ಜೀವ ಇರುವವರೆಗೂ ನನ್ನ ಹೆಸರು ಬುಲ್ ಬುಲ್, ದರ್ಶನ್ ಅಭಿಮಾನಿಗಳಿಗೆ ಬಗ್ಗಿ ನಮಸ್ಕರಿಸಿದ ರಚಿತಾ ರಾಮ್

Published : Mar 12, 2025, 01:49 PM ISTUpdated : Mar 12, 2025, 03:11 PM IST
ಜೀವ ಇರುವವರೆಗೂ ನನ್ನ ಹೆಸರು ಬುಲ್ ಬುಲ್, ದರ್ಶನ್ ಅಭಿಮಾನಿಗಳಿಗೆ ಬಗ್ಗಿ ನಮಸ್ಕರಿಸಿದ ರಚಿತಾ ರಾಮ್

ಸಾರಾಂಶ

ನಟಿ ರಚಿತಾ ರಾಮ್ 'ಬುಲ್ ಬುಲ್' ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಝೀ ಕನ್ನಡದ ಕಾರ್ಯಕ್ರಮದಲ್ಲಿ, ಈ ಹೆಸರಿನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 2013ರಲ್ಲಿ ತೆರೆಕಂಡ 'ಬುಲ್ ಬುಲ್' ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದ್ದು, ಆ ಚಿತ್ರದ ಹೆಸರು ತಮಗೆ ಬಹಳ ಇಷ್ಟವೆಂದಿದ್ದಾರೆ. ದರ್ಶನ್ ಮತ್ತು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಜನರು ತಮ್ಮನ್ನು 'ಬುಲ್ ಬುಲ್' ಎಂದು ಕರೆಯುವುದಕ್ಕೆ ಸಂತೋಷವಿದೆ ಎಂದು ಹೇಳಿದ್ದಾರೆ.

ಬುಲ್ ಬುಲ್ ನಟಿ (Bulbul actress) ಎಂದೇ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Sandalwood dimple queen Rachita Ram) ಪ್ರಸಿದ್ಧಿ ಪಡೆದಿದ್ದಾರೆ. ರಚಿತಾ ರಾಮ್ ಗೆ ಈ ಬುಲ್ ಬುಲ್ ಹೆಸರು ತುಂಬಾ ಇಷ್ಟ. ಝೀ ಕನ್ನಡ ರಿಯಾಲಿಟಿ ಶೋನಲ್ಲಿ ಈ ಬಗ್ಗೆ ರಚಿತಾ ರಾಮ್ ಮನ ಬಿಚ್ಚಿ ಮಾತನಾಡಿದ್ದಾರೆ. ನನಗೆ ಬುಲ್ ಬುಲ್ ಅಂತ ಕರೆದ್ರೆ ಖುಷಿಯಾಗುತ್ತೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 (Bharjari Bachelors Season 2) ನ ಜಡ್ಜ್ ಆಗಿರುವ ರಚಿತಾ ರಾಮ್, ಬುಲ್ ಬುಲ್ ಸಿನಿಮಾ ಹಾಗೂ ಅದ್ರ ಬಗ್ಗೆ ದರ್ಶನ್ ಅಭಿಪ್ರಾಯ, ಬುಲ್ ಬುಲ್ ಹೆಸರಿನ ಮೇಲೆ ತಮಗಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.  ಬುಲ್ ಬುಲ್ ಸಿನಿಮಾ ಮೇ. 10, 2013ರಲ್ಲಿ ತೆರೆಗೆ ಬಂದಿತ್ತು. ಇದ್ರಲ್ಲಿ ದರ್ಶನ್, ಅಂಬರೀಷ್, ರಚಿತಾ ರಾಮ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ರೋಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸಿದ್ದರು. 2013ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದ ಚಿತ್ರ ಬುಲ್ ಬುಲ್. ಅರಸಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ರಚಿತಾ ರಾಮ್ ಅವರ ಮೊದಲ ಸಿನಿಮಾ ಬುಲ್ ಬುಲ್. ಮೊದಲ ಚಿತ್ರದಲ್ಲೇ ಹೆಸರು ಮಾಡಿದ್ದ ರಚಿತಾ ರಾಮ್ ನಂತ್ರ ತಿರುಗಿ ನೋಡ್ಲಿಲ್ಲ. 

ಸೌಂದರ್ಯಳದ್ದು ಕೊಲೆ ಎಂದು ದೂರು ಕೊಟ್ಟ ಚಿಟ್ಟಿಮಲ್ಲು ಹಾಗೂ ನಟಿಗೆ ಇದ್ದ ಸಂಬಂಧವೇನು?

ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಭರ್ಜರಿ ಬ್ಯಾಜ್ಯುಲರ್ ಸೀಸನ್ 2ನಲ್ಲಿ ರಕ್ಷಕ್ ಬುಲೆಟ್, ದರ್ಶನ್ ಬುಲ್ ಬುಲ್ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ರಕ್ಷಕ್ ಬುಲೆಟ್ ಗೆ ರಮೋಲಾ ಸಾಥ್ ನೀಡಿದ್ದರು. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ನೋಡಿದಂಗೆ ಆಯ್ತು ಎನ್ನುತ್ತಲೇ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ದರ್ಶನ್ ಸೇರಿದಂತೆ ಬುಲ್ ಬುಲ್ ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಚಿತಾ ರಾಮ್, ದರ್ಶನ್ ಎಲ್ಲ ಸಿನಿಮಾಗಳೂ ಹೀರೋ ಬೇಸ್ ಹೆಸರುಗಳಿರುತ್ತವೆ. ಆದ್ರೆ ಫಸ್ಟ್ ಟೈಂ ಹಿರೋಯಿನ್ ಬೇಸ್ ಟೈಟಲನ್ನು ಬುಲ್ ಬುಲ್ ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ರಾಮ್ ಹೇಳಿಕೊಂಡಿದ್ದಾರೆ. ಬುಲ್ ಬುಲ್ ಹೆಸರಿನಿಂದಲೇ ನಾನು ಪ್ರಸಿದ್ಧಿ ಪಡೆದಿದ್ದೇನೆ. ನನ್ನನ್ನು ಸಿನಿಮಾ ಬಂದ ಕೆಲ ವರ್ಷ ಮಾತ್ರವಲ್ಲ ಈಗ್ಲೂ ಬುಲ್ ಬುಲ್ ಅಂತಾನೆ ಜನ ಕರೆಯುತ್ತಾರೆ. ನಾನು ಇರೋವರೆಗೂ, ನನ್ನ ಉಸಿರಿರುವವರೆಗೂ ನನ್ನನ್ನು ಬುಲ್ ಬುಲ್ ಅಂತ ಕರೆದ್ರೆ ನನಗೆ ಖುಷಿ ಎಂದು ರಚಿತಾ ಇದೇ ವೇಳೆ ಹೇಳಿದ್ದಾರೆ. ದರ್ಶನ್, ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರಚಿತಾ ರಾಮ್, ನಮಸ್ಕಾರ ಮಾಡಿ ತಮ್ಮ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ರಚಿತಾ ಭಾವುಕರಾಗಿದ್ದನ್ನು ನೋಡ್ಬಹುದು. 

ಕನ್ಯತ್ವ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟ ಹುಡುಗಿಗೆ ಸಿಕ್ಕಿದ ಹಣ ಎಷ್ಟು ನೋಡಿ! ʼಒಂದು ಚರ್ಮದ

ಬುಲ್ ಬುಲ್ ನಂತ್ರ ರಚಿತಾ ರಾಮ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿಲ್ ರಂಗೀಲಾ, ಅಂಬರೀಶಾ, ನಟ ಸಾರ್ವಭೌಮ, ಕಲ್ಟ್ ಹೀಗೆ ಸಾಕಷ್ಟು ಸಿನಿಮಾದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಸದ್ಯ ರಿಯಾಲಿಟಿ ಶೋ ಜೊತೆ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್, ಕಲ್ಟ್ ಸಿನಿಮಾ ಸಂಭಾವನೆಗೂ ಸುದ್ದಿ ಮಾಡಿದ್ದರು. ಅವರು ಈ ಸಿನಿಮಾದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ರಚಿತಾ ರಾಮ್, ಸಂಜು ವೆಡ್ಸ್ ಗೀತಾ 2, ಅಯೋಗ್ಯ 2ದಲ್ಲಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!