‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ಈ ಎರಡು ಘಟನೆಗಳೇ ಪ್ರೇರಣೆ ಎಂದು ನಿರ್ದೇಶಕ ಕೆ ಎಸ್ ನಂದೀಶ್ ಹೇಳಿದ್ದಾರೆ. ರಿಷಿ ನಾಯಕನಾಗಿರುವ ಈ ಸಿನಿಮಾದ ಟ್ರೇಲರನ್ನು ನಿರ್ದೇಶಕ ಜೇಕಬ್ ವರ್ಗೀಸ್ ಬಿಡುಗಡೆ ಮಾಡಿದರು.
ಘಟನೆ 1 - 1954ನೇ ಇಸವಿ. ಜರ್ಮನಿಯ ಆಚೆನ್‌ನಿಂದ 92 ಜನ ಪ್ರಯಾಣಿಕರನ್ನು ತುಂಬಿಕೊಂಡು ಬ್ರೆಜಿಲ್‌ಗೆ ಹೊರಟ ಸ್ಯಾಂಟಿಯಾಗೋ 513 ಫ್ಲೈಟ್ ನಾಪತ್ತೆಯಾಗುತ್ತೆ. 35 ವರ್ಷಗಳ ಬಳಿಕ ಬ್ರೆಜಿಲ್‌ನಲ್ಲಿ ಈ ಫ್ಲೈಟ್ ಕಾಣಿಸಿಕೊಳ್ಳುತ್ತೆ. ಘಟನೆ 2- ಚಕ್ರವರ್ತಿಯೊಬ್ಬ ಯುದ್ಧದಲ್ಲಿ ಗೆಲುವು ಸಾಧಿಸಿದ ರಾತ್ರಿ ರಣಾಂಗಣಕ್ಕೆ ಬರುತ್ತಾನೆ. ಅಲ್ಲೊಬ್ಬ ವ್ಯಕ್ತಿ ಸತ್ತ ವ್ಯಕ್ತಿಯ ಮಾಂಸವನ್ನು ತಿನ್ನುತ್ತಿರುವುದನ್ನು ಅಸಹ್ಯದಿಂದ ನೋಡುತ್ತಾನೆ. ಆದರೆ ಆತ ನಸು ನಗುತ್ತಾ, ರಾಜ, ನಿನ್ನ ಆಹಾರ ತಿಂದದ್ದಕ್ಕೆ ಕ್ಷಮೆ ಇರಲಿ ಎನ್ನುತ್ತಾನೆ.
‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ಈ ಎರಡು ಘಟನೆಗಳೇ ಪ್ರೇರಣೆ ಎಂದು ನಿರ್ದೇಶಕ ಕೆ ಎಸ್ ನಂದೀಶ್ ಹೇಳಿದ್ದಾರೆ. ರಿಷಿ ನಾಯಕನಾಗಿರುವ ಈ ಸಿನಿಮಾದ ಟ್ರೇಲರನ್ನು ನಿರ್ದೇಶಕ ಜೇಕಬ್ ವರ್ಗೀಸ್ ಬಿಡುಗಡೆ ಮಾಡಿದರು. ನಾಯಕ ರಿಷಿ, ‘ಸಮಾಜದಲ್ಲಿ ನಡೆಯುವ ದೌರ್ಜನ್ಯ, ಕಳಪೆ ಕಾಮಗಾರಿ ಮೊದಲಾದವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸಿನಿಮಾ ಸೂಚನೆಯನ್ನು ನೀಡುತ್ತದೆ’ ಎಂದರು. ನಾಯಕಿ ಪ್ರಿಯಾಂಕಾ ಕುಮಾರ್, ಕಲಾವಿದರಾದ ವಿನೋದ್ ಆಳ್ವ, ಗಿರೀಶ್, ಶಿವರಾಜ್ ಕೆ ಆರ್ ಪೇಟೆ, ನಿರ್ಮಾಪಕರಾದ ವಿಜಯ್, ಸಂಭಾಷಣೆಕಾರ ರಘು ನಿಡುವಳ್ಳಿ ಕಾರ್ಯಕ್ರಮದಲ್ಲಿದ್ದರು.
ಚಂದ ಕಾಣ್ಬೇಕು ಅಂದ್ರೆ ವೆಡ್ಡಿಂಗ್ ಶೂಟ್ ಮಾಡಿಸಿ, ಸಿನಿಮಾ ಅಲ್ಲ: ರಕ್ಕಸಪುರದೋಳ್ ನಟ ರಾಜ್ ಬಿ ಶೆಟ್ಟಿ
ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಾಯಕ ರಿಷಿ, ‘ಇದೊಂದು ಇನ್‌ವೆಸ್ಟಿಗೇಶನ್ ಥ್ರಿಲ್ಲರ್. ಒಂದು ಸಣ್ಣ ಕಿಡ್ನಾಪ್ ಕೇಸ್ ಮೂಲಕ ಕತೆ ತೆರೆದುಕೊಳ್ಳುತ್ತದೆ. ರುದ್ರ ಎಂಬ ಇನ್‌ವೆಸ್ಟಿಗೇಟಿವ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಅನೇಕ ಅಂಶಗಳು ಸಿನಿಮಾದಲ್ಲಿ ಬರುತ್ತದೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ನೀಡಲಾಗಿದೆ. ಇದರ ಜೊತೆಗೆ ಪೊಲೀಸ್ ಡಿಪಾರ್ಟ್‌ಮೆಂಟ್‌ನ ಅನೇಕ ಸೂಕ್ಷ್ಮಗಳನ್ನೂ ಸಿನಿಮಾದಲ್ಲಿ ತರುವ ಪ್ರಯತ್ನ ಮಾಡಿದ್ದೇವೆ’ ಎಂದಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಕುಮಾರ್ ನಾಯಕಿ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ ತಾರಾಗಣದಲ್ಲಿದ್ದಾರೆ. ಅಶ್ವಿನಿ ಲೋಹಿತ್ ನಿರ್ಮಾಪಕರು. ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.