ಪುನೀತ್​ ರಾಜ್​ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಬಿಗ್​ಬಾಸ್​ ನಮ್ರತಾ ಗೌಡ: ಶ್ಲಾಘನೆಗಳ ಮಹಾಪೂರ

Published : Mar 17, 2024, 12:38 PM IST
ಪುನೀತ್​ ರಾಜ್​ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಬಿಗ್​ಬಾಸ್​ ನಮ್ರತಾ ಗೌಡ: ಶ್ಲಾಘನೆಗಳ ಮಹಾಪೂರ

ಸಾರಾಂಶ

ಇಂದು ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ಅವರ ಹುಟ್ಟುಹಬ್ಬ. ಈ ದಿನವನ್ನು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ವಿಶೇಷವಾಗಿ ಆಚರಿಸಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.  

ಇಂದು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಬದುಕಿರುತ್ತಿದ್ದರೆ,  ಅವರು ಇಂದು ಅಂದರೆ ಮಾರ್ಚ್​ 17 ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು. ತಮ್ಮ 46ನೇ ವಯಸ್ಸಿನಲ್ಲಿಯೇ ಅಪ್ಪು ಅವರು ಅಸಂಖ್ಯ ಅಭಿಮಾನಿಗಳು, ಕುಟುಂಬಸ್ಥರನ್ನು ಅಗಲಿದರು. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಹಲವಾರು ನಟ-ನಟಿಯರು ಅಪ್ಪು ಅವರನ್ನು ನೆನೆದು ಭಾವುಕರಾಗುತ್ತಿದ್ದಾರೆ. ವಿಭಿನ್ನ ರೀತಿಯಲ್ಲಿ ಪೋಸ್ಟ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಮಾಡುತ್ತಿದ್ದಾರೆ. ಅಪ್ಪು ಫ್ಯಾನ್ಸ್​ ಹುಟ್ಟುಹಬ್ಬದ ನಿಮಿತ್ತ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇದೀಗ ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಅವರು, ವಿಶೇಷ ರೀತಿಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದರ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವಾರು ಮಂದಿಗೆ ಪ್ಯಾಕೆಟ್​ನಲ್ಲಿ ಆಹಾರವನ್ನು ಹಂಚುವ ಮೂಲಕ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಶೇರ್​ ಮಾಡಿರುವ ಅವರು, ಹ್ಯಾಪಿಯೆಸ್ಟ್ ಬರ್ತ್​ಡೇ ಪವರ್​ಸ್ಟಾರ್ ಎಂದು ಶೀರ್ಷಿಕೆ ನೀಡಿದ್ದಾರೆ. ನಂತರ ಮಾತನಾಡಿರುವ ಅವರು,  ಇವತ್ತು ಮಾರ್ಚ್ 17, ನನ್ನ ಬಾಸ್ ಪುನೀತ್ ರಾಜ್​ಕುಮಾರ್ ಸರ್ ಬರ್ತ್​ಡೇ. ಇವತ್ತು ನನ್ನ ಕೈಲಾದಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ಇದನ್ನು ನಾನು ಪ್ರತಿ ತಿಂಗಳು 17ರಂದು ಕಂಟಿನ್ಯೂ ಮಾಡೋಣ ಎನ್ನುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.  

ಗಂಡುಬೀರಿಯಿಂದ ಗೃಹಿಣಿ... ಇನ್ಮುಂದೆ ಇನ್ಸ್​ಪೆಕ್ಟರ್​... ಸತ್ಯ ಬದುಕಿನ ಹೊಸ ಅಧ್ಯಾಯ- ಹೀಗಿದೆ ಲುಕ್​!

ಬಳಿಕ ತಾವು ಮಾಡಿರುವ ಸಹಾಯದ ಕುರಿತು ವಿಡಿಯೋದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆಹಾರದ ಪೊಟ್ಟಣವನ್ನು ರೆಡಿ ಮಾಡಿರುವ ಅವರು, ಅದರ ಮೇಲೆ ನಿಮ್ಮ ಜೀವನದಲ್ಲಿ ದೀಪಾವಳಿ ಬಂದೇ ಬರುತ್ತೆ, ಪಟಾಕಿ ಯಾರದ್ದೇ ಆಗಿರಲಿ ಹಚ್ಚೋರು ನೀವಾಗಿರಬೇಕು ಎಂದು ಬರೆದು ಪಿಆರ್​ಕೆ ಎಂದು ಬರೆದು ಒಂದು ಸ್ಟಿಕ್ಕಿ ನೋಟ್ ಹಾಕಿ ಅದನ್ನು ಜನರಿಗೆ ಹಂಚಿದ್ದಾರೆ. ಪ್ರತಿ ತಿಂಗಳೂ 17ನೇ ತಾರೀಖು ತಾವು ಇದನ್ನು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ನಮ್ರತಾ ಅವರು ಬಿಗ್​ಬಾಸ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಇವರ ಫ್ಯಾನ್ಸ್​ ಸಂಖ್ಯೆಯೂ ಹೆಚ್ಚಿತ್ತು. ಆದರೆ ಕೆಲವು ವಾರಗಳಲ್ಲಿಯೇ ನಮ್ರತಾ ಹೊರಕ್ಕೆ ಬಂದರು. ಇದೀಗ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಹಲವಾರು ರೀತಿಯ ವೇಷ-ಭೂಷಣದಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತ ಹೆಸರು ಗಳಿಸುತ್ತಿದ್ದಾರೆ. ಇದೀಗ ಪುನೀತ್​ ಅವರ ಜನ್ಮ ದಿನದಂದು ಈ ರೀತಿಯ ಕಾರ್ಯ ಮಾಡಿರುವುದಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು  ನೀವು ಪುನೀತ್ ಇಷ್ಟು ಸರ್ ನ ಇಷ್ಟು ದೊಡ್ಡ ಅಭಿಮಾನಿ ಅಂತ ಗೊತ್ತಿರಲಿಲ್ಲ ಎನ್ನುತ್ತಿದ್ದರೆ, ಮತ್ತೆ ಕೆಲವರು, ಅವರದ್ದೇ ಹೆಸರಿನ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದ ನಿಮಗೆ ನಮನ ಎನ್ನುತ್ತಿದ್ದಾರೆ.  

ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಕೂಡ ವಿಶೇಷ ರೀತಿಯಲ್ಲಿ, ಪುನೀತ್​ ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಅವರ ಜಾಕಿ ಸಿನಿಮಾದ ಜಾಕಿ ಜಾಕಿ ಸಾಂಗ್​ಗೆ  ಕಾರ್ತಿಕ್ ಮಹೇಶ್ ಅವರು ಸ್ಟೆಪ್ ಹಾಕಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. 
ಬೆಂಗಳೂರಿನಲ್ಲಿಯೇ ನಟಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಹೆರಿಗೆ? ಏನಿದು ಹೊಸ ವಿಷ್ಯ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ