
ಅಭಿಮಾನಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯ ತಿಳಿಸಿದ್ದಾರೆ. ಪವರ್ ಸ್ಟಾರ್‌ನಿಂದ ಬರ್ತ್‌ಡೇ ವಿಶ್ ಪಡೆದ ಫ್ಯಾನ್ ಫುಲ್ ಖುಷ್
ಚಾಮರಾಜನಗರದ ಅಭಿಮಾನಿಯೊಬ್ಬರ ಹುಟ್ಟು ಹಬ್ಬಕ್ಕೆ ಪುನೀತ್ ರಾಜ್‌ಕುಮಾರ್ ವಾಟ್ಸಾಪ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಡಿಯೋ ಮಾಡಿ ಶುಭಾಶಯ ಕಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಫುಟ್‌ಬಾಲ್ ಆಡೋ ವಿಡಿಯೋ ವೈರಲ್!
ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ರಾಜ್ ಕುಟುಂಬದ ಅಭಿಮಾನಿ ಮಂಜು ರಾಜ ರತ್ನ ಅಪ್ಪು ಯುವ ಸೇನಾ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ನಗುತಾ ನಗುತಾ ಬಾಳು ನೀನು ನೂರು ವರ್ಷ ಎಂದೂ ಹೀಗೆ ಇರಲಿ ಇರಲಿ ಹರುಷ ಹರುಷ. ಹ್ಯಾಪಿ ಬರ್ತ್ ಡೇ ಮಂಜು god bless you and happiness, good helth, take care ಎಂದು ಪುನೀತ್ ವಿಶ್ ಮಾಡಿದ್ದಾರೆ.
ಪವರ್ ಸ್ಟಾರ್ ಹಿಂಭಾಲಿಸಿ ಅಪ್ಪು ಅಭಿಮಾನಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಿರ್ದೇಶಕರು ವಿಶ್ ಮಾಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಭಜರಂಗಿ ಹರ್ಷ, ರಾಮಚಾರಿ ನಿರ್ದೇಶಕ ಸಂತೋಷ್ ರಾಮ್, ಚೇತನ್ ಕುಮಾರ್ ಶುಭಾಶಯ ತಿಳಿಸಿದ್ದಾರೆ.
ಪವರ್ ಸ್ಟಾರ್ ಅಪ್ಪುಗೆಯ, ಸ್ಯಾಂಡಲ್ ವುಡ್ ಮಂದಿಯ ವಿಶ್ ಗೆ ಗಡಿ ಜಿಲ್ಲೆಯ ರಾಜ್ ಕುಟುಂಬದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಪ್ಪು ಬರ್ತ್ ಡೇ ವಿಶ್ ವೀಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.