ಮಾರ್ಚ್ ನಿಂದ ನನ್ನ ಫೋನ್ ಆಫ್ ಮಾಡುತ್ತೇನೆ; ನಟ ರಿಷಬ್ ಶೆಟ್ಟಿ ಹೀಗೆ ಹೇಳಿದ್ದೇಕೆ?

Published : Feb 21, 2023, 03:54 PM ISTUpdated : Feb 21, 2023, 05:02 PM IST
ಮಾರ್ಚ್ ನಿಂದ ನನ್ನ ಫೋನ್ ಆಫ್ ಮಾಡುತ್ತೇನೆ; ನಟ ರಿಷಬ್ ಶೆಟ್ಟಿ ಹೀಗೆ ಹೇಳಿದ್ದೇಕೆ?

ಸಾರಾಂಶ

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ  ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಗೆದ್ದಿದ್ದಾರೆ. ಸಮಾರಂಭದ ಬಳಿಕ ಬೆಂಗಳೂರಿಗೆ ಆಗಮಿಸಿದ ರಿಷಬ್ ಸೆಟ್ಟಿ ಮಾರ್ಚ್ ನಿಂದ ಫೋನ್ ಆಫ್ ಮಾಡುವುದಾಗಿ ಹೇಳಿದ್ದಾರೆ. 

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ ಸ್ಟಾರ್ ರಿಷಬ್ ಶೆಟ್ಟಿ ಅತ್ಯಂತ ಭರವಸೆಯ ನಟ ಹಿಂದಿ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. ಫೆಬ್ರವರಿ 20ರಂದು ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಎಲ್ಲರ ಗಮನ ಸೆಳೆದರು. ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿಗೆ ಆಗಮಿಸಿದ ರಿಷಬ್ ಸಂತಸ ಹಂಚಿಕೊಂಡರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮಾಧ್ಯಮದ ಜೊತೆ ಮಾತನಾಡಿದ ರಿಷಬ್ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು. 

 ರಿಷಬ್ ಶೆಟ್ಟಿ ಎಲ್ಲೇ ಹೋದರು ಯಾವುದೇ ಕಾರ್ಯಕ್ರಕ್ಕೆ ಹಾಜರಾದರು ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.  ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ಪಡೆಯುವಾಗಲೂ ರಿಷಬ್ ಪಂಚೆಯಲ್ಲೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರಶಸ್ತಿ ಕೈಯಲ್ಲಿ ಹಿಡಿದು ರಿಷಬ್ ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ನೀಡಿದ್ದಾರೆ. 

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಿಸಿದ 'ಕಾಂತಾರ' ರಿಷಬ್ ಶೆಟ್ಟಿ

ಮಾಧ್ಯಮದ ಜೊತೆ ಮಾತನಾಡಿದ ರಿಷಬ್, ಹಿಂದಿ ಸಿನಿಮಾಗೆ ಕೊಟ್ಟ ಪ್ರಶಸ್ತಿ ಇದಾಗಿದೆ. ಕನ್ನಡ ಸಿನಿಮಾಗೆ ಅಲ್ಲ.  ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಗಿದೆ. ಜವಾಬ್ಧಾರಿ ಹೆಚ್ಚು ಆಯ್ತು ಅನ್ನಿಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಬರ್ತಾ ಇದೆ. ನಮ್ಮ ಟ್ರಡೀಷನ್‌ನಲ್ಲೇ ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದ್ರು ಎಂದು ಹೇಳಿದರು. ಬಳಿಕ ಕಾಂತಾರ 2 ಬಗ್ಗೆಯೂ ಬಹಿರಂಗ ಪಡಿಸಿದರು. ಮಾರ್ಚ್ ನಿಂದನೇ ಕಾಂತಾರ-2 ಪ್ರಾರಂಭವಾಗಲಿದೆ ಎಂದು ಬಹಿರಂಗ ಪಡಿಸಿದರು. 'ಇನ್ಮುಂದೆ ಕಾಂತಾರ 2 ಕೆಲಸ ಶುರು ಮಾಡುತ್ತೇನೆ. ಮಾರ್ಚ್ ನಿಂದ ಫೋನ್ ಆಫ್ ಮಾಡುತ್ತೇನೆ' ಎಂದು ರಿಷಬ್ ಹೇಳಿದರು. 

ಎಲ್ಲರಲ್ಲೂ‘ನಮ್ಮ ಕಾಡು’ಎಂಬ ಭಾವನೆ ಮೂಡಲಿ: ರಿಷಬ್‌ ಶೆಟ್ಟಿ

ತಂಡಕ್ಕೆ, ಪುನೀತ್ ಹಾಗೂ ಭಗವಾನ್‌ಗೆ ಪ್ರಶಸ್ತಿ ಅರ್ಪಿಸಿದ ರಿಷಬ್

ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲೂ ಬರೆದುಕೊಂಡಿದ್ದರು.'ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ' ಎಂದು ರಿಷಬ್ ಶೆಟ್ಟಿ ಹೇಳಿದ್ದರು. 'ಕಾಂತಾರ ಇಡೀ ತಂಡದಿಂದ ಇದು ಸಾಧ್ಯವಾಗಿದ್ದು ಹಾಗಾಗಿ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ. ನನ್ನ ಪಿಲ್ಲರ್ ಆಫ್‌ ಲೈಫ್‌ ಪ್ರಗತಿ ಶೆಟ್ಟಿ ಕೂಡ' ಎಂದು ಹೇಳಿದ್ದರು. ಜೊತೆಗೆ ಈ ಪ್ರಶಸ್ತಿಯನ್ನು ದೈವ ನರ್ತಕರು, ಕರ್ನಾಟಕದ ಜನತೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭಗವಾನ್ ಸರ್‌ಗೆ ಅರ್ಪಿಸುವೆ ಎಂದು ಬರೆದುಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ