ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ; ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ಯಾಕೆ?

By Shriram Bhat  |  First Published Feb 17, 2024, 7:39 PM IST

ನಿಮಗೆ ಹೇಳಿದರೆ ಅರ್ಥವಾಗಲ್ಲ. ನಾನು ಶೂಟಿಂಗ್‌ನಲ್ಲಿ ಇರೋದಕ್ಕಿಂತ ಹೆಚ್ಚು ಬ್ಯುಸಿಯಾಗಿದೀನಿ. ಈಗ ಬೇರೆ ತರನೇ ಕೆಲಸ ನಡಿತಿದೆ. ಫ್ರೀಯಾಗಂತೂ ಕೂತಿಲ್ಲ, ಸಿಕ್ಕಾಪಟ್ಟೆ ಕೆಲಸ ಇದೆ. ಕೆಲಸ ಮುಗೀತು ಅಂದ್ರೆ ಮನೆಗೆ ಹೋಗಿ ಫ್ಯಾಮಿಲಿ ಜತೆ ಕಾಲ ಕಳಿತೀನಿ..


ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ವ್ಯಾಲೆಂಟೈನ್ಸ್ ಡೇ ದಿನ ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ವೇದಿಕೆ ಮೇಲೆ ನೆನಪಿರಲಿ ಪ್ರೇಮ್, ಅಜಯ್ ರಾವ್ ಸೇರಿದಂತೆ ಹಲವು ನಟರು ಜತೆಗೂಡಿದ್ದಾರೆ. ಪ್ರೆಸ್‌ಮೀಟ್ ನಲ್ಲಿ ಕೇಳಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟ ಯಶ್ ಅವರು 'ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ' ಎಂದಿದ್ದಾರೆ. ಯಶ್ ಮಾತು ಕೇಳಿದ ಎಲ್ಲರೂ ನಕ್ಕಿದ್ದಾರೆ. ಹಾಗಿದ್ದರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಯಾಕೆ ಹಾಗೆ ಹೇಳಿದ್ದಾರೆ? ಇದಕ್ಕೆ ಉತ್ತರ ಬೇಕಾದರೆ ಮುಂದೆ ಇದೆ ನೋಡಿ!

ನಟ ಯಶ್ ಅವರಿಗೆ ಹಲವು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರವಾಗಿ ನಟ ಯಶ್ 'ನಿಮಗೆ ಹೇಳಿದರೆ ಅರ್ಥವಾಗಲ್ಲ. ನಾನು ಶೂಟಿಂಗ್‌ನಲ್ಲಿ ಇರೋದಕ್ಕಿಂತ ಹೆಚ್ಚು ಬ್ಯುಸಿಯಾಗಿದೀನಿ. ಈಗ ಬೇರೆ ತರನೇ ಕೆಲಸ ನಡಿತಿದೆ. ಫ್ರೀಯಾಗಂತೂ ಕೂತಿಲ್ಲ, ಸಿಕ್ಕಾಪಟ್ಟೆ ಕೆಲಸ ಇದೆ. ಕೆಲಸ ಮುಗೀತು ಅಂದ್ರೆ ಮನೆಗೆ ಹೋಗಿ ಫ್ಯಾಮಿಲಿ ಜತೆ ಕಾಲ ಕಳಿತೀನಿ' ಎಂದಿದ್ದಾರೆ ನಟ ಯಶ್. ವೈರಲ್ ಆಗುತ್ತಿರುವ ಕಟ್ ಆಗಿರುವ ವೀಡಿಯೋದಲ್ಲಿ ಕೇಳಿದ್ದ ಪ್ರಶ್ನೆಯೇನಿತ್ತು ಎಂಬುದು ತಿಳಿಯುತ್ತಿಲ್ಲ. 

Tap to resize

Latest Videos

ತಾಯಿ ಸಮಾನಳಾದ ಅಕ್ಕ ಮಾಡು ಅಂದ್ರು, ಒಪ್ಪಿ ನಟಿಸಿದೆ; ಗುಟ್ಟು ಬಿಚ್ಚಿಟ್ಟ ಅಗ್ನಿ ಶ್ರೀಧರ್

ಇನ್ನೊಂದು ಪ್ರಶ್ನೆ 'ಇವತ್ತು ವ್ಯಾಲಂಟೈನ್ಸ್ ಡೇ, ಮೇಡಮ್‌ನ ಎಲ್ಲಾದ್ರೂ ಕರ್ಕೊಂಡು ಹೋಗಿದ್ರಾ ಎಂಬ ಪ್ರಶ್ನೆಗೆ ಯಶ್ ಉತ್ತರಿಸುವ ಮೊದಲೇ, ಮೇಲಕೋಟೆ ಘಟನೆಯೊಂದನ್ನು ಹೇಳುತ್ತ, ಪ್ರಶ್ನೆ ಕೇಲಲು ಅದಕ್ಕೆ ಉತ್ತರವಾಗಿ ಯಶ್ ಅವರು 'ಇಲ್ಲ, ಪಾರ್ಟಿಗೆ ಹೋಗ್ತಾ ಇದೀನಿ ಅಂತ ಮನೆಲ್ಲಿ ಹೇಳ್ಬಿಟ್ಟೇ ಬಂದಿದೀನಿ' ಎಂದಿರುವ ಯಶ್ ಮುಂದುವರೆದು 'ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ' ಎಂದಿದ್ದಾರೆ. ಅಲ್ಲಿದ್ದವರ ನಗುವಿನ ಅಲೆ ಯಶ್ ಮಾತಿಗೆ ಚಪ್ಪಾಳೆಯಂತೆ ತಾಳ ಹಾಕಿದೆ ಎನ್ನಬಹುದು. 

ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ರವಿಶಂಕರ್ ಗುರೂಜಿ ಬಗ್ಗೆ ಹೇಳಿದ್ರಾ ಅಗ್ನಿ ಶ್ರೀಧರ್!?

ಬಳಿಕ, ಮುಂಬರುವ ಟಾಕ್ಸಿಕ್ ಸಿನಿಮಾದಲ್ಲಿ ನಟನೆಗೆ ಸೂಕ್ತವಾಗುವಂತೆ ಬಾಡಿ ಬಿಲ್ಡ್‌ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಯಶ್ ಸೀಕ್ರೆಟ್ ಬಿಟ್ಟು ಕೊಡದೇ, 'ಅದನ್ನು ಹೇಳೋದಕ್ಕೆ ಇದು ಸಮಯವಲ್ಲ. ಆದರೆ, ಸಿನಿಮಾ ಪಾತ್ರಕ್ಕೆ ತಕ್ಕಂತೆ ಬಾಡಿ ಶೇಪ್ ಮಾಡಲೇಬೇಕಲ್ಲ' ಎಂದು ಹೇಳಿ, ಯಾವ ರೀತಿ ಪಾತ್ರ, ಯಾವ  ರೀತಿಯ ಬಾಡಿ ಬೇಕು ಎಂಬ ಗುಟ್ಟನ್ನು ರಟ್ಟು ಮಾಡದೇ ಸುಮ್ಮನಾಗಿದ್ದಾರೆ. ಒಟ್ಟಿನಲ್ಲಿ, ಇದೀಗ ಎಲ್ಲರ ಚಿತ್ತ ಯಶ್ ನಟನೆಯ ಮುಂಬರುವ 'ಟಾಕ್ಸಿಕ್' ಚಿತ್ರದ ಮೇಲೆ ನೆಟ್ಟಿದೆ.

ಅಗ್ನಿ ಶ್ರೀಧರ್ 'ಕ್ರೀಂ' ನೈಜ ಕಥೆಯ ಸಿನಿಮಾ; ರಾಜಕೀಯದಲ್ಲೂ ಸೃಷ್ಟಿಸಲಿದೆಯಾ ಅಲ್ಲೋಲಕಲ್ಲೋಲ..!?

click me!