ಸುದೀಪ್ ಪುತ್ರಿಯ ಹಾಡು ವೈರಲ್ | ಪಾಪ್ ಸಾಂಗ್ ಹಾಡಿದ ಕಿಚ್ಚನ ಮಗಳು | ವಿಡಿಯೋ ವೀಕ್ಷಿಸಿದ್ರು 50 ಸಾವಿರಕ್ಕೂ ಹೆಚ್ಚು ಜನ
ಸುದೀಪ್ ಮಗಳು ಸಾನ್ವಿ ತನ್ನ ಸಾನ್ವಿ ಸುದೀಪ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡಿರುವ ‘ರೈಸ್ ಅಪ್’ ಹಾಡು ವೈರಲ್ ಆಗಿದೆ. ಸ್ವತಃ ಸುದೀಪ್ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ಸದ್ಯ ಹೈದರಾಬಾದ್‌ನಲ್ಲಿ ಓದುತ್ತಿರುವ ಸಾನ್ವಿ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಮ್ಯೂಸಿಕ್ ವಿದ್ಯಾರ್ಥಿನಿಯೂ ಹೌದು. ‘ರೈಸ್ ಅಪ್’ ಅಮೆರಿಕಾದ ಖ್ಯಾತ ಗಾಯಕಿ ಆ್ಯಂಡ್ರಾ ಡೇ ಅವರ ಜನಪ್ರಿಯ ಪಾಪ್ ಸಾಂಗ್. ಐವತ್ತು ಸಾವಿರಕ್ಕೂ ಅಧಿಕ ಮಂದಿ ಸಾನ್ವಿಯ ಗಾಯನವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಫೆ.19ಕ್ಕೆ ಬಿಡುಗಡೆ ಸಜ್ಜಾಗಿರುವ ಪೊಗರು ಚಿತ್ರಕ್ಕೆ ಶಾಕ್!
ಸುದೀಪ್ ಈ ಬಗ್ಗೆ, ‘ಮಗಳಿಗೆ ದೇವರು ಸುಮಧುರ ಕಂಠ ಕೊಟ್ಟಿದ್ದಾನೆ. ಒಬ್ಬ ತಂದೆಯಾಗಿ ನನಗಿದು ಹೆಮ್ಮೆ. ನಾನು ಅರ್ಜುನ್ ಜನ್ಯಾ ಬಳಿ ಆಗಾಗ ಹೇಳ್ತಾ ಇರ್ತೀನಿ, ಮಗಳಿಗೆ ಟ್ರ್ಯಾಕ್ ಹಾಡಲು ಅವಕಾಶ ಕೊಡಿ ಅಂತ.
ನಾನೊಬ್ಬ ನಟನಾಗಿ ಅವಳನ್ನು ಸಪೋರ್ಟ್ ಮಾಡೋದಕ್ಕಿಂತ ಹೆಚ್ಚಾಗಿ ಒಬ್ಬ ತಂದೆಯಾಗಿ ಅವಳ ಪ್ರತಿಭೆಯಿಂದಲೇ ಅವಳು ಮೇಲೆ ಬರೋ ಹಾಗಾಗಲಿ ಎಂದು ಹಾರೈಸುತ್ತೇನೆ’ ಎನ್ನುತ್ತಾರೆ.