ಐ ಸ್ಟ್ಯಾಂಡ್ ವಿತ್ ದರ್ಶನ್, ಜೋರಾಗಿ ಕಿರುಚಿ ಕಣ್ಣೀರಿಟ್ಟ ನಟಿ ಭಾವನಾ

By Gowthami K  |  First Published Jun 26, 2024, 3:41 PM IST

ಸ್ಯಾಂಡಲ್‌ವುಡ್‌ ನಟಿ ಭಾವನ ರಾಮಣ್ಣ ಅವರು ನಟ ದರ್ಶನ್ ವಿಚಾರ  ನೆನೆದು ಕಣ್ಣೀರಿಟ್ಟಿದ್ದಾರೆ. ಜೊತೆಗೆ ನಾನು ದರ್ಶನ್ ಪರ ಎಂದಿದ್ದಾರೆ.


ಬೆಂಗಳೂರು (ಜೂ.26): ಸ್ಯಾಂಡಲ್‌ವುಡ್‌ ನಟಿ ಭಾವನ ರಾಮಣ್ಣ ಅವರು ನಟ ದರ್ಶನ್ ವಿಚಾರ  ನೆನೆದು ಕಣ್ಣೀರಿಟ್ಟಿದ್ದಾರೆ. ಕಲಾವಿದರ ಕಷ್ಟ ಯಾರಿಗೂ ಗೊತ್ತಿಲ್ಲ ನಮ್ಮ ನೋವು ನಮಗೆ. ಕಲಾವಿದರಿಗೆ ಬ್ಯಾಂಕ್ ನಲ್ಲಿ ಸಾಲ ಕೊಡಲ್ಲ. ನಮ್ಮ ಕಷ್ಟಗಳು ಯಾರಿಗೆ ಹೇಳೋದು ಇನ್ಸ್ಯೂರೆನ್ಸ್ ಕೂಡ ನಮಗಿಲ್ಲ. ಯಾವುದೇ ಸರ್ಕಾರ ನಮ್ಮ ಪರ ಇರಲ್ಲ. ಏನಾದ್ರು ಸಮಸ್ಯೆ ಆದ್ರೆ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಾರೆ. ಕಲಾವಿದರಿಗೆ ಯಾರೂ ಇಲ್ಲ ನಮ್ಮ ಅನ್ನ ನಮ್ಮದು. ನಮಗೆ ಯಾರ ಬೆಂಬಲವೂ ಇಲ್ಲ ಎಂದು ಜೋರಾಗಿ ಕಿರುಚಿ  ನಟಿ ಭಾವನಾ ರಾಮಣ್ಣ ಕಣ್ಣೀರಿಟ್ಟಿದ್ದಾರೆ.

ಐ ಸ್ಟ್ಯಾಂಡ್ ವಿತ್ ದರ್ಶನ್. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ದರ್ಶನ್ ಮತ್ತು ನನಗೆ ಎಲ್ಲರ‌ ಮನೆ ದೋಸೆ ತೂತು ಅನ್ನೋ ಸಿನಿಮಾದಿಂದ ಗೊತ್ತು. ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರೋರು...ಸಾಕಷ್ಟು ವರ್ಷದಿಂದ ಜೊತೇಲಿ ಇರೋರು ನಾವು.

ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಮೊದಲೇ ತಿಳಿಸುತ್ತೇವೆ ಈ ಚೈನಾ ಚಾರ್ಟ್!

Tap to resize

Latest Videos

ಕಾನೂನಿನ ಅಡಿಯಲ್ಲಿ ಏನಾಗುತ್ತೋ ಅದನ್ನ ಒಪ್ಪಿಕೊಳ್ತಿವಿ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ಆಗ್ತಿರೋ ಸಮಸ್ಯೆ ಅನ್ಯಾಯ ತುಂಬಾ ಇದೆ. ಕೆಲವು ಪ್ರಕರಣ ಮಾತ್ರ ಹೊರಗೆ ಬರ್ತಾ ಇದೆ. ತುಂಬಾ ಹೆಣ್ಮಕ್ಜಳಿಗೆ ಕೆಟ್ಟ ಸಂದೇಶ ರವಾನೆ ಆಗಿ ಸಮಸ್ಯೆ ಆಗುತ್ತೆ. ಈ ಘಟನೆ ನಡೆದಿದ್ದು ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೇಗಾಗಿದೆ ಯಾಕಾಗಿದೆ ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ಪವಿತ್ರಾ ಗೌಡಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆ ಅಂತ ನನಗೆ ಗೊತ್ತು. ಯಾವ ತರದ ಮೆಸೆಜ್ ಬಂದಿದೆ ..? ಕೆಲ ಸೋಷಿಯಲ್ ಮಿಡಿಯಾ ಮೆಸೇಜ್ ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನ ಇಗ್ನೋರ್ ಮಾಡೋಕೆ ಆಗಲ್ಲ. ಕೆಟ್ಟ ಮೆಸೇಜ್ ಮಾಡೋಕೆ ಅವರು ಯಾರು?

ಬೋಳು ತಲೆಗೆ ಕೂದಲು ಕಸಿ ಮಾಡಿಸಿಕೊಂಡ ಕನ್ನಡದ ಸ್ಟಾರ್ ನಟರಿವರು!

ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿ ಅಂತ ಹೇಳ್ತೀರಾ..? ನಿಮಗೆ ಹೇಗೆ ಗೊತ್ತು..? ಎಲ್ಲರೂ ಸ್ಟೇಟ್ಮೆಂಟ್ ಕೊಡಬೇಡಿ. ರೇಣುಕಾ ಸ್ವಾಮಿ ಯಾರು ಅಂತ ನಮಗೂ ನಿಮಗೂ  ಯಾರಿಗೂ ಗೊತ್ತಿಲ್ಲ. ಚಿತ್ರರಂಗದವರಾಗಿ ಈ ಪ್ರಕರಣ ನೋಡಿದ್ರೆ ದುಃಖ ಆಗುತ್ತೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜಯ್ ದತ್ ಪ್ರಕರಣ ನೆನೆದು ದರ್ಶನ್ ಪರ ಬ್ಯಾಟ್ ಬೀಸಿದ ನಟಿ ಭಾವನಾ, ಸಂಜಯ್ ದತ್ ಜೈಲಿಗೆ ಹೋದ್ರು ನಂತರ ಮತ್ತೆ ಜನರ ಮನಸ್ಸು ಗೆದ್ದು ಸಕ್ಸಸ್ ಆದ್ರು. ದರ್ಶನ್ ವಿವಾದಗಳು ಅವರಿಗೆ ಬಿಟ್ಟಿದ್ದು ನಟರಾದವರು ಹೀಗೇ ಇರಬೇಕು ಅಂತ ಚೌಕಟ್ಟು ಹಾಕಿದ್ದಾರೆ. ದರ್ಶನ್ ವೇದಿಕೆ ಮೇಲೆ ಒಂದ್ ತರ ಹಿಂದುಗಡೆ ಒಂದ್ ತರ ಅಲ್ಲ. ನಾಚಿಕೆ ಸ್ವಭಾವದ ವ್ಯಕ್ತಿ  ಅವರು ಎಂದಿದ್ದಾರೆ. 

click me!