ತಲೆಗೆ ಪೆಟ್ಟು, ಡ್ರಗ್ಸ್‌, ನಿದ್ರೆ ಮಾತ್ರೆ ಸೇವನೆ; ಚಿರು ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದ ಪ್ರಶಾಂತ್‌!

Suvarna News   | Asianet News
Published : Jun 11, 2020, 02:41 PM ISTUpdated : Jun 11, 2020, 02:47 PM IST
ತಲೆಗೆ ಪೆಟ್ಟು, ಡ್ರಗ್ಸ್‌, ನಿದ್ರೆ ಮಾತ್ರೆ ಸೇವನೆ; ಚಿರು ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದ ಪ್ರಶಾಂತ್‌!

ಸಾರಾಂಶ

ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ 5 ದಿನಗಳೇ ಕಳೆದಿದೆ ಆದರೂ ಅವರ ಬಗ್ಗೆ ಹರಿದಾಡುತ್ತಿರುವ ವದಂತಿಗಳು ನಿಂತಿಲ್ಲ. ತಪ್ಪು ಸುದ್ದಿ ಹಬ್ಬಿಸುತ್ತಿರುವವರಿಗೆ ಚಿರು ಆಪ್ತ ಪ್ರಶಾಂತ್  ಸ್ಪಷ್ಟನೇ ನೀಡಿದ್ದಾರೆ...

ಜೂನ್‌ 7,2020 ಕನ್ನಡ ಚಿತ್ರರಂಗಕ್ಕೆ ಕರಾಳ ದಿನವಾಗಿತ್ತು. ಯಾರೂ ಊಹಿಸಿರಿದ ಘಟನೆ ನಡೆಯಿತು.  ಎಂದೂ ಚಿರು ಭೇಟಿಯಾಗದವರು  ಎಂದೂ ಮಾತನಾಡಿಸಿ ಫೋಟೋ ತೆಗೆಸಿಕೊಳ್ಳದವರು ಸೇರಿ ಪರದೆ ಮೇಲೆ ಆತನ ಅಭಿನಯ ನೋಡುತ್ತಿದ್ದ ಅಭಿಮಾನಿಗಳೂ ಕಣ್ಣೀರಿಟ್ಟರು. 

ಮಧ್ಯಾಹ್ನ ಸುಮಾರು 2.20ಕ್ಕೆ ಮನೆಯಲ್ಲಿ ಕುಸಿದು ಬಿದ್ದ ಚಿರಂಜೀವಿಯನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರೆ ಸುಮಾರು 3.48Pm ವರೆಗೂ ಚಿಕಿತ್ಸೆ ನೀಡಿದರೂ ಕನ್ನಡ ಚಿತ್ರರಂಗ ವಾಯುಪುತ್ರನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.  ವೈದ್ಯರು ನೀಡಿದ ವರದಿ ಪ್ರಕಾರ ಚಿರು ಹೃದಯಘಾತವಾಗಿತ್ತು ಆಸ್ಪತ್ರೆ ಸೇರುವಷ್ಟರಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. 

ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್

ಚಿರು ಮುದ್ದನ ತಮ್ಮ ಧ್ರುವ ಸರ್ಜಾ ಫಾರ್ಮ್‌ಹೌಸ್‌ನಲ್ಲಿ ಅಣ್ಣನ  ಅಂತ್ಯಕ್ರಿಯೆ ನಡೆಯಿತು ಹಾಗೂ ಮೂರನೇ ದಿನದ ಹಾಲು ತುಪ್ಪವೂ ನಡೆಯಿತು. ಆದರೂ ಚಿರು ಆರೋಗ್ಯದ ಬಗ್ಗೆ ಅನೇಕರು ಅಪ ಪ್ರಚಾರ ಮಾಡುತ್ತಿರುವುದನ್ನು ಕಂಡು ಕುಟುಂಬದ ಆಪ್ತ ಪ್ರಶಾಂತ್  ಸಂಬರ್ಗಿ ಮನವಿ ಮಾಡಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಈ ಹಿಂದೆ ಮಧ್ಯ ಸೇವಿಸಿ ಕಾರು ಚಲಾಯಿಸುತ್ತಿರುವಾಗ ಅಪಘಾತವಾಗಿ ತಲೆಗೆ ಪೆಟ್ಟಾಗಿತ್ತು, ಹೆಚ್ಚಾಗಿ ನಿದ್ರೆ ಮಾತ್ರ ಸೇವಿಸುತ್ತಿದ್ದರು, ಅವರಿಗೆ ತುಂಬಾನೇ ಕೆಟ್ಟ  ಅಭ್ಯಾಸಗಳಿದ್ದವು ಹಾಗೂ ಡ್ರಗ್ಸ್‌ ಸೇವಿಸುತ್ತಿದ್ದರು ಎಂದೆಲ್ಲಾ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಖಾಸಗಿ ವಾಹಿನಿಯೊಂದು ಈ ಬಗ್ಗೆ ಕಾರ್ಯಕ್ರಮವೂ ಮಾಡಿತ್ತು. ಚಿರು ಬಗ್ಗೆ ಹರಿದಾಡುತ್ತಿರುವುದೆಲ್ಲಾ ಸುಳ್ಳು, ಗಾಳಿ ಮಾತುಗಳು ಎಂದು ಪ್ರಶಾಂತ್  ಸ್ಪಷ್ಟನೇ ನೀಡಿದ್ದಾರೆ.

'ವಾಟ್ಸಪ್‌ನಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಚಿರು ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದರು, ಸ್ಲೀಪಿಂಗ್ ಮಾತ್ರೆ ಸೇವಿಸುತ್ತಿದ್ದರು ಎಂದು ಸುದ್ದಿ  ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಇವುಗಳನ್ನು ನಂಬಬೇಡಿ' ಎಂದು ಪ್ರಶಾಂತ್ ಮನವಿ ಮಾಡಿಕೊಂಡಿದ್ದಾರೆ.

ಚಿರು ಸಾವಿಗೆ ಕಾರಣವೇ ಅಷ್ಟಮ ಕುಜ ದೋಷ? ಇದಕ್ಕೇನು ಪರಿಹಾರ?

ಚಿರು ಅಂತಿಮ ದರ್ಶನ ಪಡೆಯಲು ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರು ಅಂದೇ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಭಿಮಾನಿಗಳು ನೋಡಲೆಂದು ಬಸವನಗುಡಿಯ ನಿವಾಸದ ಬಳಿ ವ್ಯವಸ್ಥೆ ಮಾಡಿಕೊಡಲಾಗಿತ್ತು.   ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಚಿರು ಸ್ನೇಹಿತ ಹಾಗೂ ನಿರ್ದೇಶಕ ಪನ್ನಗಭರಣ ಅವರು ಚಿರು ವಯಸ್ಸು 39 ವರ್ಷ ಅಲ್ಲ 35, ಗೂಗಲ್‌ನಲ್ಲಿ ತಪ್ಪು ತೋರಿಸುತ್ತಿದೆ ಎಂದು ಹೇಳಿದ್ದಾರೆ. 

ಲಾಕ್‌ಡೌನ್‌ ಹಂತ ಹಂತವಾಗಿ ತೆರವುಗೊಳ್ಳುತ್ತಿದ್ದಂತೆ ಚಿರು ಸ್ನೇಹಿತರು ನಟ ಪ್ರಜ್ವಲ್ ದೇವರಾಜ್‌ ಫಾರ್ಮ್‌ಹೌನ್‌ನಲ್ಲಿ ಭೇಟಿ ಮಾಡಿದ್ದಾರೆ ಹಾಗೂ ತುಂಬಾನೇ ಸಮಯ ಕಳೆದಿದ್ದಾರೆ. ಈ ವೇಳೆ ಸ್ನೇಹಿತರೆಲ್ಲರೂ ಸೇರಿ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದರಂತೆ. ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಮೇಘನಾ ರಾಜ್‌ ಪತಿ ಚಿರುಗೆ ವರ್ಕೌಟ್‌ ಮಾಡುವಂತೆ ಕೇಳಿಕೊಂಡ ಕಾರಣ ಚಿರು ಜಿಮ್‌ ಮಾಡಲು ಪ್ರಾರಂಭಿಸಿದ್ದರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?