
ಬೆಂಗಳೂರು(ಜೂ. 07) ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಸ್ಯಾಂಡಲ್ ವುಡ್‌ಗೆ ಅತಿ ದೊಡ್ಡ ಆಘಾತವಾಗಿದೆ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ಚಿರು ದಾಖಲಾಗಿದ್ದರು. ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ ನಂತರ ಅನೇಕ ಚಿತ್ರಗಳಲ್ಲಿ ಮಿಂಚಿದ್ದರು.
"
ಈ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟಾಕ್ ಸಾಧ್ಯತೆ ಹೆಚ್ಚು
ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಒಂದು ಗಂಟೆ ಹಿಂದೆ ಎಲ್ಲರೊಂದಿಗೆ ಮಾತನಾಡುತ್ತಿದ್ದ ಸರ್ಜಾ ಮೈ ಬೆವರಲು ಆರಂಭವಾದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ವೇಳೆಗೆ ಚಿರು ಈ ಲೋಕದ ಪ್ರಯಾಣ ಮುಗಿಸಿದ್ದರು.
ಚಿರಂಜೀವಿ ಸರ್ಜಾ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು ಕುಟುಂಬಕ್ಕೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಣ್ಣನ 'ಶಿವಾರ್ಜುನ' ಸಿನಿಮಾ ನೋಡಿ ಧ್ರುವ ಪ್ರತಿಕ್ರಿಯಿಸಿದ್ದು ಹೀಗೆ!...
ದಂಡಂ ದಶಗುಣಂ, ವರದ ನಾಯಕ, ಆಟಗಾರ, ಸಿಂಗ ಸೇರಿ 22 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿರಂಜೀವಿ ಸರ್ಜಾ ಹಿರಿಯ ನಟ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಕನ್ನಡದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಲಾಕ್ ಡೌನ್ ಸಂದರ್ಭವನ್ನು ಫ್ಯಾಮಿಲಿಯೊಂದಿಗೆ ಕಳೆಯುತ್ತಿದ್ದ ಸರ್ಜಾ ಟಿಕ್ ಟಾಕ್ ಮೂಲಕವೂ ಅನೇಕ ವಿಡಿಯೋ ಮಾಡಿ ಲೈಕ್ ಪಡೆದುಕೊಂಡಿದ್ದರು.
Watch LIVE UPDATES Here- https://kannada.asianetnews.com/live-tv
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.