
ಎಸ್ ನಾರಾಯಣ್ ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಕುರಿತು ನಿರ್ದೇಶಕ ಎಸ್.ನಾರಾಯಣ್ ಹೇಳುವ ಮಾತುಗಳು ಇಲ್ಲಿವೆ.
1. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಟ್ರೇಲರ್ ನೋಡಿದ ಬಹುತೇಕರು ನನಗೆ ಫೋನ್ ಮಾಡಿ ವಿಷ್ ಮಾಡುವ ಜತೆಗೆ ಮೊದಲ ಬಾರಿಗೆ ನಿಮ್ಮದಲ್ಲದ ಜಾನರ್ ಸಿನಿಮಾ ಮಾಡಿದ್ದೀರಿ ಎನ್ನುತ್ತಿದ್ದಾರೆ. ಯಾಕೆಂದರೆ ಇಲ್ಲಿವರೆಗೂ ನಾನು ಮಾಡಿದ ಸಿನಿಮಾಗಳದ್ದೇ ಒಂದು ಹಂತವಾದರೆ, ಈ 5ಡಿ ಚಿತ್ರದ್ದೇ ಮತ್ತೊಂದು ಹಂತ.
2. 5ಡಿ ರೀತಿಯ ಸಿನಿಮಾ ನನಗೇ ಹೊಸದು. ಹಾರರ್, ಕ್ರೈಮ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಹೇಳುತ್ತಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುವ ಸಿನಿಮಾ ಇದು. ಸವಾಲಿನ ಜತೆಗೆ ಈಗಿನ ಜನರೇಷನ್ ಕತೆಯನ್ನು ಹೇಳಿದ್ದೇನೆ ಎನ್ನುವ ಖುಷಿ ನನಗೆ ಇದೆ.
3. ಆದಿತ್ಯ, ಅದಿತಿ ಪ್ರಭುದೇವ ಜೋಡಿ ಈ ಚಿತ್ರದ ಹೈಲೈಟ್. ಅದರಲ್ಲೂ ಆದಿತ್ಯ ಈ ಚಿತ್ರದಲ್ಲಿ ಬೇರೆ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ.
4. ಪ್ರತಿವಾರ ಬಿಡುಗಡೆ ಆಗುವ ಕನ್ನಡ ಚಿತ್ರಗಳನ್ನು ನೋಡುವ ಅಭ್ಯಾಸ ಇಟ್ಟುಕೊಂಡವರು ನಿರ್ಮಾಪಕ ಸ್ವಾತಿ ಕುಮಾರ್. ಅವರು ಒಳ್ಳೆಯ ಪ್ರೇಕ್ಷಕರಾಗಿರುವುದರಿಂದ ನಮ್ಮ 5ಡಿ ಸಿನಿಮಾ ಇಷ್ಟುಚೆನ್ನಾಗಿ ಬರಲು ಸಾಧ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.