ಉಳಿದಿದ್ದೇ ಹೆಚ್ಚು, ಕಷ್ಟ ಆಗಿತ್ತು; 'ತಲೆದಂಡ' ಚಿತ್ರದ ಬಗ್ಗೆ ಸಂಚಾರಿ ವಿಜಯ್ ಮನವಿ!

By Suvarna NewsFirst Published Mar 9, 2021, 2:56 PM IST
Highlights

'ತಲೆದಂಡ' ಚಿತ್ರಕ್ಕೆ ಅನ್ಯಾಯ ಆಗುತ್ತಿರುವ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂಚಾರಿ ವಿಜಯ್ ಮಾತನಾಡಿದ್ದಾರೆ. ಚಿತ್ರ ಯಾವುದರಲ್ಲೂ ಕಡಿಮೆ ಇಲ್ಲ....

ಮಾರ್ಚ್ 24ರಿಂದ 31ರವೆಗೆ 31ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಆರಂಭವಾಗಲಿದೆ. ಸುಮಾರು 11 ಪರದೆಗಳಲ್ಲಿ 50ಕ್ಕೂ ಹೆಚ್ಚು ದೇಶಗಳ 200 ಅತ್ಯುತ್ತಮ ಚಿತ್ರಗಳು ಪ್ರದರ್ಶಿಸಲಾಗುತ್ತದೆ.ಈ ಚಿತ್ರಗಳ ಪೈಕಿ ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಸಿನಿಮಾ ಸಾಲಿನಿಂದ ಹೊರ ಬಂದಿದೆ. ಸಾಮಾಜಕ್ಕೆ ಸಂದೇಶ ಸಾರುವ ಈ ಚಿತ್ರವನ್ನು ತೆಗೆದು ಹಾಕಿರುವುದರ ಬಗ್ಗೆ ವಿಜಯ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'!

'ತಲೆದಂಡ ಸಿನಿಮಾ 2020ರಲ್ಲಿ ಸೆನ್ಸಾರ್ ಪಡೆದುಕೊಂಡಿದೆ. ಈ ಸಿನಿಮಾವನ್ನು ಇದೇ ವರ್ಷ ಸ್ಪರ್ಧೆಗೆ ಪರಿಗಣಿಸಬೇಕು. ಮುಂದಿನ ವರ್ಷ ಪರಿಗಣಿಸಲಾಗುವುದಿಲ್ಲ. ನಾವು ಅವರಿವರ ಕಾಲು ಹಿಡಿದು ದುಡ್ಡು ಹೊಂದಿಸಿ, ಸಿನಿಮಾ ಮಾಡಲಾಗಿದೆ. ಈಗ ಸಿನಿಮಾಗೆ ಅನ್ಯಾಯವಾಗುತ್ತಿದೆ,' ಎಂದು ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾತನಾಡಿದ್ದಾರೆ.

'ಸಾಮಾಜಿಕ ಕಳಕಳಿ ಇರುವ ಚಿತ್ರ ತಲೆದಂಡ. ಮರಗಳನ್ನು ಕಡಿಯಬೇಡಿ. ಇದರಿಂದ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತದೆ ಎಂಬ ಮೆಸೇಜ್ ಸಾರುವ ಸಿನಿಮಾ. ಪರಿಸರ ಜಾಗೃತಿ ಮೂಡಿಸುವ ಸಿನಿಮಾ ಸ್ಪರ್ಧೆಯಿಂದ ಯಾಕೆ ಹೊರ ಬಂದಿದೆ, ಅಂತ ನಿಜಕ್ಕೂ ಗೊತ್ತಿಲ್ಲ. ಪೇಪರ್‌ನಲ್ಲಿ ಈ ವಿಚಾರ ನೋಡಿ ಬೇಸರವಾಗಿದೆ,' ಎಂದು ವಿಜಯ್ ಹೇಳಿದ್ದಾರೆ.

ಬ್ಯಾಡ್ಮಿಂಟನ್‌ ಕೋರ್ಟ್‌ಗೆ ಸುದೀಪ್ ದಿಢೀರ್ ಭೇಟಿ; ವಿಜಯ್ ಮುಸ್ಸಂಜೆ ಮಾತು! 

'ತಲೆದಂಡ ಸಿನಿಮಾ ಬಹಳ ಕಷ್ಟಪಟ್ಟು ಮಾಡಲಾಗಿದೆ. ನಾನು ಕಷ್ಟಪಟ್ಟು ನಟಿಸಿದ್ದೇನೆ, ಕೆಲವೊಂದು ಸನ್ನಿವೇಶದಲ್ಲಿ ಜೀವವನ್ನು ಒತ್ತೆ ಇಟ್ಟು ನಟಿಸಿದ್ದೇನೆ. ಬದುಕುಳಿದಿದ್ದೇ ಹೆಚ್ಚು ಅನ್ನೋ ಸನ್ನಿವೇಶಗಳು ಇದ್ದವು. ಇಂತ ಸಿನಿಮಾ ಅನ್ಯಾಯವಾಗಿದೆ. ದಯವಿಟ್ಟು ಎಲ್ಲರೂ ಪ್ರಶ್ನೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಿ,' ಎಂದು ವಿಜಯ್ ಮನವಿ ಮಾಡಿದ್ದಾರೆ.

click me!