
ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ (Sandalwood actor Darling Krishna) ಹಾಗೂ ನಟಿ ಮಿಲನಾ ನಾಗರಾಜ್ (actress Milana Nagaraj) ಮಗಳಿಗೆ ಈಗ ಆರು ತಿಂಗಳು. ನಿನ್ನೆಯಷ್ಟೇ ಮಿಲನ ಅವರಿಗೆ ಮಗು ಜನಿಸಿದಂತಿದೆ. ಆದ್ರೆ ಈಗ್ಲೇ ಪರಿಗೆ ಆರು ತಿಂಗಳು ತುಂಬಿದೆ. ಈ ಖುಷಿಯನ್ನು ಡಾರ್ಲಿಂಗ್ ಕೃಷ್ಣ ತಮ್ಮ ಇನ್ಟ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದ್ರೆ ಡಾರ್ಲಿಂಗ್ ಕೃಷ್ಣ, ಬರೀ ಮಗಳ ವಯಸ್ಸನ್ನು ಸಂಭ್ರಮಿಸಿಲ್ಲ, ಮೊದಲ ಬಾರಿ ಅಮ್ಮನಾಗಿರುವ ಪತ್ನಿಯನ್ನು ಸೂಪರ್ ಹೀರೋಗೆ ಹೋಲಿಕೆ ಮಾಡಿದ್ದಾರೆ.
ನವಜಾತ ಶಿಶುಗೆ ದೃಷ್ಟಿಯಾಗುತ್ತೆ ಎನ್ನುವ ಕಾರಣಕ್ಕೆ ತಮ್ಮ ಮಕ್ಕಳ ಮುಖವನ್ನು ಅಭಿಮಾನಿಗಳಿಗೆ ತೋರಿಸ್ದೆ, ಕದ್ದುಮುಚ್ಚಿ ಓಡಾಡುವ ಅದೆಷ್ಟೋ ಸೆಲೆಬ್ರಿಟಿಗಳ ಮಧ್ಯೆ ಭಿನ್ನವಾಗಿ ನಿಂತವರು ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್. ಎಲ್ಲ ಕಟ್ಟಳೆಯನ್ನು ಮೀರಿ ಮಗುವಿನ ಮುಖ ತೋರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಜೋಡಿ ಇದು. ಸೆಪ್ಟೆಂಬರ್ 5ರಂದು ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷ್ಯವನ್ನು ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಮಗಳನ್ನು, ಅದ್ಧೂರಿಯಾಗಿ ಮನೆಗೆ ವೆಲ್ ಕಂ ಮಾಡಿಕೊಂಡಿದ್ದರು. ಅದ್ರ ವಿಡಿಯೋ ಹಂಚಿಕೊಂಡಿದ್ದ ಕೃಷ್ಣ, ಮಗಳು ಮನೆಗೆ ಬಂದ ಖುಷಿಯನ್ನು ಎಲ್ಲರ ಮುಂದಿಟ್ಟಿದ್ದರು. ಸ್ಯಾಂಡಲ್ವವುಡ್ ಮುದ್ದಾದ ಜೋಡಿಗೆ ಹೆಣ್ಣು ಮಗುವೇ ಜನಿಸುತ್ತೆ ಅಂತ ಗೆಸ್ ಮಾಡಿದ್ದ ಫ್ಯಾನ್ಸ್, ಕೃಷ್ಣ ಮಗಳನ್ನು ನೋಡಿ ಖುಷಿಯಾಗಿದ್ರು. ಅದಾದ್ಮೇಲೆ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ಆಗಾಗ ಮಗಳ ಜೊತೆ ಆಟವಾಡುವ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ.
Dr Rajkumar ಅಂತ್ಯಸಂಸ್ಕಾರದ ಮರುದಿನ ಹೊಸ ಕಾರ್ ಪೂಜೆಗೆ ಲೀಲಾವತಿ ದೇವಸ್ಥಾನಕ್ಕೆ
ಈಗ ಮಗಳಿಗೆ ಆರು ತಿಂಗಳು ತುಂಬಿದ್ದು, ಈ ಖುಷಿ ವಿಷ್ಯವನ್ನು ಡಾರ್ಲಿಂಗ್ ಕೃಷ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್, ಮಗಳನ್ನು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡಿರುವ ಕೃಷ್ಣ, ನಮ್ಮ ಪುಟ್ಟ ತಾರೆಗೆ 6 ತಿಂಗಳ ಶುಭಾಶಯಗಳು. ನನ್ನ ಹೆಂಡತಿ ಸೂಪರ್ ಹೀರೋ ಆಗಿ ಅರ್ಧ ವರ್ಷ ಕಳೆದಿದೆ. ನನ್ನ ಅದ್ಭುತ ಹೆಂಡತಿ ಅತ್ಯುತ್ತಮ ತಾಯಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ಹಾಕಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಪೋಸ್ಟ್ಗೆ ಮೆಚ್ಚುಗೆಯ ಸುರಿಮಳೆ ಬಂದಿದೆ. ಬಹುತೇಕರು, ಅಮ್ಮನನ್ನು ಹೊಗಳಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ತಿಂಗಳು, ವರ್ಷ ತುಂಬಿದ ಸಂತೋಷವನ್ನು ಎಲ್ಲರೂ ಹಂಚಿಕೊಳ್ತಾರೆ. ಅಮ್ಮನನ್ನು ಸೂಪರ್ ಹೀರೋ ಅಂತ ಸೆಲೆಬ್ರೇಟ್ ಮಾಡೋರು ಅಪರೂಪ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಹೆಂಡ್ತಿಗೂ ನಂಗೂ 10 ವರ್ಷ ವ್ಯತ್ಯಾಸ, ಮೂರ್ನಾಲ್ಕು ಸಲ ಕಠಿಣವಾದ ಜಗಳ
ಆರು ವರ್ಷ ಪ್ರೀತಿಸಿ, 2021ರಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಕೈ ಹಿಡಿದಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾದ ಜೋಡಿ ಈಗ ಚೊಚ್ಚಲ ಮಗುವಿನ ಪಾಲಕರಾಗಿದ್ದಾರೆ. ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ನಲ್ಲೂ ಅನೇಕರಿಗೆ ಮಾದರಿಯಾಗಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ಸೋಶಿಯಲ್ ಮೀಡಿಯಾ ಮೂಲಕ ಪಾಲಕರಾಗ್ತಿರುವ ವಿಷ್ಯ ತಿಳಿಸಿದ್ದರು. ಸೀಮಿಂತ ಸೇರಿದಂತೆ ಗರ್ಭಾವಸ್ಥೆಯ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದ ಮಿಲನಾಗೆ ಕೋಟ್ಯಾಂತರ ಅಭಿಮಾನಿಗಳ ಆಶೀರ್ವಾದ ಸಿಕ್ಕಿತ್ತು. ಪೆಗ್ನೆನ್ಸಿಯಲ್ಲೂ ಕೆಲಸ ಮಾಡಿದ್ದ ಮಿಲನ, ಹೆರಿಗೆಗೆ ಇನ್ನೇನು ಒಂದು ವಾರವಿದೆ ಎಂದಾಗ ತಮ್ಮ ಸಿನಿಮಾ ಡಬ್ಬಿಂಗ್ ಮುಗಿಸಿದ್ದರು.
ಮಿಲನಾ ನಾಗರಾಜ್, ಮಗಳ ಆರೈಕೆ ಜೊತೆ ಸಿನಿಮಾ, ಶೂಟಿಂಗ್, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮಗು ಹುಟ್ಟಿದ ನಂತ್ರ ಸ್ವಲ್ಪ ದಿನ ವಿಶ್ರಾಂತಿ ಪಡೆದ ಮಿಲನ ಎರಡೇ ತಿಂಗಳಲ್ಲಿ ಕೆಲಸಕ್ಕೆ ಮರಳಿದ್ದರು. ಇನ್ನು ಡಾರ್ಲಿಂಗ್ ಕೃಷ್ಣ ಕೂಡ ಸಿನಿಮಾ ಜೊತೆ ಸಿಸಿಎಲ್ ನಲ್ಲಿ ಬ್ಯುಸಿಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.