ಸರ್ಕಾರದ ಎಚ್ಚರಿಕೆ, ಶೂಟಿಂಗ್‌ಗೆ ಮಕ್ಕಳನ್ನು ಬೇಕಾಬಿಟ್ಟಿ ಬಳಸಿಕೊಳ್ಳುವಂತಿಲ್ಲ; ಷರತ್ತುಗಳು ಅನ್ವಯ!

By Shriram Bhat  |  First Published Feb 14, 2024, 4:24 PM IST

ಶಿಕ್ಷಣ ಪಡೆಯುತ್ತಿರುವ ಮಕ್ಕಳು, ಸ್ಕೂಲಿಗೆ ರಜಾ ಹಾಕಿ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ಕೂಲಿನಿಂದ ಪರ್ಮಿಷನ್ ತೆಗೆದುಕೊಂಡು ಹೋಗುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣದಿಂದ ವಂಚಿತರಾಗುವ ಎಲ್ಲಾ ಲಕ್ಷಣಗಳು ಈ ಮೂಲಕ ಎದುರಾಗಬಹುದು ಎಂಬ ಕಳಕಳಿ ಸರ್ಕಾರದಿಂದ ಕೇಳಿಬರುತ್ತಿದೆ.


ಇತ್ತೀಚೆಗೆ ಚಿಕ್ಕಚಿಕ್ಕ ಮಕ್ಕಳು ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವುದು ಮೊದಲಿಗಿಂತ ಸ್ವಲ್ಪ ಹೆಚ್ಚಾಗಿದೆ ಎನ್ನಬಹುದು. ಶಿಕ್ಷಣ ಪಡೆಯುತ್ತಿರುವ ಮಕ್ಕಳು, ಸ್ಕೂಲಿಗೆ ರಜಾ ಹಾಕಿ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ಕೂಲಿನಿಂದ ಪರ್ಮಿಷನ್ ತೆಗೆದುಕೊಂಡು ಹೋಗುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣದಿಂದ ವಂಚಿತರಾಗುವ ಎಲ್ಲಾ ಲಕ್ಷಣಗಳು ಈ ಮೂಲಕ ಎದುರಾಗಬಹುದು ಎಂಬ ಕಳಕಳಿ ಸರ್ಕಾರದಿಂದ ಕೇಳಿಬರುತ್ತಿದೆ. ಇದಕ್ಕೆ ಪರಿಹಾರ ಮಾರ್ಗವಾಗಿ ಕೆಲವು ಷರತ್ತುಗಳನ್ನು ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರ ಮಾತ್ರವಲ್ಲ, ಸಮಾಜದಿಂದಲೂ ಈ ಬಗ್ಗೆ ಹಲವಾರು ಬಾರಿ ಕಾಳಜಿ ವ್ಯಕ್ತಪಡಿಸಲಾಗಿದೆ.

ಮಕ್ಕಳು ಬಾಲ‌ ನಟರಾಗಿ ಅಭಿನಯಿಸಲು ಇರುವ ಷರತ್ತುಗಳು ಹೀಗಿವೆ: 

Latest Videos

undefined

ಸಿನಿಮಾ ಧಾರವಾಹಿಯಲ್ಲಿ ನಟಿಸೋಕೆ ಮಕ್ಕಳಿಗೆ ಇರುವ ಕಂಡೀಷನ್ಸ್ ಬಗ್ಗೆ ಮನರ್ ಮನನ ಮಾಡುವ ಸುತ್ತೋಲೆ 

ಬಾಲ‌ಕಾರ್ಮಿಕ ವಿರೋಧಿ ಕಾಯ್ದೆ ಮನರಂಜನಾ ಕ್ಷೇತ್ರಕ್ಕೂ ಅನ್ವಯ ಆಗುತ್ತೆ

ಸಿನಿಮಾ ಸೀರಿಯಲ್ ನಲ್ಲಿ ನಟಿಸೋ ಮಕ್ಕಳ ಬಗ್ಗೆ ಕ್ರಮ ವಹಿಸಲು ಸೂಚನೆ 

ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ನಟಿಸೋಕು ಮುಂಚೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು

ಮಕ್ಕಳು ನಟಿಸೋಕೆ ಕಾರ್ಯಕ್ರಮದ ಆಯೋಜಕರು, ನಿರ್ಮಾಪಕರು ದಂಡಾಧಿಕಾರಿಗಳ ಅನುಮತಿ ಪಡೆಯಬೇಕು

ಶೂಟಿಂಗ್‌ನಲ್ಲಿ 5 ಘಂಟೆಗೂ ಹೆಚ್ಚು ಅವಧಿ ಮಕ್ಕಳನ್ನ ಬಳಸುವಂತಿಲ್ಲ

ಶಿಕ್ಷಣಕ್ಕೆ ತೊಂದರೆಯಾಗದಂತೆ 27 ದಿನಕ್ಕಿಂತ ಹೆಚ್ಚು ದಿನಗಳು ಮಕ್ಕಳನ್ನ ತೊಡಗಿಸಿಕೊಳ್ಳದಂತೆ  ನೋಡಿಕೊಳ್ಳಬೇಕು

ಸದ್ಯ ಎಲ್ಲಾ ಸುತ್ತೋಲೆ ಚಲನ ಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ,  ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದಲಾಗಿದೆ

ಕಾಯಿದೆಯಲ್ಲಿ ಇರುವ ನಿಯಮಗಳನ್ನು ಅನುಕರಿಸಲು ಕ್ರಮವಹಿಸಲು ಸೂಚನೆ

ಸೂಚನೆ: ಹಳೆಯ ಆದೇಶವನ್ನ ಮತ್ತೆ ಸುತ್ತೋಲೆ ಮೂಲಕ ಪ್ರಕಟಿಸಿದ  ಕಾರ್ಮಿಕ ಇಲಾಖೆ 

ಹೊಂದಿಕೆ ಇಲ್ಲ ಅಂದರೆ ಬದುಕಬಹುದು, ಹೊಂದಾಣಿಕೆ ಇಲ್ಲ ಅಂದ್ರೆ ಕಷ್ಟ; For REGNಗೆ ರೆಡಿಯಾಗ್ರಿ!

ಈ ಮೂಲಕ ಚಿಕ್ಕ ಮಕ್ಕಳನ್ನು ಶೂಟಿಂಗ್‌ಗೆ ಕಳಿಸುವ ಪೋಷಕರಿಗೆ, ಶಾಲೆಗಳಿಗೆ ಹಾಗೂ ಮಕ್ಕಳನ್ನು ನಟನೆ-ಮನರಂಜನೆ ಉದ್ಯಮದಲ್ಲಿ ಬಳಸಿಕೊಳ್ಳುವವರಿಗೆ ಷರತ್ತು ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಮನರಂಜನೆ ಹೆಸರಿನಲ್ಲಿ ಮುಗ್ಧ ಮಕ್ಕಳನ್ನು ಬೇಕಾಬಿಟ್ಟಿ ಬಳಸಿಕೊಳ್ಳುವವರಿಗೆ ಈ ಮೂಲಕ ಛಾಟಿ ಬೀಸಲಾಗಿದೆ.

ಏನಿಲ್ಲ ಏನಿಲ್ಲ, ರಾಜ್-ವಿಷ್ಣು ಮಧ್ಯೆ ಏನೇನೂ ಇರಲಿಲ್ಲ; ಆದ್ರೂ ಯಾಕೆ ಸ್ಟಾರ್ ವಾರ್ ಸೃಷ್ಟಿಸಲಾಯ್ತು!

click me!