ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾದ ಬಗ್ಗೆ ಮಹತ್ವದ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ -3 (KGF Chapter 3) ಚಿತ್ರದ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ (Director Prashanth Neel) ಬಿಗ್ ಅಪಡೇಟ್ ಜೊತೆ ಟ್ವಿಸ್ಟ್ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ ಚಾಪ್ಟರ್-2 (KGF Chapter 2) ರಿಲೀಸ್ ಬಳಿಕ ಯಶ್ ನಟನೆಯ ಯಾವ ಸಿನಿಮಾವೂ ತೆರೆ ಮೇಲೆ ಅಪ್ಪಳಿಸಿಲ್ಲ. ಯಶ್ ನಟನೆಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ ಕೆಜಿಎಫ್ ಚಾಪ್ಟರ್ 1 (KGF Chapter 1) ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಸೂಪರ್ ಹಿಟ್ ಆಗಿವೆ. ಇಷ್ಟು ದಿನದ ಬಳಿಕ ಕೆಜಿಎಫ್-3 ಸಿನಿಮಾದ ಕುರಿತು ಮಹತ್ವದ ಮಾಹಿತಿಯೊಂದು ಹೊರ ಬಂದಿದೆ. ಎರಡನೇ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ರಾಕಿಯ ಹಡಗು ಮುಳುಗುತ್ತದೆ. ನಂತರ ಕೆಜಿಎಫ್ ಭಾಗ 3 ಬರುತ್ತೆ ಎಂಬ ಸುಳಿವನ್ನು ಅಭಿಮಾನಿಗಳಿಗೆ ನೀಡಲಾಗುತ್ತದೆ. ನಂತರ ಕೆಜಿಎಫ್ ಚಾಪ್ಟರ್ 3 ಬರುತ್ತೆ ಎಂಬುದನ್ನು ಅಧಿಕೃತಗೊಳಿಸಲಾಗಿತ್ತು.
ಯಶ್ ಅವರ ಎಲ್ಲಾ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 3ಗಾಗಿ ಕಾಯುತ್ತಿದ್ದಾರೆ. ಆದ್ರೆ 14 ಏಪ್ರಿಲ್ 2022ರಂದು ಕೆಜಿಎಫ್ ಚಾಪ್ಟರ್-2 ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಕ್ಕೂ ಮೇಲಾಗಿದೆ. ಯಾವಾಗ ಮೂರನೇ ಭಾಗ ಬರುತ್ತೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾದ ಬಗ್ಗೆ ಮಹತ್ವದ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.
ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?
ಬಿಗ್ ಅಪ್‌ಡೇಟ್ ಜೊತೆ ಟ್ವಿಸ್ಟ್ ಕೊಟ್ಟ ಪ್ರಶಾಂತ್ ನೀಲ್
ಹೌದು, ನಿರ್ದೇಶಕ ಪ್ರಶಾಂತ್ ನೀಲ್, ಬಿಗ್ ಅಪ್‌ಡೇಟ್ ಜೊತೆ ಟ್ವಿಸ್ಟ್ ಕೊಟ್ಟಿದ್ದಾರೆ. ಕೆಜಿಎಫ್-3 ಸಿನಿಮಾ ಬರೋದು ನೂರಕ್ಕೆ ನೂರರಷ್ಟು ಕನ್ಫರ್ಮ್. ಸಿನಿಮಾದ ಕಥೆ ಮತ್ತು ಸ್ಕ್ರಿಫ್ಟ್ ಎಲ್ಲವೂ ತಯಾರಾಗಿದೆ. ಆದರೆ ಸಿನಿಮಾದ ನಿರ್ದೇಶಕರು ಅವರೇ ಆಗ್ತಾರಾ ಅಥವಾ ಬೇರೆಯವರು ಬರ್ತಾರಾ ಎಂಬುದರ ಬಗ್ಗೆ ಪ್ರಶಾಂತ್ ನೀಲ್ ಸ್ಪಷ್ಟವಾಗಿ ಹೇಳಿಲ್ಲ. ಮೂರನೇ ಭಾಗದ ಕೆಜಿಎಫ್ ಕಥೆಗೆ ಯಾರು ಆಕ್ಷನ್ ಕಟ್ ಹೇಳ್ತಾರೆ ಅನ್ನೋದು ಪ್ರಶ್ನೆಯಾಗಿ ಉಳಿದಿದೆ. ಹಾಗಾದ್ರೆ ನಿರ್ದೇಶನ ಮಾಡಬಹುದು ಎಂಬುದರ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿವೆ.
ಆಗಸ್ಟ್‌ನಲ್ಲಿ ಸಲಾರ್-2 ಶೂಟಿಂಗ್
ಚಿತ್ರ ನಿರ್ಮಾಣ ಸಂಸ್ಥೆಯಿಂದ ಯಾವುದೇ ರೀತಿಯ ಸಿಗ್ನಲ್ ಬಂದಿಲ್ಲ. ಹಾಗಾಗಿ ಸಿನಿಮಾದ ಚಿತ್ರೀಕರಣ ಯಾವಾಗ ಶುರುವಾಗುತ್ತೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಇದೇ ವೇಳೆ ಪ್ರಭಾಸ್ ಜೊತೆ ಸಲಾರ್-2 ಸಿನಿಮಾದ ಚಿತ್ರೀಕರಣ ಆಗಸ್ಟ್‌ನಲ್ಲಿ ಶುರುವಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಸಲಾರ್-2 ಚಿತ್ರೀಕರಣ 2025ರ ವೇಳೆಗೆ ಅಂತ್ಯವಾಗಲಿದ್ದು, ಆದಾದ ಬಳಿಕ ಕೆಜಿಎಫ್-3 ಶೂಟಿಂಗ್ ಆರಂಭವಾಗಬಹುದು ಎನ್ನಲಾಗುತ್ತಿದೆ.
ಮೂರನೇ ಸ್ಥಾನಕ್ಕೆ ಜಿಗಿದ ರಾಕಿಂಗ್ ಸ್ಟಾರ್ ಕೆಜಿಎಫ್ 2, ನಟ ಯಶ್ ಕೆಳಕ್ಕೆ ತಳ್ಳಿದ್ದು ಯಾರನ್ನ ನೋಡ್ರಿ!
2018 ಡಿಸೆಂಬರ್‌ನಲ್ಲಿ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ಕೆಜಿಎಫ್ ಸಿನಿಮಾದ ಮುಂದೆ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರ ಮಕಾಡೆ ಮಲಗಿತ್ತು. 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ 250 ಕೋಟಿ ರೂ.ಗೂ ಅಧಿಕ ಹಣ ಗಳಿಸಿತ್ತು. 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕೆಜಿಎಫ್ ಚಾಪ್ಟರ್ 2, ಬರೋಬ್ಬರಿ 1,250 ಕೋಟಿಗೂ ಅಧಿಕ ಹಣವನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಂಡಿತ್ತು.