ಧ್ರುವ ಸರ್ಜಾ ಹೊಸ ಚಿತ್ರದ ಹೆಸರು 'ಮಾರ್ಟಿನ್‌'!

Suvarna News   | Asianet News
Published : Aug 13, 2021, 03:12 PM IST
ಧ್ರುವ ಸರ್ಜಾ ಹೊಸ ಚಿತ್ರದ ಹೆಸರು 'ಮಾರ್ಟಿನ್‌'!

ಸಾರಾಂಶ

ಆ್ಯಕ್ಷನ್ ಪ್ರಿನ್ಸ್ ಹೊಸ ಚಿತ್ರಕ್ಕೆ ವಿಭಿನ್ನ ಹೆಸರಿಟ್ಟ ನಿರ್ದೇಶಕರು. 'ಮಾರ್ಟಿನ್' ಹುಡುಗ ಆಗೋಕೆ ಧ್ರುವ ರೆಡಿ.

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ ಪಿ ಅರ್ಜುನ್‌ ಕಾಂಬಿನೇಶನ್‌ನ ಚಿತ್ರಕ್ಕೆ ಮಾರ್ಟಿನ್‌ ಎನ್ನುವ ಹೆಸರು ಇಡಲಾಗಿದೆ. ಧ್ರುವ ಪ್ರತಿಯೊಂದೂ ಚಿತ್ರದ ಹೆಸರು ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡುತ್ತದೆ. ಈ ಹೆಸರು ಕೂಡ ಅದೇ ಸಾಲಿಗೆ ಸೇರಿಕೊಳ್ಳುತ್ತದೆ. 

ಉದಯ್‌ ಮೆಹ್ತಾ ನಿರ್ಮಾಣದ ಈ ಚಿತ್ರಕ್ಕೆ ಆಗಸ್ಟ್‌ 15ರಂದು ಮುಹೂರ್ತ ಮಾಡಲು ಚಿತ್ರತಂಡ ನಿರ್ಧರಿಸಿದೆ.  ಚಿತ್ರದ ಮುಹೂರ್ತಕ್ಕೂ ಮುನ್ನವೇ ಚಿತ್ರದ ಹೆಸರು ಮಾರ್ಟಿನ್‌ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ನಡುವೆ ಛಾಯಾಗ್ರಾಹಕರಾಗಿ ಸತ್ಯ ಹೆಗಡೆ, ಸಾಹಸ ಸಂಯೋಜನೆಗೆ ರಾಮ ಲಕ್ಷ್ಮಣ್‌ ಜತೆಯಾಗಿದ್ದಾರೆ.

ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟ ನಟ ಧ್ರುವ ಸರ್ಜಾ!

ಕೆಲವು ತಿಂಗಳ ಹಿಂದೆ ಬೆಂಗಳೂರಿನ ದೇಗುಲವೊಂದರಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಧ್ರುವ ಹಾಗೂ ಅರ್ಜುನ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಒಂದು ಚಿತ್ರ ಸೂಪರ್ ಹಿಟ್ ಆಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸಾಮಾನ್ಯವಾಗಿ ಧ್ರುವ ಸರ್ಜಾ ಒಂದು ಸಿನಿಮಾ ಮಾಡುವುದಕ್ಕೆ, ಒಂಡು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈ ಬಾರಿ 'ದುಬಾರಿ' ಹಾಗೂ 'ಮಾರ್ಟಿನ್' ಎರಡಕ್ಕೂ ಸಹಿ ಮಾಡಿದ್ದಾರೆ. ಒಟ್ಟಿನಲ್ಲಿ ಧ್ರುವ ಸರ್ಜಾ ಮುಂದಿನ ವರ್ಷ ಅಭಿಮಾನಿಗಳಿಗೆ ಫಿಲ್ಮಂ ಟ್ರೀಟ್ ನೀಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಕೆ ದೂರಿಗೆ ತಕ್ಷಣ ಸ್ಪಂದನೆ, ನನ್ನ ಬಗ್ಗೆ ಏಕಾಗಿ ಈ ನಿರ್ಲಕ್ಷ್ಯ? ದರ್ಶನ್ ಪತ್ನಿ ದೂರು
ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ