
ನಟ ದರ್ಶನ್ (Darshan Thoogudeepa) ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದ್ದಾರೆ. ಕಾರಣ, ಈ ಭಾರಿ ಅವರು ತಮ್ಮ ಆಪ್ತರನ್ನೇ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ಸುದ್ದೀಯೀಗ ಭಾರಿ ಸಂಚಲನ ಸೃಷ್ಟಿಸಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಸಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಅವಿವಾ ಅಭಿಷೇಕ್ ಮಾತ್ರವಲ್ಲ, ಸ್ವಂತ ತಮ್ಮ ದಿನಕರ್ ಹಾಗು ಮಗ ವಿನೀಶ್ ಅವರನ್ನು ಕೂಡ ಅನ್‌ಫಾಲೋ ಮಾಡಿದ್ದಾರೆ ನಟ ದರ್ಶನ್. ಈ ಕಾರ್ಯದ ಹಿಂದೆ ಖಂಡಿತವಾಗಿಯೂ ಬಲವಾದ ಕಾರಣವಿದೆ. ಅದೇನು ಅಂತ ಊಹಿಸಬಲ್ಲಿರಾ?
ಗೆಸ್ ಮಾಡುವುದು ಅಷ್ಟು ಸುಲಭವಲ್ಲ. ಕಾರಣ, ಈ ಅನ್‌ಫಾಲೋ ಮಾಡಿದ್ದು ಸ್ವತಃ ನಟ ದರ್ಶನ್ ಅವರೋ ಅಥವಾ ಪತ್ನಿ ವಿಜಯಲಕ್ಷ್ಮೀ ಅವರೋ? ಅಂದ್ರೆ, ದರ್ಶನ್ ಇನ್‌ಸ್ಟಾಗ್ರಾಂ ಅನ್ನು ಅವರ ಪತ್ನಿಯೇ ಹ್ಯಾಂಡಲ್ ಮಾಡುತ್ತಾರೆ ಅಂತೇನೂ ಅಲ್ಲ. ಆದರೆ, ವಿಜಯಲಕ್ಷ್ಮೀ ಸಜೆಶನ್ ಮೇಲೆ ನಟ ದರ್ಶನ್ ಅವರು ಅವರನ್ನೆಲ್ಲಾ ಅನ್‌ಫಾಲೋ ಮಾಡಿರಬಹುದಾ ಎಂಬ ಚರ್ಚೆ ತುಂಬಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅದು ಹೌದೋ ಅಲ್ಲವೋ ಯಾರಿಗೂ ಗೊತ್ತಿಲ್ಲ! ಕಾರಣ, ಅದು ಗೊತ್ತಿರುವುದು ಸ್ವತಃ ದರ್ಶನ್ & ವಿಜಯಲಕ್ಷ್ಮೀಗೆ ಮಾತ್ರ!
ಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?
ಆದರೆ, ಯಾಕೆ ಈ ಚರ್ಚೆಯೀಗ ಹುಟ್ಟಿಕೊಂಡಿದೆ ಎಂದರೆ, ಅದಕ್ಕೂ ಬಲವಾದ ಕಾರಣವಿದೆ. ಇತ್ತೀಚೆಗಷ್ಟೇ ನಟ 'ದರ್ಶನ್ ಅವರ ಮ್ಯಾನೇಜರ್ ಇರಲ್ಲ, ಸಿನಿಮಾ ಸೇರಿದಂತೆ ನಟ ದರ್ಶನ್ ಅವರ ಪರ್ಸನಲ್ ಭೇಟಿಗೂ ಕೂಡ ವಿಜಯಲಕ್ಷ್ಮೀ ಅವರೇ ಅಪಾಯಿಂಟ್‌ಮೆಂಟ್ ಕೊಡಬೇಕು. ಅಥವಾ, ದರ್ಶನ್ ತಮ್ಮ ದಿನಕರ್ ಕೇಳಬೇಕು ಎಂದು ಸುದ್ದಿಯಾಗಿತ್ತು. ಅದೇ ಹಿನ್ನೆಲೆಯಲ್ಲಿ ಈ ಡಿಬೇಟ್ ಹುಟ್ಟಿಕೊಂಡಿರಬಹುದು. ಆದರೆ, ಈ ಬಗ್ಗೆ ಯಾರಿಗೂ ಕ್ಲಾರಿಟಿ ಇಲ್ಲ, ಇದು ಜಸ್ಟ್ ಡೌಟ್ ಅಷ್ಟೇ!
ಅದೇನೇ ಆಗಿರಲಿ, ಒಮ್ಮೆಲೇ ನಟ ದರ್ಶನ್ ಅವರ ಅತ್ಯಾಪ್ತರನ್ನೆಲ್ಲಾ ದರ್ಶನ್ ಇನ್‌ಸ್ಟಾಗ್ರಾಂನಿಂದ ಆಚೆ ಇಟ್ಟಿದ್ದಾರೆ ಎಂದರೆ, ಅದರಲ್ಲೇನೋ ವಿಶೇಷವಿದೆ ಖಂಡಿತ. ಅದನ್ನು ಸ್ಟ್ರಾಟಜಿ ಎಂಬ ಪದದಲ್ಲಿ ಕರೆದರೆ ತಪ್ಪಾಗಬಹುದು. ಆದರೆ, ಈ ಕೆಲಸದ ಹಿಂದೆ ಖಂಡಿತ ಬಲವಾದ ಉದ್ದೇಶವಂತೂ ಇದೆ ಎಂಬುದು ಹಲವರ ಅಭಿಮತ. ಏಕೆಂದರೆ, ನಟ ದರ್ಶನ್ ಅವರು ಸುಮಲತಾ ಅವರನ್ನು 'ಅಮ್ಮ' ಎಂದೇ ಕರೆಯುತ್ತಿದ್ದರು, ಅದೇ ರೀತಿ ನಡೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಅವರನ್ನು ಹೊರಗಡೆ 'ಮದರ್ ಇಂಡಿಯಾ' ಎಂದು ಹೇಳುತ್ತಿದ್ದರು. ಜೊತೆಗೆ, ಸ್ನೇಹಿತ ಅಭಿಷೇಕ್, ತಮ್ಮ ಹಾಗೂ ಮಗನನ್ನೂ ಕೂಡ ಇನ್‌ಸ್ಟಾಗ್ರಾಂದಿಂದ ಹೊರಹಾಕಿದ್ದು ಯಾಕೆ?
ಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!
ಹಲವರ ಪಾಲಿಗೆ ಇದೊಂದು ಯಕ್ಷಪ್ರಶ್ನೆಯೇ ಸರಿ..! ಆದರೆ, ಇದಕ್ಕೆ ಮುಂದೊಂದು ದಿನ ಖಂಡಿತ ಉತ್ತರ ಸಿಗುತ್ತೆ, ಕಾಯಬೇಕು ಅಷ್ಟೇ. ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗೆ ಇರುವ ನಟ ದರ್ಶನ್ ಈಗ ಇಡುವ ಒಂದೊಂದು ಹೆಜ್ಜೆ ಕೂಡ ಬಹಳಷ್ಟು ಮುಖ್ಯ ಆಗಿರುತ್ತದೆ. ಈ ಕಾರಣದಿಂದ ಈ ಹೆಜ್ಜೆಯ ಹಿಂದೆ ಕೂಡ ಏನೋ ಪ್ಲಾನ್ ಇದ್ದೇ ಇದೆ, ಕಾದು ನೋಡಬೇಕಷ್ಟೇ...!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.