
ಬೆಂಗಳೂರು[ಅ.27] ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿ ಐರಾಗೆ ಸೋಶಿಯಲ್ ಮೀಡಿಯಾಲ್ಲಿ ಸಂಖ್ಯ ಅಭಿಮಾನಿಗಳಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ದಂಪತಿ ಸಮೇತರಾಗಿ ಮಗುವಿನ ಬಳಿಯೇ ದೀಪಾವಳಿ ಶುಭಾಶಯ ಹೇಳಿದ್ದಾರೆ.
ಐರಾಗಾಗಿ ರಾಕಿ ಬಾಯ್ ಮತ್ತು ರಾಧಿಕಾ ಪಂಡಿತ್ ಶಾಪಿಂಗ್ ಮಾಡಿದ್ದ ಪೋಟೋಗಳು ಸಖತ್ ವೈರಲ್ ಆಗಿದ್ದವು. ಇದಾದ ಮೇಲೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮದಲ್ಲಿಯೂ ಐರಾ ಮಿಂಚಿದ್ದಳು.
ಯಶ್ ತಮ್ಮ ಇಸ್ಟಾಗ್ರ್ಯಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೀವ್ಸ್ ಕಾಣುತ್ತಿದೆ. ಮುದ್ದು ಮಗು ತನ್ನದೇ ಭಾಷೆಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದಾಳೆ. ನೀವು ಒಂದು ಶುಭಾಶಯ ಹೇಳಿಬಿಡಿ. ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದ ವಿಡಿಯೋ ಸಹ ಸಖತ್ ಕಮೆಂಟ್ ಪಡೆದುಕೊಂಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.