
'ಓರು ಆಡಾರ್ ಲವ್' ಚಿತ್ರದ ಟ್ರೈಲರ್ ಮೂಲಕ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಮಾಲಿವುಡ್ ಬೆಡಗಿ ಪ್ರಿಯಾ ವಾರಿಯರ್. ಈಗ ಕನ್ನಡ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಅದುವೇ ವಿಷ್ಣುಪ್ರಿಯಾ ಚಿತ್ರದ ಮೂಲಕ.
ಹೌದು! 'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜರ್ನಿ ಆರಂಭಿಸಿ ಶ್ರೇಯಸ್ ಮಂಜುಗೆ ಜೋಡಿಯಾಗಿ ಪ್ರಿಯಾ ಮಿಂಚಲಿದ್ದಾರೆ. ವಿಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಲಿದ್ದು, ಕೆ.ಮಂಜು ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದ ಅಫೀಶಿಯಲ್ ಪೋಸ್ಟರ್ ಅನ್ನು ಏಪ್ರಿಲ್ 5ರಂದು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಇದಕ್ಕೆ ಸಾಥ್ ನೀಡಿ ಪ್ರೋತ್ಸಾಯಿಸಬೇಕೆಂದು ಪ್ರಿಯಾ ವಾರಿಯರ್ ಇನ್‌ಸ್ಟಾಗ್ರಾಂನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟ್ಯಾಟೂ ಮೂಲಕ ಗಮನ ಸೆಳೆಯುತ್ತಿದ್ದಾರೆ ಪ್ರಿಯಾ ವಾರಿಯರ್
'ನನ್ನ ಎಲ್ಲಾ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ಪ್ರಿಯಾ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ 'ವಿಷ್ಣುಪ್ರಿಯ'ದ ಫರ್ಸ್ಟ್ ಲುಕ್ ಏಪ್ರಿಲ್ 5ಕ್ಕೆ ಬಿಡುಗಡೆ ಆಗಲಿದೆ. ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್ ಮಾಡಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಸಿನಿಮಾ ತಂಡದ ಮೇಲೆ ಇರಲಿ...' ಎಂದು ಬರೆದು ಕೊಂಡಿದ್ದಾರೆ.
ಸಿನಿಮಾ ವಿಚಾರ ಮಾತ್ರ ಕನ್ನಡದಲ್ಲಿದೆ. ಆದರೆ ಕೊರೋನಾ ವೈರಸ್ ಬಗ್ಗೆ ಕಾಳಜಿ ವಹಿಸಿ ಎಂದು ಕರ್ನಾಟಕದ ಜನತೆಗೆ ಯಾಕೆ ನೀವು ಹೇಳಿಲ್ಲ, ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಈ ಹಿಂದೆ ಒಕ್ಕಲಿಗ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾ ಪ್ರಕಾಶ್ ವಿರುದ್ಧ ನವರಸ ನಾಯಕ ಜಗ್ಗೇಶ್ ಕೂಡ ಗರಂ ಆಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಮಿಂಚಲು ಹಾಗೂ ಹೆಸರು ಮಾಡಲು ಬರುವ ಪರ ಭಾಷಾ ನಟ-ನಟಿಯರು ಕನ್ನಡ ಸಿನಿ ಪ್ರೇಮಿಗಳು ಎಂದೂ ಕೈ ಬಿಟ್ಟಿಲ್ಲ. ಆದರೆ, ಕರುನಾಡ ಸಂಸ್ಕೃತಿ ಹಾಗೂ ಭಾಷೆಗೆ ಅನ್ಯ ಭಾಷೆಯರು ಹೊಂದಿಕೊಳ್ಳಲಿ ಎಂಬುವುದು ಕನ್ನಡಿಗರ ಆಶ್ಚಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.