ಕಾಂತಾರ ಸಿನಿಮಾದಲ್ಲಿ ರಿಷಬ್ ನಟನೆ ನೋಡಿ ಅವರ ಕಾಲಿಗೆ ನಮಸ್ಕಾರ ಮಾಡಬೇಕು ಅಂತ ಬಹಳ ಆಸೆ ಪಟ್ಟಿದ್ದೆ. ಆ ಆಸೆ ಇವತ್ತು ನೆರವೇರ್ತಾ ಇದೆ ಎನ್ನುತ್ತಾ ವಸಿಷ್ಠ ಸಿಂಹ ರಿಷಬ್ ಶೆಟ್ಟಿ ಕಾಲಿಗೆ ನಮಸ್ಕರಿಸಲು ಹೋದದ್ದು ವಿಶೇಷವಾಗಿತ್ತು.
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ವಸಿಷ್ಠ ಬೇಸ್ ವಾಯ್ಸ್ ಬಹಳ ಇಷ್ಟವಾಗಿತ್ತು. ಅವರ ಧ್ವನಿಯನ್ನು ಮಿಮಿಕ್ರಿ ಮಾಡುತ್ತಿದ್ದೆ. ಅವರು ಕನ್ನಡ ಸಿನಿಮಾಕ್ಕೆ ಆಸ್ತಿ ಆಗುವ ವಿಶ್ವಾಸ ಇದೆ. ಬಹುದೊಡ್ಡ ನಾಯಕ ನಟನಾಗಿ ವಶಿಷ್ಠ ಬೆಳೆಯಲಿ’ ಎಂದು ರಿಷಬ್ ಶೆಟ್ಟಿ ಹಾರೈಸಿದ್ದಾರೆ. ವಸಿಷ್ಠ ಸಿಂಹ ನಟನೆಯ ‘ಲವ್‌ಲೀ’ ಸಿನಿಮಾದ ಟ್ರೇಲರ್ ಅನ್ನು ರಿಷಬ್ ಬಿಡುಗಡೆ ಮಾಡಿ ಮಾತನಾಡಿ, ‘ನಾವೆಲ್ಲ ಒಳ್ಳೆ ಸಿನಿಮಾ ಬಂದಾಗ ನೋಡಿ ಬೆಂಬಲಿಸೋಣ’ ಎಂದರು.
ನಾಯಕ ವಸಿಷ್ಠ ಸಿಂಹ ತನ್ನ ಸಿನಿಮಾ ಜರ್ನಿಗೆ ಸಹಕರಿಸಿದವರನ್ನು ಸ್ಮರಿಸಿದರು. ಫ್ಯಾನ್ಸ್ ಕೋರಿಕೆಯಂತೆ ಸಿನಿಮಾದ ಡೈಲಾಗ್ ಹೇಳಿ ಮನರಂಜಿಸಿದರು. ನಿರ್ದೇಶಕ ಚೇತನ್ ಕೇಶವ್, ‘ಪ್ರೇಕ್ಷಕ ಕೊಡುವ ದುಡ್ಡಿಗೆ ಮೋಸವಾಗದ ಚಿತ್ರ ನಮ್ಮದು’ ಎಂದರು. ನಾಯಕಿ ಸ್ಟೆಫಿ ಪಟೇಲ್ ಅನುಭವ ಹಂಚಿಕೊಂಡರು. ರವೀಂದ್ರ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.ಬಾಕ್ಸ್
ರಿಷಬ್ ಕಾಲಿಗೆ ನಮಸ್ಕರಿಸಿದ ವಸಿಷ್ಠ: ‘ಕಾಂತಾರ ಸಿನಿಮಾದಲ್ಲಿ ರಿಷಬ್ ನಟನೆ ನೋಡಿ ಅವರ ಕಾಲಿಗೆ ನಮಸ್ಕಾರ ಮಾಡಬೇಕು ಅಂತ ಬಹಳ ಆಸೆ ಪಟ್ಟಿದ್ದೆ. ಆ ಆಸೆ ಇವತ್ತು ನೆರವೇರ್ತಾ ಇದೆ’ ಎನ್ನುತ್ತಾ ವಸಿಷ್ಠ ಸಿಂಹ ರಿಷಬ್ ಶೆಟ್ಟಿ ಕಾಲಿಗೆ ನಮಸ್ಕರಿಸಲು ಹೋದದ್ದು ವಿಶೇಷವಾಗಿತ್ತು. ರಿಷಬ್ ಸಂಕೋಚದಿಂದ ವಸಿಷ್ಠ ಅವರನ್ನು ಮೇಲೆತ್ತಿದರು.
ಲಂಡನ್‌ಗೆ ಹೋಗಿ ಬಂದ ವಸಿಷ್ಠ ಸಿಂಹ, ಸ್ಟೆಫಿ ಪಟೇಲ್: 'ಲವ್ ಲಿ' ಎಂದಿದ್ದು ಯಾಕೆ?
ಸಿನಿಮಾದ ಟ್ರೈಲರ್ ರಿಲೀಸ್‌ಗೆ ಹರಿಪ್ರಿಯಾ ಅವರೇ ಶೆಟ್ರನ್ನ ಇನ್ವೈಟ್ ಮಾಡಿದರು. ಕಾಲ್ ಮಾಡಿ ವಿಷಯ ತಿಳಿಸಿದ್ರು. ಕೊನೆಗೆ ವಸಿಷ್ಠ ಸಿಂಹ ಕೂಡ ಬಂದ್ಮೇಲೆ ಕಾಲ್ ಮಾಡ್ತಾರೆ ಅಂತಲೇ ಹೇಳಿದ್ರು. ಆಗ ಶೆಟ್ರು ಒಂದು ಮಾತು ಹೇಳಿದ್ರು. ನೀವು ನನ್ನ ಒಳ್ಳೆ ಸ್ನೇಹಿತೆ ಆಗಿದ್ದೀರಿ. ನೀವು ಹೇಳಿದ್ಮೇಲೆ ಬರ್ತಿನಿ ಬಿಡಿ ಅಂತ ತಿಳಿಸಿದ್ರು. ವೇದಿಕೆ ಮೇಲೆ ಇದನ್ನ ಹೇಳಿದ ರಿಷಬ್ ಶೆಟ್ರು, ಹರಿಪ್ರಿಯಾ ತುಂಬಾನೇ ವಿಶೇಷವಾಗಿದ್ದಾರೆ. ನಾನು ನಿರ್ದೇಶನ ಮಾಡಿದ ಮೊದಲ ಚಿತ್ರ ರಿಕ್ಕಿ ಆಗಿದೆ. ಇದರ ನಾಯಕಿ ಇವರೇನೆ ನೋಡಿ. ಇನ್ನು ನಾನು ಹೀರೋ ಆದ ಬೆಲ್‌ಬಾಟಂ ಚಿತ್ರದ ನಾಯಕಿ ಕೂಡ ಇವರೇನೆ ಆಗಿದ್ದಾರೆ. ಇಷ್ಟು ವಿಶೇಷವಾಗಿಯೇ ಹರಿಪ್ರಿಯಾ ನನ್ನ ಜರ್ನಿಯಲ್ಲಿ ಸಾಥ್ ಕೊಟ್ಟಿದ್ದಾರೆ ಅಂತ ನೆನಪಿಸಿಕೊಂಡಿದ್ದಾರೆ.