ಒಂದಾ ಎರಡಾ.....ಜ್ಯೋತಿಷಿ ರೇಣುಸ್ವಾಮಿ ಸಂಕಷ್ಟಕ್ಕೆ ಮತ್ತಷ್ಟು ತುಪ್ಪ ಹಾಕಿದೆ ರಶ್ಮಿಕಾ ಮಂದಣ್ಣ ಪೂಜೆ ವಿಡಿಯೋ.....
ಆಂಧ್ರ ಮತ್ತು ತೆಲಂಗಾಣದಲ್ಲಿ ಇರುವ ಸಾಕಷ್ಟು ಸೆಲೆಬ್ರಿಟಿಳು ಏನೇ ಸಮಸ್ಯೆ ಆದರೂ ಹೆಚ್ಚಾಗಿ ಸಂಪರ್ಕಿಸುವುದು ಜ್ಯೋತಿಷಿ ರೇಣುಸ್ವಾಮಿ ಅವರನ್ನು. ಒಂದು ವೇಳೆ ಆ ಸೆಲೆಬ್ರಿಟಿ ಸಂಪರ್ಕ ಮಾಡಿಲ್ಲ ಅಂದ್ರೆ ಅವರ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದು ಅಥವಾ ಮಾಧ್ಯಮಗಳಲ್ಲಿ ಮಾತನಾಡಿ ಅವರ ಗಮನ ಸೆಳೆದು ಬರುವಂತೆ ಮಾಡಿಕೊಳ್ಳುತ್ತಾರೆ. ಕರ್ನಾಟಕದ ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ಸಹ ಕುಟುಂಬ ಸಮೇತರಾಗಿ ಪೂಜೆ ಮಾಡಿಸಿದ್ದರಂತೆ. ಕೆಲವು ದಿನಗಳ ಹಿಂದೆ ಕನ್ನಡತಿ ನಿಶ್ವಿಕಾ ನಾಯ್ಡು ಕೂಡ ಪೂಜೆ ಮಾಡಿಸಿದ್ದರು.
ಹೆಚ್ಚಾಗಿ ಡಿವೋರ್ಸ್ ಮತ್ತು ಹಣದ ಬಗ್ಗೆ ಮಾತನಾಡುವ ರೇಣುಕಾಸ್ವಾಮಿ ಈಗ ಸಂಕಷ್ಟದಲ್ಲಿ ಇದ್ದಾರೆ. ಸಮಂತಾ ಮತ್ತು ನಾಗಚೈತ್ಯ ಮದುವೆ ಆದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಪಡೆಯುತ್ತಾರೆ ಎಂದು ಹೇಳಿಕೆ ನೀಡಿದ್ದರು, ಅದರಂತೆ ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ನಾಗಚೈತನ್ಯಾ ಮತ್ತು ಶೋಭಿತಾ ನಿಶ್ಚಿತಾರ್ಥವಾದ ದಿನವೇ ವಿಡಿಯೋ ಮಾಡಿ ಮತ್ತೊಬ್ಬ ಸ್ತ್ರೀಯಿಂದ ಇವರಿಬ್ಬರು ದೂರ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹೀಗಾಗಿ ತೆಲುಗು ಟಿವಿಯಲ್ಲಿ ವೇಣುಸ್ವಾಮಿ ವಿಚಾರವಾಗಿ ಚರ್ಚೆ ಆರಂಭಿಸಿದ್ದರು ಆಗ ಅಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ ಬಳಸಿದ್ದಕ್ಕೆ ಮತ್ತೊಂದು ಚರ್ಚೆ ಶುರುವಾಗಿದೆ.
ತಂಗಿಗೆ ಕಾಲ್ಗೆಜ್ಜೆ ಕೊಟ್ಟಿದ ರಣ್ವಿತ್; ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಫೋಟೋ ವೈರಲ್
ಹೌದು! ಯಾರೇ ಸೆಲೆಬ್ರಿಟಿ ಸಂಪರ್ಕ ಮಾಡಿದ್ದರೂ ವೇಣುಸ್ವಾಮಿ ರಾಜಶ್ಯಾಮಲ ಪೂಜೆ ಮಾಡಿಸಲು ಹೇಳುತ್ತಾರೆ. ಈ ಪೂಜೆಯಲ್ಲಿ ಮದ್ಯ, ಮಾಂಸವನ್ನು ನೈವೇದ್ಯವಾಗಿ ಇಟ್ಟು ಪೂಜೆ ಮಾಡುವುದು ವಿಶೇಷ. ಆದರೆ ರಶ್ಮಿಕಾ ಮಂದಣ್ಣ ಪೂಜೆ ಮಾಡಿಸಿರುವ ವಿಡಿಯೋದಲ್ಲಿ ವೇಣುಸ್ವಾಮಿಗೆ ಯಾವು ಮಂತ್ರ ಹೇಳಲು ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟಿವಿ ಚರ್ಚೆಯಲ್ಲಿ ವಾದ ಮಾಡಿದ್ದಾರೆ. ಅಷ್ಟೇ ಅಲ್ಲ ಸಂಪ್ರೋಕ್ಷಣೆ ಮಾಡುವುದಕ್ಕೂ ವೇಣುಸ್ವಾಮಿಗೆಎ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೈಲೈಟ್ ಮಾಡಿ ತೋರಿಸಿದ್ದಾರೆ. ರಶ್ಮಿಕಾ ಮಂದಣ್ಣ ವೇಣುಸ್ವಾಮಿ ಬಳಿ ಪೂಜೆ ಮಾಡಿಸಿದ್ದು ನಿಜ ಆದರೆ ಎಲ್ಲಿಯೂ ವಿಡಿಯೋ ಅಥವಾ ಫೋಟೋ ಹಂಚಿಕೊಂಡಿರಲಿಲ್ಲ.