
ಕನ್ನಡ ಚಿತ್ರರಂಗದ (Sandalwood) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ವಿಕ್ರಾಂತ್ ರೋಣ ನಂತರ ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ, ಯಾರು ನಿರ್ದೇಶಕರು ಎಂದು ಪದೇ ಪದೇ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೀಗ ನಿರ್ದೇಶ ಸುಜಿತ್ (Saaho Sujith) ಉತ್ತರ ಕೊಟ್ಟಿದ್ದಾರೆ. ಪೋಸ್ಟರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಿಚ್ಚ ಅಭಿಮಾನಿಗಳು ಹಂಚಿಕೊಂಡು ವೈರಲ್ ಮಾಡುತ್ತಿದ್ದಾರೆ.
ಹೊಸ ವರ್ಷದ ತಿಂಗಳಲ್ಲಿ ಅಭಿಮಾನಿಗಳಿಗೆ ಏನಾದರೂ ಗುಡ್ ನ್ಯೂಸ್ ಕೊಡಬೇಕೆಂದು ಸಾಹೋ ನಿರ್ದೇಶಕ ಸುಜಿತ್ ಸುದೀಪ್ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾರೆ. ನಮಸ್ತೆ ಗೋಪ್ಪ (Namaste Goppa) ಎಂದು ಶೀರ್ಷಿಕೆ ಮತ್ತು ಪೋಸ್ಟರ್ ಲುಕ್ ರಿವೀಲ್ ಮಾಡಿದ್ದಾರೆ. ಸುದೀಪ್ ಕೈಯಲ್ಲಿ ಕ್ಯಾಂಡಲ್ (Candel) ಸ್ಟ್ಯಾಂಡ್ ಹಿಡಿದುಕೊಂಡು ನಿಂತಿದ್ದಾರೆ.
ಸಾಹೋ ನಿರ್ದೇಶಕರೊಂದಿಗೆ ಸಿನಿಮಾವಿಲ್ಲ, ಫೇಕ್ ಎಂದ ಕಿಚ್ಚ ಸುದೀಪ್
ಸಾಹೋ ನಿರ್ದೇಶಕರು ಸುದೀಪ್ ಹೊಸ ಸಿನಿಮಾ ಪ್ರಾಜೆಕ್ಟ್ ಬಗ್ಗೆ ಟ್ಟೀಟ್ ಮಾಡಿದ್ದಾರೆ ಎಂದು ಸುವರ್ಣನ್ಯೂಸ್.ಕಾಮ್ ಸುದ್ದಿ ಮಾಡಿತ್ತು. ಆದರೆ, ಇಂಥದ್ದೊಂದು ಟ್ವೀಟಿಗೆ ಯಾವುದೇ ಆಧಾರವಿಲ್ಲವೆಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದು, ಈ ಟ್ವೀಟ್ ಬಗ್ಗೆ ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೆಳಕಂಡಂತೆ ಟ್ಟೀಟ್ ಮಾಡಲಾಗಿದೆ:
ಈ ಪೋಸ್ಟರ್ ಜೊತೆಗೆ ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone), ರಾಣಾ ದಗ್ಗುಬಾಟಿ (Rana Dagubatti), ಕನ್ನಡತಿ ಶಾನ್ವಿ ಶ್ರೀವಾತ್ಸವ್ (Shanvi Srivastav), ಜೆನಿಲಿಯಾ (Genelia) ಮತ್ತು ರಮೇಶ್ ಕುಮಾರ್ ಅವರನ್ನು (Ramesh Kumar) ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಸಣ್ಣ ಸುಳಿವು ಸಿಕ್ಕಿದೆ. ಡಿಸೆಂಬರ್ 26, 2021ರಂದು ಸುದೀಪ್ ಸಿನಿಮಾ ಒಪ್ಪಿಕೊಂಡಿದ್ದಾರೆ, ಎಂದು ಟ್ವೀಟ್ ಮಾಡಿದ್ದರು. ಆದರೆ ಆಗ ಬೇರೆ ವ್ಯಕ್ತಿಗಳನ್ನು ಟ್ಯಾಗ್ ಮಾಡಿದ್ದರು.
'ನನ್ನ ಮುಂದಿನ ಪ್ರಾಜೆಕ್ಟ್ ನಮ್ಮ ಕಿಚ್ಚ ಸುದೀಪ್ ಸರ್ ಜೊತೆ. 'ದಿ ಸಿಂಗುಲಾರಿಟಿ' ಒಂದು ಪ್ರಾಚೀನ ಟೆರಾನ್ ಟ್ರೋಪ್ ಟೆರಾನ್ ಆಧಾರಿತ ಕಥೆ the fear that we would treat you as you have treated yourselves they spoke softly amidst the glowing vista' ಎಂದು ಬರೆದುಕೊಂಡಿದ್ದರು. ಈ ವೇಳೆ ಜೀ ಬ್ಯುಸಿನೆಸ್, ಜೀ ಸ್ಟುಡಿಯೋ (Zee Studio), ಬಾಲಿವುಡ್ ನಟಿ ದಿಶಾ ಪಟಾಣಿ (Disha Patani), ಇಮ್ರಾನ್ ಹಶ್ಮಿ (Emraan Hashmi) ಫ್ಯಾನ್ ಪೇಜ್ ಮತ್ತು ಹ್ಯಾಟ್‌ಗ್ಯಾಟ್ ವಿಕ್ರಾಂತ್ ರೋಣ,' ಎಂದು ಬರೆದುಕೊಂಡಿದ್ದರು.
ನಿರ್ದೇಶಕ ಸುಜಿತ್ ಬಳಸುತ್ತಿರುವ ಟ್ಯಾಗ್ ನೋಡಿದರೆ ಇದು ಜೀ ಸಂಸ್ಥೆ ಜೊತೆ ಕೈ ಜೋಡಿ ಮಾಡುತ್ತಿರುವ ಸಿನಿಮಾ ಎಂದುಕೊಳ್ಳಬಹುದು. ಆದರೆ ಸ್ಟಾರ್ ನಟಿಯರು ಇರುವ ಕಾರಣ ಇಲ್ಲಿ ಯಾರು ನಟಿ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಾಲಿವುಡ್ ಮತ್ತು ಟಾಲಿವುಡ್ ಮಂದಿ ನಡುವೆ ನಮ್ಮ ಕನ್ನಡತಿ ಸಾನ್ವಿ ಶ್ರೀವಾತ್ಸವ್ ಹೆಸರು ಇರುವುದು ಎಲ್ಲರಿಗೂ ಹೆಮ್ಮೆ ತಂದುಕೊಟ್ಟಿದೆ. ಜೆನಿಲಿಯಾ ಮತ್ತು ಸುದೀಪ್ ಬಹಳ ವರ್ಷಗಳಿಂದ ಸ್ನೇಹಿತರು. ಬೆಂಗಳೂರಿಗೆ (Bengaluru) ಆಗಮಿಸಿದಾಗಲೆಲ್ಲಾ ಸುದೀಪ್ ಮನೆ ಆತಿಥ್ಯವನ್ನು ಸ್ವೀಕರಿಸುತ್ತಾರೆ, ಸುದೀಪ್ ಜೊತೆ ಸಮಯ ಕಳೆದು, ಸೆಲ್ಫೀ ಕ್ಲಿಕ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
"
83 ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ನಿರ್ಮಾಪಕಿ ಆಗಿದ್ದಾರೆ. ನಿರ್ದೇಶಕರು ಇವರ ಹೆಸರನ್ನು ಟ್ಯಾಗ್ ಮಾಡಿರುವ ಈಕೆ ನಿರ್ಮಾಪಕಿನಾ ಅಥವಾ ನಟಿನಾ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಕಪಿಲ್ ದೇವ್ (Kapil Dev) ಬಯೋಪಿಕ್ 83 ಸಿನಿಮಾ ಪ್ರಚಾರ ಮಾಡಲು ಕಪಿಲ್ ದೇವ ಮತ್ತು ರಣವೀರ್ ಸಿಂಗ್ (Ranaveer Singh) ಬೆಂಗಳೂರಿಗೆ ಆಗಿಮಿಸಿದ್ದರು. ಈ ವೇಳೆ ಜೊತೆಯಾಗಿದ್ದ ಕಿಚ್ಚ ವಿಡಿಯೋ ಕಾಲ್ ಮೂಲಕ ದೀಪಿಕಾ ಜೊತೆ ಮಾತನಾಡಿದ್ದಾರೆ. ಕಿಚ್ಚ ಮಾತ್ರವಲ್ಲ ಅವರ ಬಾಡಿ ಗಾರ್ಡ್ ದೀಪಿಕಾ ಅಪ್ಪಟ್ಟ ಅಭಿಮಾನಿಯಾಗಿದ್ದು, ವಿಡಿಯೋ ಕಾಲ್‌ನಲ್ಲಿ ಅವರ ಮೈ ಮೇಲಿರುವ ಟ್ಯಾಟುಗಳನ್ನು ತೋರಿಸಿದ್ದಾರೆ. ಡಿಪ್ಪಿ ಸ್ವಲ್ಪ ಸ್ವಲ್ಪ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ.
Sudeep sings for Anil Kumble: ಕ್ರಿಕೆಟಿಗನ ವಿಶೇಷ ಹಾಡು ಹಾಡಿದ ಕಿಚ್ಚ!
ಇನ್ನು ಕಿಚ್ಚ ಸುದೀಪ್ ನಟನೆ ವಿಕ್ರಾಂತ್ ರೋಣ (Vikrant Rona) ಬಿಡುಗಡೆ ಆಗಬೇಕಿದೆ. ಕೊರೋನಾ ಸೋಂಕು ರೂಪಾಂತರಗೊಂಡು ದಿನೆ ದಿನೇಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲವಿದೆ. ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ. ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ಬಿಟ್ಟರೆ 2021ರಲ್ಲಿ ಬೇರೆ ಯಾವ ಸಿನಿಮಾ ರಿಲೀಸ್ ಆಗಿಲ್ಲ, ಹೀಗಾಗಿ ಈ ವರ್ಷ ಆದರೂ ಸುದೀಪ್ ಅವರನ್ನು ತೆರೆ ಮೇಲೆ ನೋಡಲು ಎಲ್ಲರೂ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.