
ಪ್ರತಿಭಾವಂತ ನಿರ್ದೇಶಕ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಟ ಪ್ರಭಾಸ್ ಅವರಿಗಾಗಿ ಸಲಾರ್ ಸಿನೆಮಾ ಮಾಡಿದ್ದರು. ಇದಾದ ಬಳಿಕ ಈಗ ಸಲಾರ್-2 ಸಿನೆಮಾಕ್ಕಾಗಿ ತಯಾರಿ ನಡೆಸುತ್ತಿರುವ ಮಧ್ಯೆಯೇ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯ ಆರಂಭವಾಗಿದೆ ಎಂದು ಸುದ್ದಿ ಹಬ್ಬಿದೆ.
'ಸಲಾರ್ 2' ಚಿತ್ರಕ್ಕಾಗಿ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಲಾಗುತ್ತಿದೆ. 2024 ರ ಕೊನೆಯಲ್ಲಿ ಇದರ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಈಗ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಮಧ್ಯೆ ಸ್ಕ್ರಿಪ್ಟ್ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಇಡೀ ಸೌತ್ ಸಿನಿ ಇಂಡಸ್ಟ್ರೀಯಲ್ಲಿ ಗುಲ್ಲೆದ್ದಿದೆ. ಇಬ್ಬರ ಮಧ್ಯೆ ಸಿನೆಮಾ ಕಥಾವಸ್ತು ಬಗ್ಗೆ ಒಮ್ಮತ ಮೂಡ ಕಾರಣ ಸಲಾರ್ 2 ಸಿನೆಮಾವನ್ನು ಕೈಬಿಡಲು ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ವೈರಲ್ ಆಗಿದೆ.
'ಸಲಾರ್ 2' ಕುರಿತಾದ ಈ ವರದಿಯು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ನಿರ್ಮಾಪಕರಿಗೂ ಈ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಲಾರ್ ಅಧಿಕೃತ ಖಾತೆಯಿಂದ ಒಂದು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ವದಂತಿಗಳನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರಶಾಂತ್ ಮತ್ತು ಪ್ರಭಾಸ್ ಇಬ್ಬರೂ ನಗುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ನಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ #ಪ್ರಭಾಸ್ #ಪ್ರಶಾಂತ್ ನೀಲ್ #ಸಲಾರ್ ಎಂದು ಬರೆಯಲಾಗಿದೆ. ಅಲ್ಲಿಗೆ ಇದು ವದಂತಿ ಎಂಬುದು ದೃಢವಾಗಿದೆ. ಅಭಿಮಾನಿಗಳು ಕೂಡ ಈ ಸುದ್ದಿ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.
'ಸಾಲಾರ್' ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಜಗಪತಿ ಬಾಬು, ಬಾಬಿ ಮುಖ್ಯ ಪಾತ್ರಗಳಲ್ಲಿದ್ದರು. ಸಿಂಹ, ಶ್ರೀಯಾ ರೆಡ್ಡಿ, ಜಾನ್ ವಿಜಯ್, ತಿನ್ನು ಆನಂದ್, ಈಶ್ವರಿ ರಾವ್, ಮತ್ತು ರಾಮಚಂದ್ರ ರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಲಾರ್ 2 ಭಾಗಕ್ಕೂ ರವಿ ಅವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.