ಕನ್ನಡ ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಬಗ್ಗೆ ಯಾರೂ ಮಾತಾಡಿರ್ಲಿಲ್ಲ; ಎಂಥ ಉತ್ತರ ಸಿಕ್ತು ನೋಡಿ!

Published : Mar 17, 2024, 04:16 PM ISTUpdated : Mar 17, 2024, 07:30 PM IST
ಕನ್ನಡ  ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಬಗ್ಗೆ ಯಾರೂ ಮಾತಾಡಿರ್ಲಿಲ್ಲ; ಎಂಥ ಉತ್ತರ ಸಿಕ್ತು ನೋಡಿ!

ಸಾರಾಂಶ

ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ಸೆಲೆಬ್ರಿಟಿಗಳು ಹಾಕಿದ ಮಾರ್ಯಾದೆ ಪ್ರಶ್ನೆ ಪೋಸ್ಟ್ ಬಹಳ ಸದ್ದು ಮಾಡಿತ್ತು. ನಿರ್ದೇಶಕ ಸಿಂಪಲ್ ಸುನಿಯಿಂದ ಹಿಡಿದು ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್ ಟ್ರೇನರ್ ಶ್ರಿನಿವಾಸ್ ಗೌಡ..

ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ಸೆಲೆಬ್ರಿಟಿಗಳು ಹಾಕಿದ ಮಾರ್ಯಾದೆ ಪ್ರಶ್ನೆ ಪೋಸ್ಟ್ ಬಹಳ ಸದ್ದು ಮಾಡಿತ್ತು. ನಿರ್ದೇಶಕ ಸಿಂಪಲ್ ಸುನಿಯಿಂದ ಹಿಡಿದು ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್ ಟ್ರೇನರ್ ಶ್ರಿನಿವಾಸ್ ಗೌಡ, ನಿರಂಜನ್ ದೇಶಪಾಂಡೆ, ರುಕ್ಮಿಣಿ ವಸಂತ್, ನಾಗಭೂಷಣ, ಶೈನ್ ಶೆಟ್ಟಿ ಸೇರಿದಂತೆ ಬಹಳಷ್ಟು  ತಾರೆಯರು ತಮ್ಮ ಪಾಲಿನ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು  ಪೋಸ್ಟ್ ಮಾಡಿದ್ದರು. 

ತಾರೆಯರೆಲ್ಲಾ ಹೀಗೆ ಮಾರ್ಯಾದೆ ಪ್ರಶ್ನೆ ಬಗ್ಗೆ ಧ್ವನಿ ಎತ್ತುತ್ತಿದ್ದಂತೆ ಎಲ್ಲರ ತಲೆಯಲ್ಲಿ ಏನಿದು ಎಂಬ ಕುತೂಹಲದ ಪ್ರಶ್ನೆ ಹುಟ್ಟಿಕೊಂಡಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಮಾರ್ಯದೆ ಪ್ರಶ್ನೆ ಎಂಬ ಟೈಟಲ್ ನಡಿ ಸಿನಿಮಾ ಬರ್ತಿದೆ. ಅಂದಹಾಗೇ ಮಾರ್ಯಾದೆ ಪ್ರಶ್ನೆ ಎಂಬ ಸಿನಿಮಾದ ಶಕ್ತಿ ಆರ್.ಜೆ.ಪ್ರದೀಪ್. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್  ಅವರ ಸಾರಥ್ಯದ ಸಕ್ಕತ್ ಸ್ಟುಡಿಯೋ ಚೊಚ್ಚಲ ಸಿನಿಮಾವೇ ಮಾರ್ಯಾದೆ ಪ್ರಶ್ನೆ. 

ಬಾಹುಬಲಿ ಸಿನಿಮಾದ ಮಹಾ ಸೀಕ್ರೆಟ್ ಹೇಳಿಬಿಟ್ರು ರಾಣಾ ದಗ್ಗುಬಾಟಿ; ರಾಜಮೌಳಿ ಸುಮ್ಮನಿರ್ತಾರಾ?

ಕನ್ನಡ ಸೆಲೆಬ್ರಿಟಿಗಳಿಂದ ಮಾರ್ಯಾದೆ ಪ್ರಶ್ನೆ ಬಗ್ಗೆ ಧ್ವನಿ ಎತ್ತಿಸಿ ಚಿತ್ರತಂಡ ವಿಭಿನ್ನವಾಗಿ ತಮ್ಮ ಟೈಟಲ್ ಲಾಂಚ್ ಮಾಡಿದೆ. ಸಕ್ಕತ್ ಸ್ಟುಡಿಯೋದ ಸಕ್ಕತ್ ಸಿನಿಮಾವಾಗಿರುವ ಈ ಚಿತ್ರಕ್ಕೆ ಪ್ರದೀಪ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಾರ್ಯಾದೆ ಪ್ರಶ್ನೆ ಸಿನಿಮಾಗೆ ಸಂದೀಪ್ ವೆಲ್ಲುರಿ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ, ಗೌಡ ಅರ್ಜುನ್ ಸಂಕಲನ ಚಿತ್ರಕ್ಕಿದೆ. ಸದ್ಯ ಸಿನಿಮಾದ ಶೀರ್ಷಿಕೆಯನ್ನು ಮಾತ್ರ ಚಿತ್ರತಂಡ ಬಹಿರಂಗಪಡಿಸಿದೆ. 

ಪೋಷಕರಿಗೆ ಥ್ಯಾಂಕ್ಸ್ ಹೇಳಿದ ಪ್ರಿಯಾಂಕಾ ಚೋಪ್ರಾ ಭಾರತದ ಬಗ್ಗೆ ಹಾಗ್ಯಾಕೆ ಹೇಳಿದ್ರೋ ಏನೋ!

ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ‘ದಿ ಬೆಸ್ಟ್ ಆಕ್ಟರ್’ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಚಿತ್ರಕಥೆ ಸಂಭಾಷಣೆ ಬರೆದು ಮಾರ್ಯಾದೆ ಪ್ರಶ್ನೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾರಾಗಣ ಹಾಗೂ ಮತ್ತಿತರ ವಿಷಯಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ ಎನ್ನಲಾಗಿದೆ.

ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Gramayana Movie Review: ಹೇಗಿದೆ ದೊಡ್ಮನೆ ಕುಡಿ ‘ಗ್ರಾಮಾಯಣ’? ಇಲ್ಲಿದೆ ಸಂಪೂರ್ಣ ವಿಮರ್ಶೆ
Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?