
ಬೆಂಗಳೂರು(ಏ. 02) ಹಿರಿಯ ಬ್ಯಾನರ್ ಕಲಾವಿದ ಚಿನ್ನಪ್ಪ ಅವರ ಆರ್ಥಿಕ ಸಮಸ್ಯೆಯ ಬಗ್ಗೆ ವಿವರ ತಿಳಿದ ತಕ್ಷಣವೇ ಕನ್ನಡದ 'ಪವರ್'ಸ್ಟಾರ್' ಪುನೀತ್ ರಾಜಕುಮಾರ್ ಸ್ಪಂದಿಸಿದ್ದಾರೆ.
ಮೊನ್ನೆ ತಾನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ ಐವತ್ತು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಪುನೀತ್ ರಾಜಕುಮಾರ್ ಈಗ ಚಿನ್ನಪ್ಪ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿಗಳ ಸಹಾಯ ನೀಡಿ ಔದಾರ್ಯ ಮೆರೆದಿದ್ದಾರೆ.
ಕೊರೋನಾ ಸಂಕಷ್ಟಕ್ಕೆ ಪುನೀತ್ ದೊಡ್ಡ ದೇಣಿಗೆ
ಡಾ. ರಾಜ್ ಕುಮಾರ್ ಕುಟುಂಬ ಹಿಂದಿನಿಂದಲೂ ನೊಂದವರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ. ಶಿವಣ್ಣ 28 ಲಕ್ಷ ರೂ. ನೀಡಿ ಕೈದಿಗಳ ಬಿಡಗುಡೆ ಮಾಡಿಸಿದ್ದನ್ನು ಯಾರೂ ಮರೆತಿಲ್ಲ. ಇದೀಗ ಪುನೀತ್ ರಾಜ್ ಕುಮಾರ್ ಮನ ಮಿಡಿದಿದ್ದಾರೆ. ನೊಂದವರ ನೆರವಿಗೆ ಧಾವಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.