ಮದುವೆಯೇ ಜೀವನವಲ್ಲ ಎಂದಿದ್ದ 'ಮಾಣಿಕ್ಯ' ನಟಿ ಸದ್ದಿಲ್ಲದೇ ನಿಶ್ಚಿತಾರ್ಥ: 18 ವರ್ಷದ ಪ್ರೀತಿಗೆ ಮದುವೆಯ ಬಂಧ!

Published : Mar 03, 2024, 05:37 PM IST
ಮದುವೆಯೇ ಜೀವನವಲ್ಲ ಎಂದಿದ್ದ 'ಮಾಣಿಕ್ಯ' ನಟಿ ಸದ್ದಿಲ್ಲದೇ ನಿಶ್ಚಿತಾರ್ಥ: 18 ವರ್ಷದ ಪ್ರೀತಿಗೆ ಮದುವೆಯ ಬಂಧ!

ಸಾರಾಂಶ

 ಮದುವೆಯೇ ಜೀವನವಲ್ಲ ಎಂದಿದ್ದ 'ಮಾಣಿಕ್ಯ' ನಟಿ ವರಲಕ್ಷ್ಮಿ ಶರತ್​ಕುಮಾರ್​ ನಿಶ್ಚಿತಾರ್ಥ ಸದ್ದಿಲ್ಲದೇ ನಡೆದಿದೆ. 18 ವರ್ಷ ಪ್ರೀತಿಸಿದ ಯುವಕನ ಜೊತೆ ಶೀಘ್ರದಲ್ಲಿಯೇ ಮದುವೆಯಾಗಲಿದೆ.   

ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವರಲಕ್ಷ್ಮಿ ಶರತ್​ಕುಮಾರ್ ಅವರ ನಿಶ್ಚಿತಾರ್ಥ ಸದ್ದಿಲ್ಲದೇ ನಡೆದಿದೆ. ತಮಿಳಿನ ಖ್ಯಾತ ನಟ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್​ಕುಮಾರ್ ಅವರ ಮಗಳು ವರಲಕ್ಷ್ಮಿ ಶರತ್ ಕುಮಾರ್ ಅವರ ನಿಶ್ಚಿತಾರ್ಥ ಆಪ್ತರ ಸಮ್ಮುಖದಲ್ಲಿ ಯಾವುದೇ ಸದ್ದಿಲ್ಲದೇ ಸರಳವಾಗಿ ನೆರವೇರಿದ್ದು, ಅದರ ಫೋಟೋಗಳು ವೈರಲ್​ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ. ತಮ್ಮ ಬಹುಕಾಲದ ಗೆಳೆಯ  ನಿಖೋಲಯ್ ಸಚ್​ದೇವ್ ಜೊತೆಗೆ ವರಲಕ್ಷ್ಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಮುಂಬೈನಲ್ಲಿ ಈ ಸಂಭ್ರಮ ನಡೆದಿದ್ದು, ಫೋಟೋಗಳನ್ನು  ನಟಿ ವರಲಕ್ಷ್ಮಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ  ನಿಖೋಲಯ್ ಸಚ್​ದೇವ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್  14 ವರ್ಷಗಳಿಂದಲೂ ಪರಿಚಿತರಾಗಿದ್ದು, ಸುದೀರ್ಘ ಗೆಳೆತನದ ಬಳಿಕ ಮದುವೆಯ ಮುದ್ರೆ ಬಿದ್ದಿದೆ.  ಅಷ್ಟಕ್ಕೂ ವರಲಕ್ಷ್ಮಿ ಮತ್ತು ಬೆಂಗಳೂರಿಗೆ ಬಹಳ ನಂಟಿದೆ. ಏಕೆಂದರೆ ಈಕೆ ಹುಟ್ಟಿದ್ದು ಬೆಂಗಳೂರಿನಲ್ಲಿ. ಕನ್ನಡದಲ್ಲಿ ಮಾಣಿಕ್ಯ ಮತ್ತು ರನ್ನ ಚಿತ್ರದಲ್ಲಿ ಕಾಣಿಸಿಕೊಂಡರೂ, ಬೇರೆ ಭಾಷೆಗಳಲ್ಲಿ ಇವರು ಹೆಸರು ಮಾಡಿದ್ದಾರೆ. ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಹನುಮಾನ್’ನಲ್ಲಿ ವರಲಕ್ಷ್ಮಿ ಶರತ್​ಕುಮಾರ್ ನಟಿಸಿದ್ದಾರೆ. ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವರು ಇತ್ತೀಚೆಗೆ ಧನುಷ್ ಅವರ ತಮಿಳು ಚಿತ್ರ ರಾಯನ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಶಬರಿ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ಕಲರ್ಸ್ ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇವರು ತೆಲುಗು ಹುಡುಗಿ. ಸತತ ತೆಲುಗು ಚಿತ್ರಗಳೊಂದಿಗೆ ಯಶಸ್ಸು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್​ನಲ್ಲಿ ಸ್ಟಾರ್ ಇಮೇಜ್ ಪಡೆದಿದ್ದಾರೆ. ತಮಗೆ ಮ್ಯಾಚ್‌ ಆಗುವಂತೆ ಕಂಟೆಂಟ್‌ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ.  

ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಮದುಮಕ್ಕಳು: ತೆರೆ ಮೆರೆ ಪ್ಯಾರ್​ಕೆ ಹಾಡಿಗೆ ಭರ್ಜರಿ ಸ್ಟೆಪ್​

 ತಮ್ಮ ಅದ್ಭುತ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟಿ ವೀರಸಿಂಹ ರೆಡ್ಡಿ ಚಿತ್ರದಿಂದ ತೆಲುಗು ಪ್ರೇಕ್ಷರ ಮನೆ ಮಾತಾದರು. ಅಲ್ಲದೇ ಈ ಸಿನಿಮಾ ಆಕೆಯ ವೃತ್ತಿ ಬದುಕಿನಲ್ಲಿ ದೊಡ್ಡ ತಿರುವು ನೀಡಿತು. ಇನ್ನು ಮದುಮಗನ ಕುರಿತು ಹೇಳುವುದಾದರೆ,  ನಿಖೋಲಯ್ ಸಚ್​ದೇವ್ ಮುಂಬೈನಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದಾರೆ. ಇವರು ಉದ್ಯಮಿಯೂ ಹೌದು ಎನ್ನಲಾಗಿದೆ.  ಈ ವರ್ಷದ ಕೊನೆಯಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ವರಲಕ್ಷ್ಮಿ ಶೇರ್​ ಮಾಡಿಕೊಂಡಿರುವ ಫೋಟೋದಲ್ಲಿ ಅವರು,  ರೇಷ್ಮೆ ಸೀರೆಯಲ್ಲಿ ಕಂಗೊಳಿಸುವುದನ್ನು ನೋಡಬಹುದು.  ವಜ್ರದ ಆಭರಣಗಳ ಜೊತೆ ಸೀರೆಗೆ ಚಿನ್ನದ ಮೋಟಿಫ್‌ಗಳೊಂದಿಗೆ ಪ್ರಕಾಶಮಾನವಾದ ಫ್ಯೂಶಿಯಾ ಬ್ಲೌಸ್ ಧರಿಸಿದ್ದಾರೆ.  

ಅಷ್ಟಕ್ಕೂ ಈ ಜೋಡಿ, ನಟಿ  ಪ್ರೀತಿಸುತ್ತಿದ್ದಾರೆ ಎಂದು ಬಹಳ ವರ್ಷಗಳಿಂದ ಕೇಳಿ ಬರುತ್ತಿತ್ತು.  ಈ ಇಬ್ಬರು ಸೆಲೆಬ್ರಟಿಗಳು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಈ ವದಂತಿಗಳು ಹರಡಿದ್ದವು.. ಇದಲ್ಲದೇ ಇಬ್ಬರೂ ಮದುವೆಗೂ ರೆಡಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಜೋಡಿ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ನಟಿಗೆ ಕೇಳಿದ ಪ್ರಶ್ನೆಗೆ ಸಮಯ ಬಂದಾಗ ಮದುವೆ ಆಗುತ್ತೆ ಬಿಡಿ. ಮದುವೆಯು ಜೀವನದ ಒಂದು ಭಾಗ ಮಾತ್ರ, ಜೀವನವಲ್ಲ ಮತ್ತು ಗುರಿಯಲ್ಲ. ನನಗೆ 18 ವರ್ಷವಾದ ನಂತರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡತೊಡಗಿದ್ದರು ಆದರೆ ನಾನು ಅದಕ್ಕೆ ಬ್ರೇಕ್‌ ಹಾಕಿದೆ. ನನ್ನ  ದೃಷ್ಟಿಯಲ್ಲಿ ಮದುವೆ ಮುಖ್ಯವಲ್ಲ, ಮದುವೆ ಆಗದಿದ್ದರೂ ಪರವಾಗಿಲ್ಲ.  ನಾನು ಮದುವೆಗೆ ವಿರೋಧ ಮಾಡುವುದಿಲ್ಲ. ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ. ಆದರೆ ಅದೇ ಎಲ್ಲವೂ ಅಲ್ಲ ಎಂದಿದ್ದರು. 

ಅನಂತ್​ ಅಂಬಾನಿ ಜೊತೆ ಆಲಿಯಾ ಪುತ್ರಿ ಕ್ಯೂಟ್​ ಮಾತುಕತೆ: ಈಗಲೇ ಸ್ಕೆಚ್ ಹಾಕಿದ್ದಾಳೆ ಎಂದ ಫ್ಯಾನ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ