ಹೊಸ ಶೆಟ್ರು ಬಳಗ ಸೃಷ್ಟಿಸಿಕೊಂಡ್ರಾ ಕುಂದಾಪುರ ಕುವರ? ಬೇರೆಯವರಿಗೆ ದುಡಿದದ್ದು ಸಾಕು ತತ್ವ ಪಾಲಿಸ್ತಾರಾ ರಿಷಬ್ ಶೆಟ್ರು..?

Published : Mar 30, 2026, 12:47 PM IST
Rishab Shetty

ಸಾರಾಂಶ

ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್ ಮತ್ತು ಆಪ್ತರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ. ಇದೇ ವೇಳೆ 'ಎರಡನೇ ಅಧ್ಯಾಯ' ಆರಂಭಿಸುವುದಾಗಿ ಘೋಷಿಸಿದ್ದು, ತಮ್ಮದೇ ನಿರ್ಮಾಣ ಸಂಸ್ಥೆಯಡಿ 'ಕಾಂತಾರ 2' ಮತ್ತು 'ಪರಶುರಾಮ' ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಸ್ಯಾಂಡಲ್‌ವುಡ್​​ ಸಿನಿ ಮಾಂತ್ರಿಕ ರಿಷಬ್ ಶೆಟ್ಟಿ ಬಗ್ಗೆ ಈಗ ಟಾಪ್​ ಟು ಬಾಟಮ್​ ಸುದ್ದಿಯಾಗ್ತಿದೆ. ಅದಕ್ಕೆ ಕಾರಣ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ತನಗೆ ಬೇಕಾಗದ್ದವರನ್ನ ಅನ್ ಫಾಲೋ ಮಾಡಿರೋದು. ಆದ್ರೆ ಇದೇ ಟೈಮ್​​ನಲ್ಲಿ ರಿಷಬ್​​​​​​ ಮತ್ತೊಂದು ದೊಡ್ಡ ಕನಸಿನ ಹಿಂದೆ ಓಡುತ್ತಿರೋ ಬಗ್ಗೆಯೂ ಒಂದಿಷ್ಟು ಗುಟ್ಟು ರಟ್ಟಾಗಿದೆ. ಅದೇನು ಅಂತ ನೋಡೋಣ ಈ ಎಕ್ಸ್​ಕ್ಲ್ಯೂಸೀವ್ ಸ್ಟೋರಿಯಲ್ಲಿ.

ಆಪ್ತ ಬಳಗವನ್ನ ಅನ್​ ಫಾಲೋ ಮಾಡಿದ ರಿಷಬ್..!

‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಇತ್ತೀಚಿನ ನಡೆಗಳು ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿವೆ. ಕಾಂತಾರಕ್ಕೆ ಬಂಡವಾಳ ಹೂಡಿದ್ದ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯನ್ನೇ ಡಿವೈನ್ ಸ್ಟಾರ್ ತನ್ನಿಂದ ಡಿವೈಡ್ ಮಾಡಿದ್ದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆಯನ್ನ ರಿಷಬ್ ಅನ್‌ಫಾಲೋ ಮಾಡಿದ್ದಾರೆ.

ಅಷ್ಟೆ ಅಲ್ಲ ತನ್ನ ಆಪ್ತ ರಾಜ್​ ಬಿ ಶೆಟ್ಟಿಯನ್ನೇ ರಿಷಬ್ ಫಾಲೋ ಮಾಡುತ್ತಿಲ್ಲ ಅಂತೆಲ್ಲ ಸುದ್ದಿಯಾಗ್ತಿದೆ. ಇದೇ ಟೈಮ್​​ನಲ್ಲಿ 2ನೇ ಅಧ್ಯಾಯ ಆರಂಭ ಅಂತ ರಿಷಬ್​ ಅನೌನ್ಸ್​ ಬೇರೆ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ಏನು? ರಿಷಬ್ ಕೈ ಹಾಕಿರೋ ಆ ಎರಡನೇ ಅಧ್ಯಾಯ ಯಾವ್ದು ಅನ್ನೋದಕ್ಕೆ ಸಣ್ಣದೊಂದು ಕ್ಲ್ಯಾರಿಟಿ ಸಿಕ್ತಾ ಇದೆ.

ರಿಷಬ್ ಶೆಟ್ರು ಕೊಟ್ಟ ಎರಡನೇ ಅಧ್ಯಾಯ ಯಾವ್ದು..?

ಯೆಸ್, ಇಲ್ಲೇ ಇರೋದು ಅಸಲಿ ವಿಚಾರ. ರಿಷಬ್ ಶೆಟ್ಟಿ ಕಾಂತಾರದ ಪ್ರೀಕ್ವೆಲ್ ಕಥೆ ಹೇಳಿ ಗೆದ್ದ ಮೇಲೆ ಮುಂದಿನ ನಡೆ ಕಾಂತಾರ ಚಾಪ್ಟರ್​​ 2 ಕಡೆ ಅನ್ನೋ ಮಾತಿದೆ. ಆದ್ರೆ ಈ ಸಿನಿಮಾ ಶುರುವಾಗೋದು ಯಾವಾಗ ಅನ್ನೋದು ಯಾರಿಗೂ ಗೊತ್ತಿಲ್ಲ. ಅಷ್ಟೊತ್ತಿಗಾಗ್ಲೆ ರಿಷಬ್ ಬಳಗದಿಂದ ಮತ್ತೊಂದು ವಿಚಾರ ಅಂದ್ರೆ ಪರಶುರಾಮನ ಸ್ಟೋರಿ. ಈ ಕತೆಯ ಒನ್​ ಲೈನ್ ​​ಅನ್ನ ಶೆಟ್ರು ಬರೆದಿಟ್ಟು ವರ್ಷಗಳೇ ಆಗಿವೆಯಂತೆ. ಈಗ ತನ್ನ ಆಪ್ತ ಬಳಗವನ್ನೆಲ್ಲ ಅನ್​ ಫಾಲೋ ಮಾಡಿರೋ ಡಿವೈನ್​ ಸ್ಟಾರ್​ ಎರಡನೇ ಅಧ್ಯಾಯದ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಹೊಸ ಶೆಟ್ರು ಹುಡುಗ್ರ ಗ್ಯಾಂಗ್ ಕಟ್ಟಿರೋ ಕಾಡುಬೆಟ್ಟ ಶಿವ ತನ್ನ ಕನಸಿನ ಎರಡೂ ಸಿನಿಮಾಗಳ ಸ್ಕ್ರೀಪ್ಟ್ ಕೆಲಸಕ್ಕೆ ಕೂತಿದ್ದಾರೆ ಅಂತ ಹೇಳಲಾಗ್ತಿದೆ.

ಹೋಮ್​​ ಬ್ಯಾನರ್‌ನಲ್ಲೇ ರಿಷಬ್ ಕನಸಿನ ಸಿನಿಮಾ..!

ರಿಷಬ್ ಶೆಟ್ಟಿ ಇಷ್ಟು ವರ್ಷಗಳ ಕಾಲ ನಟ, ನಿರ್ದೇಶಕನಾಗಿ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದ್ರೆ ಆ ಸಿನಿಮಾಗಳೆಲ್ಲಾ ಬೇರೆ ಪ್ರೊಡಕ್ಷನ್ ಹೌಸ್. ಈಗ ತನ್ನ ಟ್ಯಾಲೆಂಟ್​ ಅನ್ನ ತನ್ನದೇ ನಿರ್ಮಾಣ ಸಂಸ್ಥೆಯ ಮೇಲೆ ಇನ್ವೆಸ್ಟ್ ಮಾಡೋದಕ್ಕೆ ಸಜ್ಜಾಗಿದ್ದಾರಂತೆ ಶೆಟ್ರು. ಅದಕ್ಕಾಗಿ ರಿಷಬ್​ ಶೆಟ್ಟಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದು. ಅದೇ ಬ್ಯಾನರ್​ನಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳನ್ನ ಕೊಡೋದಕ್ಕೆ ಎಲ್ಲಾ ತಯಾರಿ ಆಗ್ತಿದೆ. ಆ ಸಿನಿಮಾಗಳು ಕಾಂತಾರ ಚಾಪ್ಟರ್-2 ಹಾಗು ಪರಶುರಾಮ ಸಿನಿಮಾ ಆದ್ರೂ ಆಶ್ಚರ್ಯವೇನಿಲ್ಲ..

ಹೈದರಾಬಾದ್​​ನಲ್ಲಿ ಜೈ ಹನುಮಾನ್ ಎಂದಿರೋ ಡಿವೈನ್ ಸ್ಟಾರ್..!

ಸದ್ಯ ರಿಷಬ್ ಶೆಟ್ಟಿ ಹೈದರಾಬಾದ್ ಸೇರಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ಶೆಟ್ರು ಮಗ್ನರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಭಾರಿ ಜೋರಾಗಿ ನಡೆಯುತ್ತಿದೆ. ಆ ಕಡೆ ಶಿವಾಜಿ ಸಿನಿಮಾ ತಂಡ ಕೂಡ ರಿಷಬ್ ಶೆಟ್ಟಿಗಾಗೇ ಕಾಯ್ತಾ ಇದೆ. ಈ ಎರಡೂ ಸಿನಿಮಾದ ಚಿತ್ರೀಕರಣದಲ್ಲಿ ಒಟ್ಟೊಟ್ಟಿಗೆ ಭಾಗಿ ಆಗ್ತಾರಂತೆ ಕಾಡುಬೆಟ್ಟ ಶಿವ. ಈ ವರ್ಷವೇ ಈ ಎರಡೂ ಸಿನಿಮಾದ ಕೆಲಸ ಮುಗಿಸಿಕೊಂಡು ತನ್ನ ಬ್ಯಾನರ್‌ನ ಸಿನಿಮಾ ಕೂಡ ಇದೇ ವರ್ಷ ಅನೌನ್ಸ್ ಮಾಡೋ ಯೋಜನೆ ಹಾಕಿದ್ದಾರಂತೆ ರಿಷಬ್.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದ್ವೆಗಿಂತ ಬ್ರೇಕಪ್​ ಒಳ್ಳೇದು ಅಂದಿದ್ದೇ ತಪ್ಪಾಯ್ತಾ? ನಂಗೆ ಬೇರೆ ಐಡೆಂಟಿಟಿನೇ ಇಲ್ವಾ? ನಟಿ ಅಮೃತಾ ​ಗರಂ
ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ