ಪೃಥ್ವಿ ಅಂಬರ್ ಹಾಗೂ ಮಾನ್ವಿತಾ ಕಾಮತ್ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘ಹ್ಯಾಪಿಲಿ ಮ್ಯಾರೀಡ್’ ಶೀಘ್ರದಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಲಿದೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಇತ್ತೀಚೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ನಾಯಕ ಪೃಥ್ವಿ ಅಂಬರ್, ‘ಗಂಡ ಹೆಂಡತಿ ಜಗಳ ಎಲ್ಲಾ ಕಡೆ ನಡೆಯುತ್ತೆ. ಆದರೆ ನಾವು ಹೊಸ ಬಗೆಯ ನರೇಶನ್‌ನಲ್ಲಿ ಕತೆ ಹೇಳಲಿದ್ದೇವೆ. ಮದುವೆಯಾದ ಬಳಿಕ ಬದಲಾಗುತ್ತಾ ಹೋಗುವ ಗಂಡ ಹೆಂಡತಿ ಮನಸ್ಥಿತಿಯನ್ನು ಕಟ್ಟಿಕೊಡುವ ಸಿನಿಮಾ. ಒಂದು ಮನೆಯೊಳಗೆ ಇಡೀ ಸಿನಿಮಾ ನಡೆಯುತ್ತದೆ.
ನವೆಂಬರ್‌ನಲ್ಲಿ ಕಲಿವೀರ ಮರು ಬಿಡುಗಡೆ
ವಾಸ್ತವ ನೆಲೆಯಲ್ಲಿ ಮಸಾಲೆಗಳಿಲ್ಲದೇ ಎಮೋಶನ್, ಸೈಕಾಲಜಿಗಳೇ ಪ್ರಧಾನವಾಗಿರುವ ಚಿತ್ರ. ಇದು ಥಿಯೇಟರ್‌ಗಿಂತಲೂ ಓಟಿಟಿಗೆ ಸೂಕ್ತವಾದ ಕಾರಣ ಇದನ್ನು ಓಟಿಟಿಗೆ ಬಿಡುಗಡೆ ಮಾಡಲು ಚಿಂತಿಸುತ್ತಿದ್ದೇವೆ. ಕ್ಲಾಸಿ ಆಡಿಯನ್ಸ್‌ಗೆ ಇಷ್ಟವಾಗುವ ಸೀರಿಯಸ್ ಚಿತ್ರವಿದು. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ’ ಎಂದಿದ್ದಾರೆ.
ಚಿತ್ರದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ, ಧರ್ಮಣ್ಣ ಮೊದಲಾದವರಿದ್ದಾರೆ. ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಷಿಯಸ್ ನಿರ್ದೇಶನವಿದೆ. ಚಿತ್ರಕ್ಕೆ ಬಿ.ಜಿ. ಅರುಣ್, ಜೋಸ್ ಕುಟ್ಟಿಮದತ್ತಿಲ್, ರಂಜಿತ್ ಮನಂಬರಕ್ಕಟ್ ಬಂಡವಾಳ ಹೂಡಿದ್ದಾರೆ.