ಬೊಂಬೆಗೆ ಆಹ್ವಾನಿಸಿ, ಮತ್ತೆ ಸುಟ್ಟಿದ್ದಾರೆ, 5 ತಿಂಗಳು ಮನೆ ಬಿಡ ಬೇಕಿಲ್ಲ; ಸ್ಪಂದನಾ ಸಂಸ್ಕಾರದ ಬಗ್ಗೆ ಪೂಜಾರಿ

By Vaishnavi ChandrashekarFirst Published Aug 12, 2023, 10:01 AM IST
Highlights

ಶ್ರೀರಂಗ ಪಟ್ಟಣದಲ್ಲಿ ಸ್ಪಂದನಾ ಸಂಸ್ಕಾರ. ಯಾವ ನಕ್ಷತ್ರದಲ್ಲಿ ಯಾವ ಪೂಜೆ ಮಾಡಿದ್ದಾರೆ. ಪೂಜಾರಿಗಳ ಹೇಳಿಕೆ ನೆಟ್ಟಿಗರು ಗಾಬರಿ......
 

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮುದ್ದಿನ ಪತ್ನಿ ಸ್ಪಂದಾನ ಲೋ ಬಿಪಿಯಿಂದ ಅಗಲಿದ್ದಾರೆ. ಆಪ್ತ ಕುಟುಂಬಸ್ಥರ ಜೊತೆ ಬ್ಯಾಂಕಾಕ್ ಪ್ರವಾಸ ಮಾಡಿದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಬಂದು ಮಲಗಿದವರು ಮತ್ತೆ ಎದ್ದೇಳಲಿಲ್ಲ. ಸ್ಪಂದನಾ ಅಗಲಿ ಒಂದು ದಿನವಾಗುತ್ತಿದ್ದಂತೆ ಕರ್ನಾಟಕದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ತಿಳಿಯಿತ್ತು. ಥೈಲ್ಯಾಂಡ್‌ ಎಂಬಸಿ ಜೊತೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಸ್ಪಂದನಾರನ್ನು ಬೆಂಗಳೂರಿಗೆ ಕಾರ್ಗೋ ವಿಮಾನದ ಮೂಲಕ ಕರೆ ತರಲಾಗಿತ್ತು.

ಮಲ್ಲೇಶ್ವರಂನಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬೆಂಗಳೂರಿನ ಹರಿಶ್ಚಂದ್ರ ಘಾಟನಲ್ಲಿ ಈಡಿಗ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. 5ನೇ ದಿನ ಶ್ರೀರಂಗ ಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಿ ಪೂಜೆ ಸಲ್ಲಿಸಿದ್ದಾರೆ.

Latest Videos

ಆ ಕುಟುಂಬಕ್ಕೆ ಏನೋ ಆಗಿದೆ, ದೇವರೇ ದೃಷ್ಠಿ ಹಾಕಿದ್ದಾನೆ: ಸ್ಪಂದನಾ ಬಗ್ಗೆ ಗಿರಿಜಾ ಲೋಕೇಶ್‌ ಭಾವುಕ

'ವಿಜಯ್ ರಾಘವೇಂದ್ರ ಧರ್ಮಪತ್ನಿ ಕಾರ್ಯಕ್ರಮವನ್ನು ಕ್ರಮವಾಗಿ ಮಾಡಲಾಗಿದೆ. ಶ್ರೀರಂಗ ಪಟ್ಟಣದ ಕಾವೇರಿ ತೀರದಲ್ಲಿ ಅಸ್ತಿ ವಿಸರ್ಜನಿ ಕಾರ್ಯಕ್ರಮ ಹಾಗೂ ಹೋಮ ಮಾಡಬೇಕು ಎಂದು ಚೆನ್ನೇಗೌಡರು ಹೇಳಿದ್ದರು. ಉತ್ತರಾಭಾದ್ರ ನಕ್ಷತ್ರದಲ್ಲಿ ಸ್ಪಂದಾನ ತೀರಿಕೊಂಡಿರುವ ಕಾರಣ ಶಾಂತಿ ಹೋಮ ಮಾಡಿಸಲಾಗಿದೆ. ಅದಕ್ಕೂ ಮುನ್ನ ವಿಜಯ್ ರಾಘವೇಂದ್ರ ಮಗ ಶೌರ್ಯ ಅವರಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿ ಹೋಮ ಮಾಡಲಾಗಿದೆ. ಒಂದು ಬೊಂಬೆಗೆ ಸ್ಪಂದನಾ ಅವರನ್ನು ಆಹ್ವಾಹನ ಮಾಡಿ ಅದನ್ನು ಸುಟ್ಟು ಹಾಕಲಾಗಿದೆ. ಅದನ್ನು ಮತ್ತೆ ಅಸ್ತಿ ಜೊತೆಗೆ ಸೇರಿಸಿಕೊಂಡು ಅಸ್ತಿನಾರಾಯಣ ಸ್ವಾಮಿ ಪೂಜೆಯನ್ನು ಕ್ರಮವಾಗಿ ರುಧ್ರ ಮತ್ತು ಸೂಕ್ತ ಕ್ರಮದಿಂದ ಪೂಜೆ ಮಾಡಿಸಿದ್ದೀವಿ. ಪಂಚಾಮೃತ ಅಂತಾ...ತುಪ್ಪ ಹಾಲು ಸಕ್ಕರ ಮೊಸರು ಜೇನುತುಪ್ಪ ಎಳನೀರು ಅಭಿಷೇಕ ಮಾಡಿ ಆ ಅಸ್ತಿಗೆ ಪೂಜೆ ಮಾಡುತ್ತೀವಿ. ಅವರಿಗೆ ಹಸಿವು ಬಾಯಾರಿಕೆ ಇರುತ್ತದೆ ಅದಿಕ್ಕೆ ಪಿಂಡ ಪ್ರಧಾನ ಮತ್ತು ಬಲಿ ಪ್ರಧಾನ ಮಾಡಲಾಗಿದೆ. ಆಗಮಿಸಿದ ಅವರು ಸ್ನೇಹಿತರು ಮತ್ತು ಬಂಧುಗಳು ಎಲ್ಲರ ಮೂಲಕ ಅವರಿಗೆ ಅರ್ಪಣೆ ಮಾಡಿದ ಫಲ ಮತ್ತು ಲಾಜ ಎನ್ನುತ್ತಾರೆ ನಮ್ಮ ಸಂಸ್ಕೃತದಲ್ಲಿ ಅದನ್ನು ಪೂರಿ ಎನ್ನುತ್ತಾರೆ. ಸ್ಪಂದನಾ ಅವರಿಗೆ ಸದ್ಗತಿ ಸಿಗಲಿ ಎಂದು ಅವುಗಳನ್ನು ಅರ್ಪಣೆ ಮಾಡಿ ಆ ಅಸ್ತಿಯನ್ನು ಕಾವೇರಿ ಜಲದಲ್ಲಿ ಅರ್ಪಣೆ ಮಾಡಿದ್ದಾರೆ. ಆದಷ್ಟು ಧಾರ್ಮಿಕ ಸ್ಥಳದಲ್ಲಿ ಈ ಪೂಜೆ ಮಾಡಬೇಕು, ಬಂದಿದ್ದು ತಡವಾದರೂ ಶ್ರದ್ಧೆಯಿಂದ ಮಾಡಿದ್ದಾರೆ' ಎಂದು ಪೂಜಾರಿಗಳು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

KETO Diet ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!

'ನಕ್ಷತ್ರ ಹೋಮ ಮಾಡಲು ಒಂದು ಕಾರಣವಿದೆ. ಸ್ಪಂದನಾ ತೀರಿಕೊಂಡಾಗ ಧನಿಷ್ಟಾ ಪಂಚಕ ನಕ್ಷತ್ರ ಮತ್ತು ತ್ರಿಪಾದಿ ನಕ್ಷತ್ರಗಳು ಅಂತ ಇದೆ...ಒಂದು ವೇಳೆ ಧನಿಷಾ ಪಂಚಕ ನಕ್ಷತ್ರದಲ್ಲಿ ವ್ಯಕ್ತಿ ತೀರಿಕೊಂಡರೆ ಅದು ಮನೆಯಲ್ಲಿ ಆಗಿದ್ದರೆ 5 ತಿಂಗಳುಗಳ ಕಾಲ ಮನೆ ಬಿಡಬೇಕು ಅಂತಿದೆ ಆದರೆ ಸ್ಪಂದನಾ ಮನೆಯಲ್ಲಿ ತೀರಿಕೊಂಡಿಲ್ಲ ಆದರೂ ದೋಷ ಪರಿಹಾರ ಆಗಬೇಕು ಎಂದು ಉತ್ತರಾಭಾದ್ರ ನಕ್ಷತ್ರದಲ್ಲಿ ಹೋಮ ಮಾಡಲಾಗಿದೆ. ವಿಜಯ್ ಅವರು ಮನೆ ಬಿಡುವ ಅಗತ್ಯವಿಲ್ಲ ಏಕೆಂದರೆ ಸ್ಪಂದನಾ ಹೊರಗಡೆ ಹೋದಾಗ ತೀರಿಕೊಂಡಿರುವುದು. ಅವರು ಕುಟುಂಬಕ್ಕೆ ಯಾವ ತೊಂದರೆ ಆಗುವುದಿಲ್ಲ ಏಕೆಂದರೆ ಸಂಸ್ಕಾರವನ್ನು ಕ್ರಮವಾಗಿ ಮಾಡಲಾಗಿದೆ' ಎಂದು ಪೂಜಾರಿ ಹೇಳಿದ್ದಾರೆ. 

'ಯಾಕೆ ಬೊಂಬೆಗೆ ಆಹ್ವಾಹನ ಮಾಡಲಾಗಿತ್ತು ಅಂದ್ರೆ ನಮ್ಮ ಶಾಸ್ತ್ರದಲ್ಲಿದೆ ತೀರಿಕೊಂಡ ಸಮಯದಲ್ಲಿ ಬೊಂಬೆಗೆ ಆಹ್ವಾಹನೆ ಮಾಡಿ ಅದರಿಂದ ತೊಂದರೆ ಯಾರಿಗೂ ಮರು ಕಳುಹಿಸಬಾರದು ಎಂದು ಪೂಜೆ ಮಾಡಲಾಗಿದೆ' ಎಂದಿದ್ದಾರೆ. 

click me!