
ಸಲ್ಮಾನ್ ಖಾನ್ ನಿರೂಪಣೆಯ ರಿಯಾಲಿಟಿ ಶೋ ಬಿಗ್ ಬಾಸ್ 19 ರಲ್ಲಿ ಭಾಗವಹಿಸಿದಾಗಿನಿಂದ ಹಿರಿಯ ನಟಿ ಕುನಿಕಾ ಸದಾನಂದ್ ಸುದ್ದಿಯಲ್ಲಿದ್ದಾರೆ. ಆದಾಗ್ಯೂ, ವೀಕೆಂಡ್ ಕಾ ವಾರ್ ವಿಭಾಗದಲ್ಲಿ ಸಲ್ಮಾನ್ ಕುನಿಕಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಹಲವಾರು ಆರೋಪಗಳನ್ನು ಎದುರಿಸಿದ್ದಾರೆ. ಈಗ, ಯುವ ಸಲ್ಮಾನ್ ಅವರ ಹಳೆಯ ಕ್ಲಿಪ್ ಪ್ರಶಸ್ತಿ ಸಮಾರಂಭದಿಂದ ಹೊರಬಂದಿದ್ದು, ಇದು ಅವರ ಜೊತೆಗಿರುವ ಮಹಿಳೆಯ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ, ಅವರನ್ನು ಕುನಿಕಾ ಎಂದು ಭಾವಿಸಲಾಗಿದೆ. ಇದರಲ್ಲಿ ಷರ್ಟ್ಲೆಸ್ ಸಲ್ಮಾನ್ ಖಾನ್ (Salman Khan) ಅತ್ಯಂತ ಆತ್ಮೀಯವಾಗಿ ಮಹಿಳೆಯ ಜೊತೆ ನರ್ತಿಸುವುದನ್ನು ನೋಡಬಹುದಾಗಿದೆ. ಇವರಿಬ್ಬರು ಸಕತ್ ಹಾಟ್ ಆಗಿ ಡಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಆ ಮಹಿಳೆಯನ್ನು ಸಲ್ಮಾನ್ ಖಾನ್ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಇದು ಕುನಿಕಾ ಎಂದು ಭಾವಿಸಿ ಅದರ ವಿಡಿಯೋ ವೈರಲ್ ಮಾಡಲಾಗಿದೆ.
ಇದನ್ನೂ ಓದಿ: ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್ ರಾಜ್ ನೋವಿನ ನುಡಿ...
ಆದರೆ ಅಸಲಿಯತ್ತೇ ಬೇರೆ. ಈ ಮಹಿಳೆ ಕುನಿಕಾ ಅಲ್ಲ, ಬದಲಿಗೆ ಪ್ರಕಾಶ್ ರಾಜ್ ಅವರ ಪತ್ನಿ ಪೋನಿ ವರ್ಮಾ (Pony Verma) ಎನ್ನಲಾಗಿದೆ. ಕಪ್ಪು ಬಣ್ಣದ ತುಂಡುಡುಗೆ ಧರಿಸಿ, ಹಿಮ್ಮಡಿ ಹಾಕಿಕೊಂಡು ಹಾಟ್ ಡಾನ್ಸ್ ಮಾಡಿರುವ ವಿಡಿಯೋ ಇದಾಗಿದೆ. ಕೊನೆಯಲ್ಲಿ ಸಲ್ಮಾನ್ ಖಾನ್ ಪೋನಿ ಅವರನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ವೇದಿಕೆಯ ಮೇಲೆ ಶರ್ಟ್ ಇಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ. ಅಷ್ಟಕ್ಕೂ ಇದು ವೈರಲ್ ಆಗಲು ಕಾರಣ, ಈಕೆ ಹಾಲಿ ಬಿಗ್ಬಾಸ್ ಸ್ಪರ್ಧಿ, ಸಲ್ಮಾನ್ ಖಾನ್ ಭಾರಿ ಪಕ್ಷಪಾತ ಮಾಡುತ್ತಿದ್ದಾರೆ ಎನ್ನಲಾದ ಕುನಿಕಾ ಎನ್ನುವ ಕಾರಣಕ್ಕೆ. ಆದರೆ, ಇದೀಗ ಬೇರೆಯದ್ದೇ ರೂಪ ಪಡೆದುಕೊಂಡಿದೆ. ವಿಡಿಯೋ ವೈರಲ್ ಆಗಿದ್ದ ಕಾರಣವೇ ಬೇರೆ, ಈಗ ಈ ಮಹಿಳೆ ಪ್ರಕಾಶ್ ರಾಜ್ (Prakash Raj) ಪತ್ನಿ ಎಂದು ತಿಳಿದ ಮೇಲೆ ಬೇರೆ ರೀತಿಯಲ್ಲಿ ವೈರಲ್ ಆಗ್ತಿದೆ.
ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ಕ್ಲಿಪ್ ಅನ್ನು ಹತ್ತಿರದಿಂದ ನೋಡಿದರೆ ವಿಡಿಯೋದಲ್ಲಿ ಇರುವ ಮಹಿಳೆ ಕುನಿಕಾ ಅಲ್ಲ ಆದರೆ ಪೋನಿ ಎಂದು ತೋರಿಸುತ್ತದೆ. ಅಂದಹಾಗೆ, ಪೋನಿ ಅವರು ಪ್ರಕಾಶ್ ರಾಜ್ ಅವರ ಎರಡನೆಯ ಪತ್ನಿ. ಮೊದಲ ಪತ್ನಿ ಲಲಿತಾ. ಅವರು ನಟಿ ಡಿಸ್ಕೋ ಶಾಂತಿ ಅವರ ಸಹೋದರಿ. ಬೇರೆ ರಾಜ್ಯಗಳಿಂದ ಬರುವ ಜನರಿಗೆ ಉಳಿದುಕೊಳ್ಳಲು ನಟಿ ಡಿಸ್ಕೋ ಶಾಂತಿ ತಮ್ಮ ಮನೆಯಲ್ಲಿ ಜಾಗ ಕೊಡುತ್ತಿದ್ದರಂತೆ. ಆಗ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ಅವರು ಶೂಟಿಂಗ್‌ಗಾಗಿ ಕರ್ನಾಟಕದಿಂದ ತಮಿಳುನಾಡಿಗೆ ಹೋಗಿ ಅಲ್ಲಿ ಡಿಸ್ಕೋ ಶಾಂತಿ ಮನೆಯಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದರಂತೆ. ಆಗ ಪರಿಚಯವಾದವರೇ ಡಿಸ್ಕೋ ಶಾಂತಿ ತಂಗಿ ಲಲಿತಾ ಕುಮಾರಿ. ಆದರೆ ಇವರ ವೈವಾಹಿಕ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಬಳಿಕ ಪ್ರಕಾಶ್ ಅವರು 2010ರಲ್ಲಿ ಪೋನಿ ವರ್ಮಾ ಅವರನ್ನು ಮದುವೆಯಾದರು.
ಇದನ್ನೂ ಓದಿ: ಕೇಸ್ ಹಾಕೋ ಭರದಲ್ಲಿ ಅಂತೂ ಸತ್ಯ ಒಪ್ಪಿಕೊಂಡು ಬಿಟ್ರಾ ಪ್ರಕಾಶ್ ರಾಜ್? ಥ್ಯಾಂಕ್ಯೂ ಸರ್ ಅಂತಿರೋ ಟ್ರೋಲಿಗರು!
ಅಂದಹಾಗೆ ಪೋನಿ ವರ್ಮಾ ಅವರ ನಿಜವಾದ ಹೆಸರು ರಶ್ಮಿ ವರ್ಮಾ, ಮತ್ತು ಅವರು 2000 ರಲ್ಲಿ ನೃತ್ಯ ಸಂಯೋಜಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಚಕ್ ಧೂಮ್ ಧೂಮ್ ಎಂಬ ನೃತ್ಯ ರಿಯಾಲಿಟಿ ಶೋ ಅನ್ನು ಮಾಡಿದರು ಮತ್ತು ಆಗಸ್ಟ್ 2010 ರಲ್ಲಿ ನಟ ಪ್ರಕಾಶ್ ರಾಜ್ ಅವರನ್ನು ವಿವಾಹವಾದರು. ಪೋನಿ ಯೇ ತೇರಾ ಘರ್ ಯೇ ಮೇರಾ ಘರ್, ಬಾಜ್: ಎ ಬರ್ಡ್ ಇನ್ ಡೇಂಜರ್, ಹಂಗಾಮಾ, ಪೊನ್ನಿಯಿನ್ ಸೆಲ್ವನ್ (2005), ಮಾಲಾಮಾಲ್ ವೀಕ್ಲಿ, ಚುಪ್ ಚುಪ್ ಕೆ, ಆಪ್ ಕಾ ಸುರೂರ್, ಭೂಲ್ ಭುಲೈಯಾ (2007), ದಿ ಡರ್ಟಿ ಪಿಕ್ಚರ್, ಟೈಗರ್ ಜಿಂದಾ ಹೈ ಮುಂತಾದ ಚಲನಚಿತ್ರಗಳಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.