
ನಾನು ಸತ್ತಿಲ್ಲಪ್ಪಾ, ಆರಾಮಾಗಿದ್ದೀನಿ! ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕೆಂಡಾಮಂಡಲವಾದ ನಟ ದೊಡ್ಡಣ್ಣ"
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ತಮ್ಮ ಅದ್ಭುತ ಹಾಸ್ಯ ಮತ್ತು ಗಂಭೀರ ನಟನೆಯ ಮೂಲಕ ಕನ್ನಡಿಗರ ಮನೆಮಾತಾಗಿರುವ ದೊಡ್ಡಣ್ಣ ಅವರು ಈಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣವೇನು ಗೊತ್ತಾ? ಕಳೆದ ಕೆಲವು ಗಂಟೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅವರ 'ನಿಧನ'ದ ಸುಳ್ಳು ಸುದ್ದಿ!
ಹೌದು, ಯಾವುದೋ ಕಿಡಿಗೇಡಿಗಳು ಸೃಷ್ಟಿಸಿದ ಒಂದು ಸುಳ್ಳು ಪೋಸ್ಟ್ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ದೊಡ್ಡಣ್ಣ ಅವರು ಇನ್ನಿಲ್ಲ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ, ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಆಪ್ತರು ಆತಂಕಕ್ಕೊಳಗಾಗಿದ್ದರು. ಆದರೆ, ಈ ಎಲ್ಲಾ ವದಂತಿಗಳಿಗೆ ಸ್ವತಃ ದೊಡ್ಡಣ್ಣ ಅವರೇ ಖಡಕ್ ವಿಡಿಯೋ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ.
ತಮ್ಮ ಅಸಮಾಧಾನವನ್ನು ಹೊರಹಾಕಿದ ದೊಡ್ಡಣ್ಣ, "ನಾನು ಸತ್ತಿಲ್ಲ, ಬದುಕಿದ್ದೀನಿ. ತುಂಬಾ ಆರೋಗ್ಯವಾಗಿದ್ದೇನೆ ಮತ್ತು ನೆಮ್ಮದಿಯಾಗಿದ್ದೇನೆ. ಇಂದು ಬೆಳಗ್ಗೆ ನಿದ್ದೆಯಿಂದ ಎದ್ದು ಮುಖ ತೊಳೆಯುವುದಕ್ಕೂ ನನಗೆ ಪುರುಸೊತ್ತಿಲ್ಲದಂತೆ ಸತತವಾಗಿ ಫೋನ್ ಕರೆಗಳು ಬರುತ್ತಿವೆ. ಎಲ್ಲರೂ ಫೋನ್ ಮಾಡಿ ನಾನು ಹೇಗಿದ್ದೇನೆ ಎಂದು ವಿಚಾರಿಸುತ್ತಿದ್ದಾರೆ. ಆ ಅವಿವೇಕಿಗಳು ನಾನು ನಿಧನವಾಗಿದ್ದೇನೆ ಎಂದು ಫೇಕ್ ನ್ಯೂಸ್ ಹಾಕಿದ್ದಾರೆ. ಇದನ್ನು ನೋಡಿ ನನಗೆ ಬಹಳ ಬೇಸರ ಮತ್ತು ಕೋಪ ಬಂದಿದೆ" ಎಂದು ಸಿಡಿಮಿಡಿಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಲೈಕ್ಸ್‌ಗಾಗಿ ಸೆಲೆಬ್ರಿಟಿಗಳ ಸಾವಿನ ಸುದ್ದಿ ಹಬ್ಬಿಸುವವರ ವಿರುದ್ಧ ದೊಡ್ಡಣ್ಣ ಕಿಡಿಕಾರಿದ್ದಾರೆ. "ನಾನು ಚೆನ್ನಾಗಿರುವಾಗ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ. ಜನರಿಗೆ ಯಾಕೆ ಇಂತಹ ಮನಸ್ಥಿತಿ ಬರುತ್ತದೋ ಗೊತ್ತಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂಬ ವಿಷಯವನ್ನು ಎಲ್ಲರಿಗೂ ತಿಳಿಸಲು ಈ ವಿಡಿಯೋ ಮಾಡುತ್ತಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ದೊಡ್ಡಣ್ಣ ಅವರು ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆಯೇ ಅವರ ಲಕ್ಷಾಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ದೊಡ್ಡಣ್ಣ ಅವರು ಅರೋಗ್ಯವಾಗಿದ್ದು, ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರ ಕುಟುಂಬ ವರ್ಗ ಕೂಡ ಮನವಿ ಮಾಡಿದೆ. ಕಿಡಿಗೇಡಿಗಳು ಇಂತಹ ಕೃತ್ಯಗಳನ್ನು ನಿಲ್ಲಿಸಬೇಕೆಂದು ಚಿತ್ರರಂಗದ ಗಣ್ಯರು ಕೂಡ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, 'ಕ್ವೀನ್' ಕಂಗನಾ ಹೇಳಿದಂತೆ ಬಾಲಿವುಡ್‌ನಲ್ಲಿ ಟಾರ್ಗೆಟಿಂಗ್ ನಡೆದರೆ, ಇಲ್ಲಿ ನಮ್ಮ ಸ್ಯಾಂಡಲ್‌ವುಡ್ ದಿಗ್ಗಜರನ್ನು ಸುಳ್ಳು ಸುದ್ದಿಗಳ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ವಿಷಾದನೀಯ. ದೊಡ್ಡಣ್ಣ ಅವರು ನೂರ ಕಾಲ ಸುಖವಾಗಿ ಬಾಳಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.