ಪತಿಯ ಹುಟ್ಟುಹಬ್ಬದಂದು ಸುಂದರವಾದ ಫೊಟೋ ಶೇರ್ ಮಾಡಿಕೊಂಡ ನಟಿ ಭಾವನಾ ಮೆನನ್

By Gowthami K  |  First Published Jun 26, 2024, 5:08 PM IST

ಪತಿಯ  ಹುಟ್ಟುಹಬ್ಬದ ಸಂಭ್ರಮ. ಈ ಸುಂದರವಾದ ದಿನ ಗಂಡನನೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ ಖ್ಯಾತ ನಟಿ ಭಾವನಾ ಮೆನನ್ 


ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಇವತ್ತು ಅವರ ಪತಿಯ  ಹುಟ್ಟುಹಬ್ಬದ ಸಂಭ್ರಮ. ಈ ಸುಂದರವಾದ ದಿನ ಗಂಡನನೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಕನ್ನಡದ ನಿರ್ಮಾಪಕ ನವೀನ್ ಅವರನ್ನು ಮದುವೆಯಾಗಿರುವ ನಟಿ ಭಾವನಾ ಮೆನನ್ ಮೂಲತ ಕೇರಳದವರು.

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಜಾಕಿ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ ಹಿಟ್ ಆದ ಬಳಿಕ ಜಾಕಿ ಭಾವನಾ ಎಂದೇ ಫೇಮಸ್‌ ಆದರು. ದಿಡೀರ್ ಕನ್ನಡದ ನಿರ್ಮಾಪಕನ ಜೊತೆಗೆ ಮದುವೆಯಾದರು.

Tap to resize

Latest Videos

undefined

ಐ ಸ್ಟ್ಯಾಂಡ್ ವಿತ್ ದರ್ಶನ್, ಜೋರಾಗಿ ಕಿರುಚಿ ಕಣ್ಣೀರಿಟ್ಟ ನಟಿ ಭಾವನಾ

ಮದುವೆಯಾಗಿ  6 ವರ್ಷಗಳು ಕಳೆದರೂ ಮಕ್ಕಳಾಗಿಲ್ಲ. 38 ವರ್ಷದ ನಟಿ  ಜೀವನದಲ್ಲಿ ಹಲವಾರು ಏರಿಳಿತಗಳನ್ನು ಎದುರಿಸಿದ್ದು, ಈ ಬಗ್ಗೆ ಸಂದರ್ಶನದಲ್ಲಿ ಒಮ್ಮೆ ಹೇಳಿಕೊಂಡಿದ್ದರು, ನಟಿ ಇಂದಿಗೂ ಚಲಚಿತ್ರದಲ್ಲಿ ಸಕ್ರೀಯರಾಗಿದ್ದಾರೆ. 

ಬೋಳು ತಲೆಗೆ ಕೂದಲು ಕಸಿ ಮಾಡಿಸಿಕೊಂಡ ಕನ್ನಡದ ಸ್ಟಾರ್ ನಟರಿವರು!

ಆ ಕೆಟ್ಟ ಘಟನೆ: 
2017 ಫೆಬ್ರವರಿ 17 ರಂದು ತ್ರಿಶೂರಿನಿಂದ ಕೊಚ್ಚಿಗೆ ಹೋಗುವ ರಸ್ತೆಯಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ಭಾವನಾರ ಕಾರನ್ನು ಅಡ್ಡಗಟ್ಟಿ ತಡೆದು ಅವರನ್ನು ಕಿಡ್ನಾಪ್ ಮಾಡಿ ಎರಡುವರೆ ಗಂಟೆ ಕಾರಿನಲ್ಲಿ ಕಿರುಕಳ ಕೊಟ್ಟು ,ಅಸಭ್ಯವಾಗಿ ಚಿತ್ರಗಳನ್ನು ತೆಗೆದು ನಂತರ ಕಾಕಿನಾಡದ ಹತ್ತಿರ ಬಿಟ್ಟು ಹೋಗಿದ್ದರು. ಬಳಿಕ ನಟಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಘಟನೆ ಮಲಯಾಳಂ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ದಕ್ಷಿಣದ ಎಲ್ಲಾ ಚಿತ್ರರಂಗದಲ್ಲೂ ಸಂಚಲನ ಮೂಡಿಸಿತು. ಮತ್ತು ಈ ಘಟನೆಯಲ್ಲಿ ಮಲಯಾಳಂ ಚಿತ್ರರಂಗದ ಟಾಪ್ ನಟ ದಿಲೀಪ್ ಹೆಸರು ಕೇಳಿಬಂದಿತ್ತು.

ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಮೊದಲೇ ತಿಳಿಸುತ್ತೇವೆ ಈ ಚೈನಾ ಚಾರ್ಟ್!

ಈ ಕೆಟ್ಟ ಘಟನೆಗಳಿಂದ ಹೊರಬಂದಿರುವ ನಟಿ ಭಾವನಾ ಮತ್ತೆ  ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಕೈಹಿಡಿದರು. ಇಂದು ಗಂಡನ ಹುಟ್ಟುಹಬ್ಬದ ಹಿನ್ನೆಲೆ ಫೋಟೋ ಹಂಚಿಕೊಂಡಿದ್ದಾರೆ.

 

click me!