ಗ್ರೇಟ್ ಅಪ್ಪಾಜಿ ಅಂದ್ಬಿಟ್ಟು ನಟ ವಿಷ್ಣುವರ್ಧನ್‌ಗೆ 'ಈ ಬಂಧನ'ದ ಬಳಿಕ ದರ್ಶನ್ ಏನು ಹೇಳಿದ್ರು?

By Shriram Bhat  |  First Published Jun 26, 2024, 6:54 PM IST

ನಟ ದರ್ಶನ್ ಅವರು ತಮ್ಮ ಹಳೆಯ ಸಂದರ್ಶನವೊಂದರಲ್ಲಿ ನಟ ವಿಷ್ಣುವರ್ಧನ್ ಬಗ್ಗೆ ಹೀಗೆ ಹೇಳಿದ್ದರು. ಜೈ ಜಗದೀಶ್ ನಿರ್ಮಾಣದ 'ಈ ಬಂಧನ'  ಚಿತ್ರದಲ್ಲಿ ನಟ ದರ್ಶನ್ ಅವರು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. 


ಕನ್ನಡದ ನಟ ದರ್ಶನ್ (Darshna) ಅವರು ಹಿರಿಯ, ಮೇರು ನಟ ವಿಷ್ಣುವರ್ಧನ್ (Vishnuvardhan) ಬಗ್ಗೆ ಮಾತನಾಡಿದ್ದ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಂಧನಾ ಚಿತ್ರದಲ್ಲಿ ನಟರಾದ ದರ್ಶನ್ ಹಾಗು ವಿಷ್ಣುವರ್ಧನ್ ಒಟ್ಟಿಗೇ ನಟಿಸಿದ್ದರು. ಹಾಗಿದ್ರೆ ನಟ ದರ್ಶನ್ ಅಂದು ವಿಷ್ಣು ಅವರ ಬಗ್ಗೆ ಅದೇನು ಹೇಳಿದ್ದರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ..  

'ನಾನು ವಿಷ್ಣು ಸರ್‌ನ ತುಂಬಾ ಮೇಲ್ಮಟ್ಟದಲ್ಲಿ ನೋಡ್ತೀನಿ. ಯಾಕಂತಂದ್ರೆ, ನಮ್ಮಲ್ಲಿ ಸೂಟ್‌ಗಳನ್ನು ಎಲ್ಲರೂ ಹಾಕ್ತಾರೆ. ಆದ್ರೆ, ಅವ್ರಿಗೆ ಮ್ಯಾಚ್ ಆದಷ್ಟು ಬೇರೆ ಯಾರಿಗೂ ಆಗಲ್ಲ. ವಿಷ್ಣು ಸರ್ ವರ್ಕಿಂಗ್ ಸ್ಟೈಲ್ ಇದ್ಯಲ್ಲಾ, ಅದು ಅಮೇಜಿಂಗ್. ಅವ್ರೆಷ್ಟು ಸೀನಿಯರ್ ಆದ್ರೂ ತುಂಬಾ ಯಂಗ್ ಆಗಿ ಕಾಣಿಸ್ತಾರೆ, ಅವ್ರ ಪಕ್ಕದಲ್ಲಿ ನಿಂತ್ರೆ ನಾನೇ ಸ್ವಲ್ಪ ವಯಸ್ಸಾದವ್ರ ಥರ ಕಾಣಿಸ್ತೀನಿ. ಅಂಥ ಒಳ್ಳೇ ಸ್ಟ್ರಕ್ಚರ್ ಹೊಂದಿದಾರೆ ಅವ್ರೆಲ್ಲಾ ಲೆಜೆಂಡ್ಸ್‌. ಅವ್ರ ಬಗ್ಗೆ ನಾವೆಲ್ಲಾ ಮಾತಾಡೋದು ಹಾಗಿರ್ಲಿ, ಉಸಿರಾಡೋ ಹಾಗೂ ಇಲ್ಲ. 

Tap to resize

Latest Videos

ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!

ಅವ್ರು ಎಲ್ಲೇ ಹೋಗೋದಾದ್ರೂ ಟೈಮ್‌ ಮ್ಯಾನೇಜ್ ಮಾಡ್ತಾ ಇದ್ರು. ಸರಿಯಾದ ಟೈಮಲ್ಲಿ ಇರಬೇಕಾದ ಜಾಗದಲ್ಲಿ ಇರ್ತಾ ಇದ್ರು. 'ಟೈಮ್ ಹೇಳಿ, ಆ ಟೈಮ್‌ಗೆ ನಾನು ಇರ್ತಿನಿ ಅಲ್ಲಿ' ಅಂತ ಹೇಳ್ತಾ ಇದ್ರು. ಯಾವತ್ತೂ ಅವ್ರು ಟೈಮ್‌ ಮೆಂಟೇನ್ ಮಾಡ್ತಾ ಇದ್ರು, ಶೂಟಿಂಗ್ ಇರ್ಲಿ, ಫಂಕ್ಷನ್ ಇರ್ಲಿ, ಟೈಮ್‌ಗೆ ಸರಿಯಾಗಿ ಬರೋರು. ವಿಷ್ಣು ಸರ್ ಜತೆ ನಾನು ನಟನೆ ಮಾಡೋ ಟೈಮಲ್ಲಿ ನಾನು ಹೇಳಿದ್ದು ಕೂಡ ನನಗಿನ್ನೂ ನೆನಪಿದೆ. 'ವಿಷ್ಣು ಸರ್ ಎಷ್ಟೊತ್ತಿಗೆ ಬರ್ತಾರೆ ಹೇಳಿ, ಅದಕ್ಕಿಂತ ಮೊದ್ಲು ನಾನಿರ್ತೀನಿ' ಅಂದಿದ್ದೆ. 

ಕಿಚ್ಚ ಸುದೀಪ್ ಪಾಲಿಗೆ ಪುನೀತ್ ಅಪ್ಪು ಅಲ್ಲ ಭಾಗ್ಯವಂತ; ಇದ್ಯಾ ಏನಾದ್ರೂ ರೈಟ್ ರೀಸನ್?

ನಾನು ಆಗ ಜೈಜಗದೀಶ್ ಅವ್ರಿಗೆ 'ಅಪ್ಪಾಜಿ ಎಷ್ಟು ಹೊತ್ತಿಗೆ ಬರ್ತಾರೆ ಅಂತ ಹೇಳ್ಬಿಡಿ ನಂಗೆ. ಅವ್ರು ಬೆಳಿಗ್ಗೆ ಎಂಟು ಗಂಟೆಗೆ ಬರ್ತಾರೆ ಅಂದ್ರೆ ಹೇಳ್ಬಿಡಿ, ನಾನು ಏಳೂವರೆಗೇ ಇಲ್ಲಿ ಬಂದಿರ್ತೀನಿ. ಯಾಕಂದ್ರೆ, ಅವ್ರು ಬರೋಕೂ ಮೊದ್ಲೇ ನಾವು ಇರ್ಬೇಕು ಅಲ್ಲಿ. ದರ್ಶನ್, ನೀನು ಮದ್ಯಾನ್ಹ ಬಂದ್ರೆ ಸಾಕು ಅಂದ್ರೆ, ಇಲ್ಲ, ಅವ್ರು ಬರೋದು ಎಷ್ಟೊತ್ತಿಗೆ ಹೇಳಿ, ಮದ್ಯಾನ್ಹ ತನ್ಕ ಕೂತಿರೋದಾದ್ರೂ ಓಕೆ, ಅವ್ರು ಬರೋಕೂ ಮೊದ್ಲು ನಾನು ಬರ್ತೀನಿ. ಅದು ನಾವು ಅವ್ರಂಥ ಹಿರಿಯರಿಗೆ, ಮೇರು ಕಲಾವಿದರಿಗೆ ಕೊಡುವಂತ ಗೌರವ' ಎಂದಿದ್ದರು ನಟ ದರ್ಶನ್. 

ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್, ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು ಹೇಗೆ?

ಒಟ್ಟಿನಲ್ಲಿ, ನಟ ದರ್ಶನ್ ಅವರು ತಮ್ಮ ಹಳೆಯ ಸಂದರ್ಶನವೊಂದರಲ್ಲಿ ನಟ ವಿಷ್ಣುವರ್ಧನ್ ಬಗ್ಗೆ ಮೇಲಿನಂತೆ ಹೇಳಿದ್ದರು. ಜೈ ಜಗದೀಶ್ ನಿರ್ಮಾಣದ 'ಈ ಬಂಧನ'  ಚಿತ್ರದಲ್ಲಿ ನಟ ದರ್ಶನ್ ಅವರು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ವಿಷ್ಣುವರ್ಧನ್-ಜಯಪ್ರದಾ ಜೋಡಿಯ ಈ ಬಂಧನಾ ಚಿತ್ರದಲ್ಲಿ ನಟ ದರ್ಶನ್ ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ನಟ ದರ್ಶನ್, ಹಿರಿಯ ಹಾಗು ಮೇರು ಕಲಾವಿದರಾದ ವಿಷ್ಣುವರ್ಧನ್ ಹಾಗು ಜಯಪ್ರದಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ! 

click me!