PR ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಾರಣವೇನೆಂದು ರಿವೀಲ್ ಮಾಡಿದ ನಟಿ ಧನ್ಯಾ ರಾಮ್‌ಕುಮಾರ್!

Suvarna News   | Asianet News
Published : Oct 10, 2021, 05:12 PM IST
PR ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಾರಣವೇನೆಂದು ರಿವೀಲ್ ಮಾಡಿದ ನಟಿ ಧನ್ಯಾ ರಾಮ್‌ಕುಮಾರ್!

ಸಾರಾಂಶ

ದೊಡ್ಡಮನೆ ಕುಡಿ ಧನ್ಯಾ ರಾಮ್‌ಕುಮಾರ್ ನಟನೆಗೆ ಫಿದಾ ಆದವರು ಒಬ್ಬರಾ? ಇಬ್ಬರಾ? ನಿನ್ನ ಸನಿಹಕೆ ಚಿತ್ರ ನೋಡಿದವರೆಲ್ಲಾ ನಾನು ಡಿಂಪಿ ರೀತಿ ಇರಬೇಕು ಎನ್ನುತ್ತಿದ್ದಾರೆ. ಡಿಂಪಿ ಪರ್ಸನಲ್ ಲೈಫ್‌ ಬಗ್ಗೆ ನಿಮಗೆ ಗೊತ್ತಾ?

ಕರ್ನಾಟಕ ಸರ್ಕಾರ(Karnataka Government) 100% ಸೀಟಿಂಗ್ ಅನುಮತಿ ನೀಡಿದ ನಂತರ ಬಿಡುಗಡೆ ಆದ ಮೊದಲ ಬಿಗ್ ಬಜೆಟ್, ಬಹುನಿರೀಕ್ಷಿತ ಸಿನಿಮಾ ನಿನ್ನ ಸನಿಹಕೆ (Ninna Sanihake). ನಟ ಕಮ್ ನಿರ್ದೇಶಕನಾಗಿ ಸೂರಜ್‌ ಗೌಡ (Suraj Gowda) ಕಾಣಿಸಿಕೊಂಡರೆ, ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಮೊಮ್ಮಗಳು, ರಾಮ್‌ಕುಮಾರ್ ಪುತ್ರಿ ಧನ್ಯಾ (Dhanya Ramkumar) ಎಂಟ್ರಿ ಕೊಟ್ಟಿದ್ದಾರೆ. ಹೊಸ ಆನ್‌ ಸ್ಕ್ರೀನ್ ಜೋಡಿಗೆ ಸಿನಿ ರಸಿಕರು ಫಿದಾ ಆಗಿದ್ದಾರೆ.

ಬೆಂಗಳೂರು ಮಾಯಾ ನಗರಕ್ಕೆ ಪ್ರವೇಶಿಸುವ ಐಟಿ-ಬಿಟಿ ಮಂದಿ ಯಾಕೆ Live in Relationship ಆಯ್ಕೆ ಮಾಡಿಕೊಳ್ಳುತ್ತಾರೆ. ಊರು ಬಿಟ್ಟು ಹೋಗುವಾಗ ಹೇಗೆ ನಿಭಾಯಿಸುತ್ತಾರೆ. ಸಮಾಜ ಈ ರೀತಿಯ ಸಂಬಂಧವನ್ನು ನೋಡುವ ದೃಷ್ಟಿ ಹೇಗಿರುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಚೊಚ್ಚಲ ಸಿನಿಮಾ ಆದರೂ ಸ್ವತಃ ಧನ್ಯಾ ಅವರೇ ಡಬ್ಬಿಂಗ್ (Dubbing) ಮಾಡಿರುವುದಕ್ಕೆ ಪಾತ್ರದ ಮಹತ್ವ ಹೆಚ್ಚಾಗಿದೆ. ಚಿತ್ರ ಬಿಡುಗಡೆಗೆ ಸಂತೋಷ್ ಪ್ರಮುಖ ಚಿತ್ರಮಂದಿರ ಎಂದು ಆಯ್ಕೆ ಮಾಡಲಾಗಿತ್ತು ಆದರೆ ವಿದ್ಯುತ್ ಸಮಸ್ಯೆಯಿಂದ ಫಸ್ಟ್‌ ಡೇ ಫಸ್ಟ್‌ ಶೋ ಪ್ರದರ್ಶನ ರದ್ದಾದ ಕಾರಣ ನವರಂಗ್‌ನಲ್ಲಿ (Navrang Theatre) ಚಿತ್ರತಂಡ ಹಾಜರಾಗಿದ್ದರು. 

ಹಲವಾರು ಸಂದರ್ಶನಗಳಲ್ಲಿ ಧನ್ಯಾ ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ (Journalism & Mass Communication) ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಪಿಆರ್‌ ಸಂಸ್ಥೆ ಒಂದರಲ್ಲಿ ಕೆಲಸ ಮಾಡಿದ್ದಾರೆ. ಕೈ ತುಂಬಾ ಸಂಪಾದನೆ ಮಾಡುತ್ತಿದ್ದರೂ ಕೆಲಸದಲ್ಲಿ ನೆಮ್ಮದಿ ಇಲ್ಲದ ಕಾರಣ ಧನ್ಯಾ ಈ ನಿರ್ಧಾರ ಕೈಗೊಂಡರಂತೆ. 

ಡಾ. ರಾಜ್ ಮೊಮ್ಮಗಳ ಸಿನಿಮಾಕ್ಕೆ ಕರೆಂಟ್ ಇಲ್ಲ... ನವರಂಗ್‌ಗೆ ಬನ್ನಿ ಎಂದ ರಘು ದೀಕ್ಷಿತ್

ದಿನವೂ ಕೆಲಸಕ್ಕೆ ಹೋಗುವ ಮುನ್ನ ಸಂತೋಷವಿರುತ್ತಿರಲಿಲ್ಲ ಒಂದು ದಿನ ಕೆಲಸ ಒತ್ತಡ ಹೆಚ್ಚಾಗಿತ್ತು. ಇಲ್ಲ ಇದು ನನ್ನ ಕೈಯಲ್ಲಿ ಆಗುವುದಿಲ್ಲ ನಾನು ಇಷ್ಟ ಪಡುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮನೆಗೆ ಹೋಗಿ ಈ ವಿಚಾರವನ್ನು ಅಮ್ಮನಿಗೆ ತಿಳಿಸುತ್ತೇನೆ ಎಂದು ನಿರ್ಧರಿಸಿಕೊಂಡು ತಮ್ಮ ಕನಸಿನ ಕೆಲಸದ ಬಗ್ಗೆ ಹಂಚಿಕೊಂಡರಂತೆ. ಧನ್ಯಾ ಸಿನಿಕ್ಷೇತ್ರ ಪ್ರವೇಶಿಸುತ್ತಾಳೆ ಎನ್ನುವ ಸಣ್ಣ ಅನುಮಾನ ತಾಯಿ ಅವರಿಗೆ ಇತ್ತಂತೆ ಆದರೆ ಇಷ್ಟು ಬೇಗ ಎಂದುಕೊಂಡಿರಲಿಲ್ಲ. ಅದರಲ್ಲೂ ರಾಜ್‌ಕುಮಾರ್ ಕುಟುಂಬದಿಂದ ಇದೇ ಮೊದಲ ಹೆಣ್ಣು ಮಗಳ ಲೈಮ್‌ ಲೈಟ್‌ ಕಡೆ ಮುಖ ಮಾಡುತ್ತಿರುವ ಕಾರಣ ಧನ್ಯಾ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದೊಂದು ದಿನ ನಾನು ನನ್ನ ಕನಸನ್ನು ಫಾಲೋ ಮಾಡಿಲ್ಲ ಎಂದು ರಿಗ್ರೆಟ್ (Regret) ಮಾಡಬಾರದು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಮನೆಯಲ್ಲಿ ಎಲ್ಲರಿಗೂ ಹೇಳಿದೆ ಎಂದು ನಟಿ ಧನ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?