ಪ್ರೇಕ್ಷಕರು ಮೆಚ್ಚಿದ ರಾಮಾರ್ಜುನ: ಅನೀಶ್‌ ತೇಜೇಶ್ವರ್‌ ಹೇಳಿದ್ದಿಷ್ಟು

By Suvarna News  |  First Published Feb 3, 2021, 11:27 AM IST

10 ವರ್ಷಗಳ ಶ್ರಮಕ್ಕೆ ಸಿಕ್ಕ ಯಶಸ್ಸು: ಅನೀಶ್‌ ತೇಜೇಶ್ವರ್‌ | ಪ್ರೇಕ್ಷಕರು ಮೆಚ್ಚಿದ ರಾಮಾರ್ಜುನ


ಅನೀಶ್‌ ತೇಜೇಶ್ವರ್‌ ಮೊದಲ ಬಾರಿಗೆ ನಿರ್ದೇಶಿಸಿದ, ನಟಿಸಿದ ‘ರಾಮಾರ್ಜುನ’ ಸಿನಿಮಾ ಯಶಸ್ಸಿನತ್ತ ಮುಖ ಮಾಡಿದೆ. ಚಿತ್ರಕ್ಕೆ ಸಿಗುತ್ತಿರುವ ಈ ಗೆಲುವಿನಿಂದ ಅನೀಶ್‌ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಕಂ ನಿರ್ದೇಶಕ ಅನೀಶ್‌ ಹೇಳಿದ ಮಾತುಗಳು.

1. ‘ರಾಮಾರ್ಜುನ’ ಸಿನಿಮಾ ಎಲ್ಲಾ ಕಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಾಂತ 170ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿನಿಮಾ ತೆರೆಕಂಡಿದ್ದು, ಎಲ್ಲಾ ಕಡೆ ನಾಲ್ಕು ಶೋಗಳು ಪ್ರದರ್ಶನಗೊಳ್ಳುತ್ತಿವೆ. ಮುಂದಿನ ಶುಕ್ರವಾರದಿಂದ ಮತ್ತಷ್ಟುಚಿತ್ರಮಂದಿರಗಳು ಹೆಚ್ಚಾಗುತ್ತಿದ್ದು, ಇದು ಚಿತ್ರದ ಗೆಲುವನ್ನು ಸೂಚಿಸುತ್ತದೆ.

Latest Videos

undefined

2. ಸಾಮಾನ್ಯವಾಗಿ ನನ್ನ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಥಿಯೇಟರ್‌ಗಳ ಸಮಸ್ಯೆ ಎದುರಾಗುತ್ತಿತ್ತು. ಜನ ಚಿತ್ರಮಂದಿರಗಳಿಗೆ ಬರುವ ಹೊತ್ತಿಗೆ ಸಿನಿಮಾ ತೆಗೆಯುತ್ತಿದ್ದರು. ಈ ಬಾರಿ ಆ ಸಮಸ್ಯೆ ಬರಲಿಲ್ಲ. ನನಗೆ ಚಿತ್ರಮಂದಿರಗಳು ಸಿಕ್ಕಿವೆ. ಜನ ಸಿನಿಮಾ ನೋಡಲು ಬರುತ್ತಿದ್ದಾರೆ.

ಎಲ್ಲೆಲ್ಲೂ ರಶ್, ಥಿಯೇಟರ್‌ಗೆ ಯಾಕೆ ನಿರ್ಬಂಧ..? ಸರ್ಕಾರಕ್ಕೆ ಧ್ರುವ ಪ್ರಶ್ನೆ: ಸಾಥ್ ಕೊಟ್ಟ KGF ತಂಡ

3. ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮೈಸೂರು ಮುಂತಾದ ಕಡೆ ಒಳ್ಳೆಯ ಗಳಿಕೆ ಆಗುತ್ತಿದೆ. ಶೇ.80ರಷ್ಟುಪ್ರೇಕ್ಷಕರು ಬರುತ್ತಿದ್ದಾರೆ. ಬಿಡುಗಡೆಯಾದ ಆರಂಭದಲ್ಲಿ ಎರಡು ದಿನ ಜನ ಬರಲಿಲ್ಲ. ಮೂರನೇ ದಿನದಿಂದ ಚಿತ್ರಮಂದಿರಗಳಿಗೆ ಜನ ಬರಲು ಆರಂಭಿಸಿದರು. ನಮ್ಮ ಸಿನಿಮಾ ಜನಕ್ಕೆ ಇಷ್ಟವಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಲಾಕ್‌ಡೌನ್‌ ನಂತರ ಬಿಡುಗಡೆಯಾದ ಮೊದಲ ಆ್ಯಕ್ಷನ್‌ ಸಿನಿಮಾ ಎನಿಸಿಕೊಂಡಿದ್ದು ಮತ್ತಷ್ಟುಖುಷಿ ಕೊಟ್ಟಿದೆ.

4. ಈ ಚಿತ್ರದ ಯಯಶಸ್ಸಿನ ಮೂಲಕ ನನ್ನ ಹತ್ತು ವರ್ಷಗಳ ಶ್ರಮಕ್ಕೆ ಕೊನೆಗೂ ಫಲಿತಾಂಶ ಸಿಕ್ಕಿದೆ. ಇದು ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಗೆಲುವು ಹಾಗೂ ಪ್ರೇಕ್ಷಕರು ಕೊಟ್ಟಆಶೀರ್ವಾದ ಎಂದುಕೊಳ್ಳುತ್ತೇನೆ.

5. ಸಿನಿಮಾ ಮಾಡುವಾಗಲೇ ಮನರಂಜನೆ, ಆ್ಯಕ್ಷನ್‌ ಚಿತ್ರದ ಪ್ರಧಾನ ಅಂಶಗಳಾಗಬೇಕು ಎಂದುಕೊಂಡಿದ್ದೆ. ಹಾಗೆ ಕಮರ್ಷಿಯಲ್‌ ಕತೆಯಲ್ಲೂ ಏನಾದರು ಸಂದೇಶ ಹೇಳಬೇಕು ಅನಿಸಿತು. ಅದಕ್ಕೆ ತಕ್ಕಂತೆ ಒಂದು ಗಟ್ಟಿಯಾದ ಕತೆ ಸಿಕ್ಕಿತು.

ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಲಿದ್ದಾರೆ ಕರಾವಳಿ ಚೆಲುವೆ ರುಕ್ಮಿಣಿ ವಸಂತ್

6. ಮಾಧ್ಯಮಗಳಲ್ಲಿ ನನ್ನ ನಟನೆ ಜತೆಗೆ ನಿರ್ದೇಶನವನ್ನೂ ಮೆಚ್ಚಿ ಬರೆದಿದ್ದಾರೆ. ಇದು ನನ್ನ ಜವಾಬ್ದಾರಿ ಮತ್ತಷ್ಟುಹೆಚ್ಚಿಸಿದೆ. ಗೆಳೆಯ ರಕ್ಷಿತ್‌ ಶೆಟ್ಟಿಹಾಗೂ ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್‌ ಗೌಡ ನನಗೆ ಜತೆಯಾಗಿದ್ದು ಚಿತ್ರ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಲು ಸಾಧ್ಯಯಿತು.

7. ನನ್ನ ಮತ್ತು ನಿಶ್ವಿಕಾ ನಾಯ್ಡು ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮುಂದೆ ಇನ್ನಷ್ಟುಒಳ್ಳೆಯ ಕತೆಗಳನ್ನು ಹೇಳಬೇಕು ಎನ್ನುವ ಉತ್ಸಾಹ ಹೆಚ್ಚಾಗಿದೆ. ಅದಕ್ಕೆ ಕಾರಣ ‘ರಾಮಾರ್ಜುನ’ ಚಿತ್ರದ ಯಶಸ್ಸು.

click me!