನಮ್ಮೂರಿನಲ್ಲಿದ್ದೇವೆ. ಹಾಗಾಗಿ ಇಲ್ಲಿಯೇ ಸಿಂಪಲ್‌ ಆಗಿ ಬರ್ತಡೇ ಆಚರಿಸೋಣ ಅಂತ ನಿರ್ಧರಿಸಿದ್ದೆ. ಈ ವಿಡಿಯೋ ಮಾಡುವ ಯೋಚನೆ ಬಂತು. ಮನೆಯಲ್ಲಿ ಅತ್ತಿಗೆ ಕೇಕ್‌ ಮಾಡಿದರು. ಸಿಂಪಲ್‌ ಆಗಿ ಕೇಕ್‌ ಕತ್ತರಿಸಿ ಬತ್‌ರ್‍ಡೇ ಆಚರಿಸಿದೆವು’ ಎಂದು ರಿಷಬ್‌ ಶೆಟ್ಟಿಸಂಭ್ರಮ ಹಂಚಿಕೊಂಡರು.

ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್‌ ಬೆಡಗಿಯರಿವರು!

ಈ ವೀಡಿಯೋವನ್ನು ರಕ್ಷಿತ್‌ ಶೆಟ್ಟಿಸೇರಿ ಹಲವರು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡು, ರಣ್ವಿತ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

click me!