ಬರೀ '2500 ರೂ.'ಗೆ ಶಂಕರ್‌ ನಾಗ್‌ ರೀತಿ ನಟನೆ ಮಾಡಿದ ಕೆಜಿಎಫ್ ಸ್ಟಾರ್ ಯಶ್, ಡೌಟ್ ಇದ್ರೆ ನೋಡಿ..!

Published : Feb 15, 2025, 05:54 PM ISTUpdated : Feb 15, 2025, 06:11 PM IST
ಬರೀ '2500 ರೂ.'ಗೆ ಶಂಕರ್‌ ನಾಗ್‌ ರೀತಿ ನಟನೆ ಮಾಡಿದ ಕೆಜಿಎಫ್ ಸ್ಟಾರ್ ಯಶ್, ಡೌಟ್ ಇದ್ರೆ ನೋಡಿ..!

ಸಾರಾಂಶ

ಯಶ್, ಹಿಂದೆ ಟಿವಿ ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದರು. ಒಮ್ಮೆ ಕಾಮಿಡಿ ಶೋನಲ್ಲಿ ಉಪೇಂದ್ರ ಅವರ ಡೈಲಾಗ್ ಅನುಕರಿಸಿ ₹2500 ಬಹುಮಾನ ಗೆದ್ದಿದ್ದರು. ಈಗ ಪ್ಯಾನ್-ಇಂಡಿಯಾ ಸ್ಟಾರ್ ಆಗಿ 'ರಾಮಾಯಣ' ಸೇರಿದಂತೆ ದೊಡ್ಡ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ 2500 ರೂಪಾಯಿಗೆ ಏನ್ ಮಾಡಿದ್ರ ನೋಡಿ..? ಒಂದಾನೊಂದು ಕಾಲದಲ್ಲಿ ನಟ ಯಶ್ (Rocking Star Yash) ಅವರು ಟಿವಿ ಸೀರಿಯಲ್‌ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಪಾಪ, ಚಿಕ್ಕಪುಟ್ಟ ರೋಲ್ ಮಾಡ್ಕೊಂಡು, ಸೀರಿಯಲ್‌ನಲ್ಲೂ ನಾಯಕನ ಬದಲು ಸಹನಟರಾಗಿ ಸಹ ನಟಿಸಿದವರು. ಸಿನಿಮಾದಲ್ಲಿಯೂ ಅಷ್ಟೇ, ಮೊಗ್ಗಿನ ಮನಸ್ಸು ಚಿತ್ರದಲ್ಲಿ ಈಗ ಅವರ ಪತ್ನಿಯಾಗಿರುವ ನಟಿ ರಾಧಿಕಾ ಪಂಡಿತ್ ಅವರೊಂದಿಗೆ ಚಿತ್ರದ ಕೊನೆಯಲ್ಲಿ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಖುಷಿ ಪಟ್ಟವರು. 

ಅಂಥವರು ಕೇವಲ 2500 ರೂಪಾಯಿಗೆ ಏನಾದ್ರೂ ಮಾಡಿದ್ರೆ ತಪ್ಪೇನು? ಅಷ್ಟಕ್ಕೂ ಅವ್ರು 2500 ರೂ.ಗೆ ಅದೇನು ಮಾಡಿದ್ರು ಅಂತ ಜಾಸ್ತಿ ತಲೆ ಕೆಡಸಿಕ್ಕೋಬೇಡಿ. ಇದು ತಮಾಷೆಗೆ ನಡೆದಿದ್ದು. ಜೀ ಕನ್ನಡದಲ್ಲಿ ಸೃಜನ್ ಲೋಕೇಶ್ ಅವರು ನಡೆಸಿಕೊಡುತಿದ್ದ ಕಾಮಿಡಿ ಶೋಗೆ, ಹಳೆಯ ಕಾಲದಲ್ಲಿ ಅಂದರೆ ಹಲವು ವರ್ಷಗಳ ಹಿಂದೆ, ಅದೊಂದು ದಿನ ನಟ ಯಶ್ ಅವರು ಸೆಲೆಬ್ರಿಟಿ ಗೆಸ್ಟ್ ಆಗಿ ಬಂದಿದ್ದರು. ಆಗ ನಟ, ನಿರೂಪಕ ಸೃಜನ್ ಅವರು ನಟ ಯಶ್ ಅವರಿಗೆ ಒಂದು ಚಾಲೆಂಜ್ ಕೊಟ್ಟಿದ್ದಾರೆ. 

ಹುಡ್ಗಿ ಹಿಂದೆ ಸುತ್ತಾಡೋ ಹುಡುಗ್ರು ಯಶ್ ಅಂದು ಹೇಳಿದ್ನ ಇಂದೂ ಫಾಲೋ ಮಾಡ್ತಿದಾರಾ?

ಆ ಚಾಲೆಂಜ್ ಏನು ಅಂದ್ರೆ, ನಟ ಲೈವ್‌ ಅಲ್ಲಿ, ಅಂದ್ರೆ ಸ್ಟೇಜ್ ಮೇಲೇನೇ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ 'ಎ' ಚಿತ್ರದ ಡೈಲಾಗ್ ಹೇಳ್ಬೇಕು. ಅಲ್ಲಿದ್ದವರೊಬ್ಬರಿಗೆ ಅದು ಮೆಚ್ಚುಗೆ ಆದ್ರೆ ನಟ ಯಶ್‌ಗೆ ಅವರು ಹಣವನ್ನು ನೀಡ್ತಾರೆ ಅಂದಿದಾರೆ. ಆಗ ಆ ಚಾಲೆಂಜ್ ಸ್ವೀಕರಿಸಿದ ನಟ ಯಶ್ ಅವರು ಅದನ್ನು ನಟ ಶಂಕರ್‌ ನಾಗ್ ಸ್ಟೈಲ್‌ನಲ್ಲಿ ಹೇಳಿ ಬಹುಮಾನ ಪಡೆದಿದ್ದಾರೆ. ಆಗ ನಟ ಯಶ್ ಅವರು ಪಡೆದ ಬಹುಮಾನ 2500 ರೂಪಾಯಿ ಈಗ ಅವರು ತುಂಬಾ ದೊಡ್ಡ ಸ್ಟಾರ್‌ ಆಗಿ  ಬೆಳೆದ ಮೇಲೆ ಕಮ್ಮಿ ಎನ್ನಿಸಬಹುದು ಅಷ್ಟೇ..!

ಅಂದಹಾಗೆ, ನಟ ಯಶ್ ಅವರು ಸದ್ಯ 'ಪ್ಯಾನ್ ವರ್ಲ್ಡ್' ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳೂ ಭಾರೀ ನಿರೀಕ್ಷೆ ಮೂಡಿಸಿವೆ ಎಂದು ಹೊಸದಾಗಿ ಹೇಳಬೇಕಿಲ್ಲ. ಈ ಎರಡೂ ಸಿನಿಮಾಗಳಲ್ಲಿಯೂ ಯಶ್ ಪಾತ್ರ ಬಹಳಷ್ಟು ವಿಭಿನ್ನವಾಗಿದೆ. ಹಾಗೆ ಹೇಳುವುದಕ್ಕಿಂತ ಬೇರೆ ಬೇರೆ ಶೇಡ್ ಇರುವ ಪಾತ್ರವನ್ನೇ ಅವರು ನೋಡಿಕೊಂಡಿದ್ದಾರೆ. ನಟ ಯಶ್ ಅವರು ಹಿಂದೊಂದು ಕಾಲದಲ್ಲಿ ಕನ್ನಡದ ನಟ ಆಗಿದ್ದರು. ಸ್ಯಾಂಡಲ್‌ವುಡ್ ಸಿನಿಮಾಗಳಿಗಷ್ಟೇ ಸೀಮಿತವಾಗಿದ್ದರು. ಆದರೆ ಈಗ ಯಶ್ ಪ್ಯಾನ್ ಇಂಡಿಯಾ ಸ್ಟಾರ್, ವಿಶ್ವವಿಖ್ಯಾತ ನಟ. 

ಅಣ್ಣಾವ್ರ ಮಗ್ಳು ಪೂರ್ಣಿಮಾ-ರಾಮ್‌ಕುಮಾರ್ 'ಲವ್ ಕಹಾನಿ' ಬಲು ರೋಚಕ, ಮಿಸ್ ಮಾಡ್ದೇ ನೋಡಿ..!

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ