ದರ್ಶನ್ ಹೀರೋ ಅಲ್ಲ ವಿಲನ್: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ಡಿ ಬಾಸ್ ಗ್ಯಾಂಗ್ ವಿಕೃತಿ! ಏನಿದು ಕರಾಳ ಕಥೆ?

By Govindaraj S  |  First Published Jun 13, 2024, 12:06 PM IST

ನಟ ದರ್ಶನ್ ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ  ನಟ ದರ್ಶನ್ & ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ.  


ಚಾಮರಾಜನಗರ (ಜೂ.13): ನಟ ದರ್ಶನ್ ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ  ನಟ ದರ್ಶನ್ & ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದಾರೆ. ನಟ ದರ್ಶನ್ ಹೀರೋ ಅಲ್ಲ ವಿಲನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲಾಗಿದೆ. ಹೌದು! ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಕಥೆ ಇದು. 

ಮಹೇಶ್ ಎಂಬುವವರ ಮೇಲೆ ದರ್ಶನ್ ​ಫಾರ್ಮ್​ಹೌಸ್​ನ ಎತ್ತುಕೊಂಬಿನಿಂದ ತಿವಿದಿತ್ತು. ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಎತ್ತಿನ ಕೊಂಬು ಬಂದಿತ್ತು. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಕಣ್ಣು ಕಳೆದುಕೊಂಡ ಕಾರ್ಮಿಕ. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋದ ನಟ ದರ್ಶನ್ ಕಡೆಯವರು. ನಂತರ ಕುಟುಂಬದತ್ತ ತಿರುಗಿಯೂ ನೋಡಿಲ್ಲ. 

Tap to resize

Latest Videos

undefined

ಪರಿಹಾರ ಕೇಳಲು ಕಾರ್ಮಿಕನ ಸಂಬಂಧಿಕರು ಫಾರಂ ಹೌಸ್‌ಗೆ ಹೋದ್ರೆ ಡಿ ಬಾಸ್ ಗ್ಯಾಂಗ್ ಸಾಕುನಾಯಿ ಛೂ ಬಿಟ್ಟಿದ್ದರು. ಬಳಿಕ ಮೈಸೂರಿನ ಹೊಟೇಲ್ ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆಯನ್ನು ಹಾಕಿಸಿದ್ದರು. ವಿಚಾರ ಹೊರಗಡೆ ಬಾಯಿಬಿಟ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಡಿ ಬಾಸ್ ಅಂಡ್ ಗ್ಯಾಂಗ್ ಹೆದರಿಸಿದ್ದರು. ಹತ್ತು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೂಲಿ ಕಾರ್ಮಿಕ ಮಹೇಶ್ ಕುಟುಂಬ, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. 

ಬಂಧನದ ದಿನ ಬರೀ ಜ್ಯೂಸ್‌ ಕುಡಿದ ದರ್ಶನ್‌: ಮಾನಸಿಕ ಒತ್ತಡದಲ್ಲಿದ್ದ ನಟ

ತಾಯಿ ಮತ್ತು ಹೆಂಡತಿಯಿಂದ ಮಹೇಶ್ ಆರೈಕೆ ಮಾಡಲಾಗುತ್ತಿದ್ದು, ಕೂಲಿ ಮಾಡಿದ್ರೆ ಉಂಟು ಇಲ್ಲಾಂದ್ರೆ ಇಲ್ಲ ಎಂದು ದರ್ಶನ್‌ಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಲ್ಲಿ ಕಾರ್ಮಿಕ ಮಹೇಶ್ ಕುಟುಂಬ ಕೈ ತೊಳೆಯುತ್ತಿದೆ. ಇನ್ನು ಫಾರ್ಮ್​ಹೌಸ್​ನ ಮಾಜಿ ನೌಕರ, ಮಹೇಶ್ ಸಂಬಂಧಿಯು, ಮಹೇಶ್​ಗೆ ಜೀವ ಒಂದಿದೆ ಅಷ್ಟೇ. ಮಲಗಿದ್ದ ಜಾಗದಲ್ಲೇ ಇದ್ದಾನೆ. ತಿಂಗಳಿಗೆ 2-3 ಸಾವಿರ ರೂಪಾಯಿ ಖರ್ಚಾಗುತ್ತಿದೆ. ದರ್ಶನ್ ಯಾವುದೇ ಸಹಾಯ ಮಾಡಿಲ್ಲ. ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ಅವರು ಓರ್ವ ರೌಡಿ, 10 ವರ್ಷಗಳ ಹಿಂದೆಯೇ ಅವರ ಮುಖ ನೋಡಿದ್ದೇವೆ ಎಂದು ತಿಳಿಸಿದ್ದಾರೆ.

click me!