Dr Rajkumar ಮತ್ತು ಮೂವರು ಪುತ್ರರಿಗೂ ಆ್ಯಕ್ಷನ್-ಕಟ್ ಹೇಳಿದ ಏಕೈಕ ಕನ್ನಡಿಗ ನಿರ್ದೇಶಕ ಇವರೇ!

Published : Nov 21, 2026, 02:29 PM IST
Dodmane family

ಸಾರಾಂಶ

ಡಾ. ರಾಜ್‌ಕುಮಾರ್ ಹಾಗೂ ಅವರ ಮೂವರು ಪುತ್ರರಿಗೆ ನಿರ್ದೇಶನ ಮಾಡಿದ ಏಕೈಕ ಕನ್ನಡಿಗ ನಿರ್ದೇಶಕ. ಒಂದೇ ವರ್ಷದಲ್ಲಿ ಅಣ್ಣಾವ್ರು ಮತ್ತು ಶಿವಣ್ಣ ಅವರಿಗೆ ಹಿಟ್ ಚಿತ್ರಗಳನ್ನು ನೀಡಿದ ಅಪರೂಪದ ದಾಖಲೆ ಇವರದ್ದಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ಹಲವು ದಿಗ್ಗಜ ನಿರ್ದೇಶಕರು ಬಂದು ಹೋಗಿದ್ದಾರೆ. ಆದರೆ ವರನಟ ಡಾ. ರಾಜ್‌ಕುಮಾರ್ ಮತ್ತು ಅವರ ಮೂವರು ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್. ಈ ನಾಲ್ವರಿಗೂ ನಿರ್ದೇಶನ ಮಾಡಿದ ಏಕೈಕ ಕನ್ನಡಿಗ ನಿರ್ದೇಶಕ ಎಂಬ ಅಪರೂಪದ ದಾಖಲೆ 'ಕಲಾಸಾಮ್ರಾಟ್' ಡಾ. ಎಸ್. ನಾರಾಯಣ್ ಅವರ ಹೆಸರಿನಲ್ಲಿದೆ. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಕೂಡ ಈ ನಾಲ್ವರಿಗೂ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆದರೆ ಅವರು ಮೂಲತಃ ತೆಲುಗು ಭಾಷಿಕರು. ಹೀಗಾಗಿ ಕನ್ನಡದವರೇ ಆದ ಏಕೈಕ ನಿರ್ದೇಶಕ ಎಸ್. ನಾರಾಯಣ್.

ರಾಘವೇಂದ್ರ ರಾಜ್‌ಕುಮಾರ್ !

1993ರಲ್ಲಿ ಬಿಡುಗಡೆಯಾದ 'ಅನುರಾಗದ ಅಲೆಗಳು' ಚಿತ್ರದ ಮೂಲಕ ಎಸ್. ನಾರಾಯಣ್ ಮೊದಲ ಬಾರಿಗೆ ದೊಡ್ಮನೆ ಕುಟುಂಬದವರಿಗೆ ನಿರ್ದೇಶನ ಮಾಡಿದರು. ನಂತರ 'ಬಾರೋ ನನ್ನ ಮುದ್ದಿನ ಕೃಷ್ಣ' ಚಿತ್ರಕ್ಕೂ ಆ್ಯಕ್ಷನ್-ಕಟ್ ಹೇಳಿದರು. ಅದಾದ ನಂತರ 2000ನೇ ಇಸವಿಯಲ್ಲಿ ಬಿಡುಗಡೆಯಾದ ಡಾ.ರಾಜ್‌ಕುಮಾರ್ ನಟನೆಯ 'ಶಬ್ದವೇದಿ' ಚಿತ್ರಕ್ಕೆ ಎಸ್. ನಾರಾಯಣ್ ನಿರ್ದೇಶನ ಮಾಡಿದರು. ಡ್ರಗ್ಸ್ ಮಾಫಿಯಾ ವಿರುದ್ಧದ ಈ ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ, ಅಣ್ಣಾವ್ರ ವೃತ್ತಿಜೀವನದ ಕೊನೆಯ ಚಿತ್ರವಾಗಿ ಇತಿಹಾಸ ಸೇರಿತು.

ತಂದೆ-ಮಗ ಇಬ್ಬರಿಗೂ ಹಿಟ್ ನೀಡಿದ ಕಲಾಸಾಮ್ರಾಟ್!

2000ನೇ ಇಸವಿಯಲ್ಲೇ ಶಿವಣ್ಣ ನಟನೆಯ 'ಗಲಾಟೆ ಅಳಿಯಂದ್ರು' ಚಿತ್ರವನ್ನು ನಿರ್ದೇಶಿಸಿ ಭರ್ಜರಿ ಯಶಸ್ಸು ಕಂಡರು (ಈ ಚಿತ್ರದಲ್ಲಿ ನಾರಾಯಣ್ ಕೂಡ ನಟಿಸಿದ್ದರು). ನಂತರ ಸಿಂಹದ ಮರಿ, ನಂಜುಂಡಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದರು. ಅದಾದ ನಂತರ 2004ರಲ್ಲಿ ಪುನೀತ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ 'ಮೌರ್ಯ' ಚಿತ್ರವನ್ನು ನಿರ್ದೇಶಿಸಿ ಬ್ಲಾಕ್‌ಬಸ್ಟರ್ ಯಶಸ್ಸು ತಂದುಕೊಟ್ಟರು.

ಒಂದೇ ವರ್ಷದಲ್ಲಿ ಸೃಷ್ಟಿಸಿದ ಅಪರೂಪದ ಇತಿಹಾಸ!

2000ನೇ ಇಸವಿ ಎಸ್. ನಾರಾಯಣ್ ಅವರ ಸಿನಿಮಾ ಬದುಕಿನ ಸುವರ್ಣ ವರ್ಷ. ಒಂದೇ ವರ್ಷದಲ್ಲಿ ತಂದೆ ಡಾ. ರಾಜ್‌ಕುಮಾರ್ (ಶಬ್ದವೇದಿ) ಮತ್ತು ಮಗ ಶಿವರಾಜ್‌ಕುಮಾರ್ (ಗಲಾಟೆ ಅಳಿಯಂದ್ರು) ಇಬ್ಬರಿಗೂ ನಿರ್ದೇಶನ ಮಾಡಿ, ಎರಡೂ ಸಿನಿಮಾಗಳನ್ನು ಸೂಪರ್ ಹಿಟ್ ಮಾಡಿದ ಅಪರೂಪದ ಕೀರ್ತಿ ಇವರಿಗೆ ಸಲ್ಲುತ್ತದೆ.

ಎಸ್. ನಾರಾಯಣ್ ಅವರ ಸಿನಿಮಾ ಪಯಣ!

1981ರಲ್ಲಿ ನಟನಾಗುವ ಕನಸಿನೊಂದಿಗೆ ಬೆಂಗಳೂರಿಗೆ ಬಂದ ಎಸ್. ನಾರಾಯಣ್, 1992ರಲ್ಲಿ 'ಚೈತ್ರದ ಪ್ರೇಮಾಂಜಲಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಸಿನಿಮಾದಲ್ಲೇ ಇತಿಹಾಸ ಸೃಷ್ಟಿಸಿದರು. ನಿರ್ದೇಶನ ಮಾತ್ರವಲ್ಲದೆ ನಟನೆ, ನಿರ್ಮಾಣ, ಸಂಗೀತ ಸಂಯೋಜನೆ, ಗೀತರಚನೆ ಮತ್ತು ಕಿರುತೆರೆಯಲ್ಲೂ 'ಕಲಾಸಾಮ್ರಾಟ್' ಆಗಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಮರೆಯಲಾಗದ ಕೌಟುಂಬಿಕ ಮತ್ತು ಸಾಮಾಜಿಕ ಸಿನಿಮಾಗಳನ್ನು ನೀಡಿರುವ ಎಸ್. ನಾರಾಯಣ್, ಸದ್ಯ ಹೊಸ ಚಿತ್ರಗಳ ಮೂಲಕ ಮತ್ತೆ ನಿರ್ದೇಶನದಲ್ಲಿ ಸಕ್ರಿಯರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರಕಾಶ್ ರಾಜ್ ಎತ್ತಿ ತಿರುಗಿಸುವಾಗ ಕಂಬಕ್ಕೆ ಬಡಿದ ವನಿತಾ ವಾಸು ತಲೆ.. 'ನಾಗಮಂಡಲ' ಸೆಟ್‌ನಲ್ಲಿ ಜೀವ ಉಳಿಸಿದ ಡೈರೆಕ್ಟರ್ ಮಾತು!
ದಾದಾಸಾಹೇಬ್ ಫಾಲ್ಕೆ IFF ಪ್ರಶಸ್ತಿ: 6 ಅವಾರ್ಡ್​ ಬಾಚಿಕೊಂಡ ದುರಂಧರ್​, ಕಾಂತಾರಕ್ಕೆ 2 ಪ್ರಶಸ್ತಿ- Full List ​ಇಲ್ಲಿದೆ