ಕಾಡಿನ ಮಕ್ಕಳಿಗೆ ಶಿಕ್ಷಣದ ಕಂಪು: ಶಾಲೆ ದತ್ತು ಪಡೆದ ಕಿಚ್ಚ

By Suvarna NewsFirst Published Aug 9, 2020, 10:42 AM IST
Highlights

ಕಾಡಿನ ಮಕ್ಕಳಿಗೆ ಅಕ್ಷರ ಕಂಪು ತಲುಪಿಸೋಕೆ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಸಿದ್ಧರಾಗಿದ್ದಾರೆ. ಸಾಗರದ ಬಳಿಯ ಚಿಕ್ಕ ಹಳ್ಳಿಯೊಂದರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಕಾಡಿನ ಮಕ್ಕಳಿಗೆ ಅಕ್ಷರ ಕಂಪು ತಲುಪಿಸೋಕೆ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಸಿದ್ಧರಾಗಿದ್ದಾರೆ. ಸಾಗರದ ಬಳಿಯ ಚಿಕ್ಕ ಹಳ್ಳಿಯೊಂದರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಕಾಡಿನಲ್ಲಿರೋ ಶಾಲೆಯ ಮಕ್ಕಳಿಗೆ ಅಕ್ಷರ ಜ್ಞಾನ ಕೊಡಿಸಲು ಕಿಚ್ಚ ನಿರ್ಧರಿಸಿದ್ದು, .ಕಿಚ್ಚ ಟ್ರಸ್ಟ್ ವತಿಯಿಂದ ಕಾಡಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲು ನಿರ್ಧರಿಸಲಾಗಿದೆ. ಸಾಗರ ಬಳಿ ಇರೋ ಆವಿಗೆ ಹಳ್ಳಿಯ ಶಾಲೆಯನ್ನು ನಟ ಸುದೀಪ್ ದತ್ತು ಪಡೆದುಕೊಂಡಿದ್ದಾರೆ.

3 ವರ್ಷಗಳಿಂದ ಕತ್ತಲಲ್ಲಿದ್ದ ಹಿರಿ ಜೀವಗಳಿಗೆ ಬೆಳಕಾದ ಕಿಚ್ಚ ಸುದೀಪ್‌!

ಓದಲು ಪ್ರತಿದಿನ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡೋ ಮಕ್ಕಳು ಶಿಕ್ಷಣಕ್ಕಾಗಿ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ಅ ಇಡೀ ಗ್ರಾಮಕ್ಕೆ ಭಾಸ್ಕರ ಎಂಬ ಒಬ್ಬನೇ ವಿದ್ಯಾರ್ಥಿ ಡಿಗ್ರೀ ಓದಿದ್ದು, ಇಬ್ಬರು ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

'ಹುಚ್ಚ' ವೇಳೆ ಕಿಚ್ಚ ಹಾಡಿದ್ದ ಹಾಡು.. ಬಲು ಅಪರೂಪದ ವಿಡಿಯೋ!

ಮರಾಠಿ ಮಿಶ್ರಿತ ಕನ್ನಡ ಮಾತಾನಾಡುವ ಮಕ್ಕಳ ವಿದ್ಯಾಭ್ಯಾಸಕ್ಕೆ ಕಿಚ್ಚ ನೆರವಿನ ಹಸ್ತ ಚಾಚಿದ್ದಾರೆ. ಚಂದ್ರಪ್ಪ ಎಂಬವರು ಆವಿಗೆ ಮತ್ತು ಹಾಳಸಸಿ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್, ಪೇಯಿಂಟ್ ಕಲಿಕೆಗೂ ಒತ್ತು ನೀಡಲು ನಿರ್ಧರಿಸಲಾಗಿದ್ದು, ಒಟ್ಟು 30 ಜನ ಮಕ್ಕಳಿದ್ದಾರೆ.

click me!