ಅಭಿಮಾನಿಗಳ ಮುಂದೆ ಲೈವ್ ಬಂದ ಧ್ರುವ ಸರ್ಜಾ ಹೇಳಿದ್ದೇನು?

Published : Jul 17, 2020, 09:29 PM ISTUpdated : Jul 17, 2020, 09:46 PM IST
ಅಭಿಮಾನಿಗಳ ಮುಂದೆ ಲೈವ್ ಬಂದ ಧ್ರುವ ಸರ್ಜಾ ಹೇಳಿದ್ದೇನು?

ಸಾರಾಂಶ

ಅಭಿಮಾನಿಗಳ ಮುಂದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ / ಇನ್ಸ್ಟಾ ಗ್ರಾಂ ಲೈವ್ ಮೂಲಕ ಅಭಿಮಾನಿಗಳ ಮುಂದೆ ಬಂದ ಆಕ್ಷನ್ ಪ್ರಿನ್ಸ್ / ಚಿರು ನಿಧನ ನಂತ್ರ ಮೊದಲ ಬಾರಿಗೆ ಲೈವ್ /ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ

ಬೆಂಗಳೂರು(ಜು. 17)  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಧ್ರುವ ಸರ್ಜಾ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಇನ್ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳ ಮುಂದೆ  ಆಕ್ಷನ್ ಪ್ರಿನ್ಸ್ ಬಂದಿದ್ದಾರೆ.  ಚಿರಂಜೀವಿ ನಿಧನ ನಂತ್ರ ಮೊದಲ ಬಾರಿಗೆ ಲೈವ್  ಬಂದಿದ್ದಾರೆ.  ಅಭಿಮಾನಿಗಳ ಜತೆ ಮಾತನಾಡಿದ್ದಾರೆ.

ಸ್ಯಾಂಡಲ್‌ವುಡ್‌ 'ಪೊಗರು' ಹುಡುಗ, ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ವೈದ್ಯರ ಸಲಹೆ ಮೇರೆಗೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ, ಈಗ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದರು.

ಚಿರಂಜೀವಿ ಸರ್ಜಾ ಸಮಾಧಿ ಮುಂದೇ ಕಣ್ಣೀರಿಟ್ಟ ಧ್ರುವ

ಸೋಂಕು ತಾಗಲು ಕಾರಣವೇನು:
ಅಷ್ಟಕ್ಕೂ ಈ ಜೋಡಿಗೆ ಸೋಂಕು ಎಲ್ಲಿಂದ ತಗುಲಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲವಾದರೂ, ಕೆಲವು ಮೂಲಗಳ ಪ್ರಕಾರ ಧ್ರುವ ಸರ್ಜಾ ಕೆಲವು ದಿನಗಳ ಹಿಂದೆ ಲೋ ಬಿಪಿ ಮತ್ತು ಖಿನ್ನತೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಓಡಾಟದ ಸಂದರ್ಭದಲ್ಲಿ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?