ಕನ್ನಡದ ಸ್ಟಾರ್ ನಟ ಯಶ್‌ಗೆ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ, ಆದ್ರೆ....

By Shriram Bhat  |  First Published Dec 28, 2024, 12:44 PM IST

ನಿತೇಶ್ ತಿವಾರಿ ನಿರ್ದೇಶನದ ಬಾಲಿವುಡ್ ಚಿತ್ರ ರಾಮಾಯಣದಲ್ಲಿ ನಟ ಯಶ್ 'ರಾವಣ'ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟ ರಣವೀರ್ ಕಪೂರ್ ಅವರಿಗಿಂತಲೂ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟು ಅದನ್ನು ಗಿಟ್ಟಿಸಿಕೊಂಡಿದ್ದಾರೆ ಯಶ್.. 


ಕನ್ನಡದ ನಟ, ಈಗ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ (Rocking Star yash) ಅವರು ಭಾರತದಲ್ಲೇ 'ನಂಬರ್ ಒನ್' ಸಂಭಾವನೆ ಪಡೆಯುವ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಇತ್ತೀಚಿಗೆ ಯಶ್ ನಟಿಸುತ್ತಿರುವ ಬಾಲಿವುಡ್ ಸಿನಿಮಾ 'ರಾಮಾಯಣ'ಕ್ಕೆ ಯಶ್ ಸಂಭಾವನೆ ಬರೋಬ್ಬರಿ 200 ಕೋಟಿ ರೂಪಾಯಿ ಫಿಕ್ಸ್ ಆಗಿದೆ. ಅಲ್ಲಿಗೆ, ಕನ್ನಡದ ನಟ ಯಶ್ ಅವರು ಸದ್ಯ ಬಾಲಿವುಡ್‌ ಸೂಪರ್‌ ಸ್ಟಾರ್‌ಗಳಾಗಿರುವ ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರನ್ನೂ ಸಹ ಸಂಭಾವನೆ ಸಂಗತಿಯಲ್ಲಿ ಮೀರಿಸಿದಂತಾಗಿದೆ. 

ಹೌದು, ಭಾರತದಲ್ಲಿ ನಟರಾದ ಸಲ್ಮಾನ್ ಖಾನ್ ಹಾಗೂ ಪ್ರಭಾಸ್ ಅವರಿಬ್ಬರೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರವೊಂದಕ್ಕೆ 120 ರಿಂದ 180 ಕೋಟಿ ಚಾರ್ಜ್ ಮಾಡುವ ಅವರಿಬ್ಬರನ್ನೂ ಯಶ್ ತಮ್ಮ ಮುಂಬರುವ ರಾಮಾಯಣ ಚಿತ್ರದ ಮೂಲಕ ಮೀರಿಸಿದ್ದಾರೆ. ಆದರೆ, ನಟರಾದ ಅಮೀರ್ ಖಾನ್ ತಮ್ಮ 'ದಂಗಲ್' ಚಿತ್ರ ಹಾಗೂ ರಜನಿಕಾಂತ್ ಅವರು ತಮ್ಮ 'ಜೈಲರ್' ಚಿತ್ರದಲ್ಲಿ ಈ 200 ಕೋಟಿ ಸಂಭಾವನೆಯನ್ನು ಮೀರಿಸಿದ್ದಾರೆ. 

Tap to resize

Latest Videos

undefined

ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

ಈ ಮೊದಲು ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಖಳನಟರಾದ ಅಮಿರೀಶ್ ಪುರಿ ಹಾಗೂ ಶಕ್ತಿ ಕಪೂರ್ ಮೊದಲಾದವರು ಅಂದಿನ ಕಾಲಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದರು. ಆದರೆ ಅಂದು ಇಂದಿನ ಹಾಗೆ 200 ಕೋಟಿಗಳೆಲ್ಲವೂ ಸಿಗುತ್ತಿರಲಿಲ್ಲ. ಕಾರಣ ಅಂದು ಇಡೀ ಸಿನಿಮಾದ ಒಟ್ಟೂ ಬಜೆಟ್‌ ಕೂಡ ಅಷ್ಟೊಂದು ಇರುತ್ತಿರಲಿಲ್ಲ. ಹೀಗಾಗಿ ಅಂದಿನ ರೆಮ್ಯುನರೇಶನ್‌ಗೂ ಇಂದಿನ ಸಂಭಾವನೆಗೂ ಹೋಲಿಕೆ ಅಸಾಧ್ಯ. 

ನಿತೇಶ್ ತಿವಾರಿ ನಿರ್ದೇಶನದ ಬಾಲಿವುಡ್ ಚಿತ್ರ 'ರಾಮಾಯಣ'ದಲ್ಲಿ ನಟ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ರಾಮನ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಕಪೂರ್ ನಟಿಸುತ್ತಿದ್ದಾರೆ. ಅವರ ಜೋಡಿಯಾಗಿ ಸೀತೆ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರು ನಟಿಸುತ್ತಿದ್ದಾರೆ. ರಾವಣನಾಗಿ ಆ ಚಿತ್ರದಲ್ಲಿ ಅಬ್ಬರಿಸಲಿರುವ ನಟ ಯಶ್ ಅವರು ನಾಯಕನಟ ರಣವೀರ್ ಕಪೂರ್ ಅವರಿಗಿಂತಲೂ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟು ಅದನ್ನು ಗಿಟ್ಟಿಸಿಕೊಂಡಿದ್ದಾರೆ ಕೂಡ. 

ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!

ಸದ್ಯ 'ರಾಮಾಯಣ' ಚಿತ್ರದ ಶೂಟಿಂಗ್ ಶುರುವಾಗಿ ಪ್ರಗತಿಯಲ್ಲಿದೆ. ಯಶ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಶೂಟಿಂಗ್ ಸಹ ನಡೆಯುತ್ತಿದೆ, ಈ ಎರಡೂ ಚಿತ್ರಗಳಿಗೆ ಶುರುವಾದ ಸ್ವಲ್ಪ ದಿನಗಳಲ್ಲೇ ಕಾನೂನು ರೀತಿಯ ಸಮಸ್ಯೆಗಳು ಉದ್ಭವಿಸಿ ಈಗ ಎರಡೂ ತಣ್ಣಗಾಗಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಚಿತ್ರಗಳ ಶೂಟಿಂಗ್ ನಡೆದು ಸಿನಿಮಾ ತೆರೆಗೆ ಬರಲಿದೆ, 'ಟಾಕ್ಸಿಕ್' ಹಾಲಿವುಡ್ ರೇಂಝ್‌ನಲ್ಲಿ ಬಿಗ್ ಬಜೆಟ್ ಹಾಗೂ ಮೇಕಿಂಗ್ ಇದ್ದರೆ, ರಾಮಾಯಣ ಚಿತ್ರವು ಭಾರತದಲ್ಲಿ ಅತ್ಯಂತ ಬಿಗ್ ಬಜೆಟ್ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. 

ಒಟ್ಟಿನಲ್ಲಿ, ಕನ್ನಡದ ನಟ ಯಶ್ ಅವರು ಸದ್ಯಕ್ಕೆ ಭಾರತದ ನಂಬರ್ ಒನ್ 'ವಿಲನ್' ಎನ್ನಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಭಾರತದ ವಿಲನ್ ಪಾತ್ರಧಾರಿ ನಟ 200 ಕೋಟಿ ಸಂಭಾವನೆ ಪಡೆದಿರಲಿಲ್ಲ. 'ಕೆಜಿಎಫ್' ಸಿನಿಮಾ ಮೂಲಕ ಭಾರತದ ಬಿಗ್ ಸ್ಟಾರ್ ನಾಯಕನಟ ಎನ್ನಿಸಿಕೊಂಡಿರುವ ಯಶ್, ಇದೀಗ ಅತಿ ಹೆಚ್ಚಿನ ಸಂಭಾವನೆ ಪಡೆದ ಭಾರತದ ನಂ.1 ವಿಲನ್ ಎನಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇನ್ನೂ ಯಾವಯಾವ ದಾಖಲೆಗಳನ್ನು ಮಾಡಲಿದ್ದಾರೋ ಏನೋ ಯಾರಿಗೆ  ಗೊತ್ತು!?

ಹಿರಿಯ ಸ್ಪರ್ಧಿ ಮಾತು ಕೇಳಿ ಅನುಶ್ರೀ ಕಣ್ಣೀರು ಸುರಿಸಿದರು, 'ವಿಪಿ' ಕೈ ಮುಗಿದು ಕಾಲಿಗೆ ಬಿದ್ದರು!

click me!