ಸಂಚಾರಿ ವಿಜಯ್‌ಗೆ ನೆರವಾದ ಕಿಚ್ಚ ಸುದೀಪ್, ಆಪರೇಶನ್‌ಗೆ ವ್ಯವಸ್ಥೆ

By Suvarna News  |  First Published Jun 13, 2021, 5:58 PM IST

* ನಟ ಸಂಚಾರಿ ವಿಜಯ್‌ಗೆ ಗಂಭೀರ ಅಪಘಾತ
* ವಿಜಯ್ ನೆರವಿಗೆ  ತಕ್ಷಣ ಧಾವಿಸಿದ ಕಿಚ್ಚ ಸುದೀಪ್
* ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವು
* ಜೆಪಿ ನಗರದ ಬಳಿ ಅಪಘಾತ ಸಂಭವಿಸಿತ್ತು


ಬೆಂಗಳೂರು(ಜೂ.  13)  ಒಂದು ಕಡೆ ಕೊರೋನಾ ಸ್ಯಾಂಡಲ್ ವುಡ್ ನ್ನು ಕಾಡುತ್ತಿದ್ದರೆ ಇನ್ನೊಂದು ಕಡೆಯಿಂದ ಅಪಘಾತದ ಸುದ್ದಿ ಬಂದಿದೆ. ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

"

Tap to resize

Latest Videos

undefined

ತುರ್ತು ಸಂದರ್ಭದಲ್ಲಿ  ನಟ ಸಂಚಾರಿ ವಿಜಯ್ ಗೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ರಾತ್ರೋ ರಾತ್ರಿ ಆಪರೇಷನ್ ಗೆ ವ್ಯವಸ್ಥೆ ಮಾಡಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದ ವಿಜಯ್ ಅಪಘಾತದಿಂದ ಗಾಯಗೊಂಡಿದ್ದರು. ಮಾಹಿತಿ ತಿಳಿದ ತಕ್ಷಣ  ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿಸಿದ ಸುದೀಪ್ ತಕ್ಷಣ ಸ್ಪಂದಿಸಿದ್ದಾರೆ.

 ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗಂಭೀರ ಗಾಯಗೊಂಡಿದ್ದು ವಿಜಯ್ ಅವರ ತಲೆ ಹಾಗೂ ಬಲತೊಡೆಗೆ ಗಂಭೀರ ಪೆಟ್ಟು ಬಿದ್ದಿದೆ. ಬೈಕ್ ನಲ್ಲಿ ಸ್ನೇಹಿತರ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೆದುಳಿನ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವ ವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಟ ವಿಜಯ್ ಪರಿಸ್ಥಿತಿ ಚಿಂತಾಜನಕವಾಗಿದ್ದು ಬನ್ನೇರು ಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

"

ಸಂಚಾರಿ ವಿಜಯ್ ಬೈಕ್ ಅಪಘಾತಕ್ಕೆ ಗುರಿಯಾಗಿದ್ದು ಹೇಗೆ? 

ಜೆಪಿ ನಗರದ 7th ಪೇಸ್ ನಲ್ಲಿ ಅಪಘಾತವಾಗಿದೆ. ಸ್ನೇಹಿತ ನವೀನ್‌ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದರು. ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಸಂಚಾರಿ‌ ವಿಜಯ್ ಆರೋಗ್ಯ ವಿಚಾರಿಸಲು ನಟ ಸತೀಶ್ ನೀನಾಸಂ ಆಸ್ಪತ್ರೆಗೆ ಆಗಮಿಸಿದ್ದಾರೆ. ಬೈಕ್ ಸ್ಕಿಡ್ ಆಗಿ ಬಿದ್ದಿದ್ದೇವೆ ಎಂದು ನವೀನ್ ಹೇಳಿಕೆ ನೀಡಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತವಾಗಿದೆ.

'ನಾನು ಅವನಲ್ಲ ಅವಳು ಚಿತ್ರದ ನಟನೆಗೆ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಒಗ್ಗರಣೆ, ದಾಸವಾಳ, ಸಿಪಾಯಿ, ಜಂಟಲ್‌ಮ್ಯಾನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವಸ್ಥಾಂತರ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದವು.

 

click me!