Kantara OTT ರಿಲೀಸ್ ಮುಂದಕ್ಕೆ ಹೋಗಿದ್ದೇಕೆ? ಯಾವಾಗ ಸ್ಟ್ರೀಮಿಂಗ್ ಆಗುತ್ತೆ ರಿಷಬ್ ಶೆಟ್ಟಿ ಸಿನಿಮಾ?

By Shruthi Krishna  |  First Published Nov 18, 2022, 1:06 PM IST

ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಕಾಂತಾರ ಹೊಸ ಒಟಿಟಿ ರಿಲೀಸ್ ಡೇಟ್ ವೈರಲ್ ಆಗಿದೆ. 


ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಹವಾ ಇನ್ನು ಕಡಿಮೆ ಆಗಿಲ್ಲ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಕಾಂತಾರ ಇನ್ನೂ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಜೇಬಿಳಿಸಿರುವ ಕಾಂತಾರ ಒಟ್ಟು ಕಲೆಕ್ಷನ್ 350 ಕೋಟಿ ರೂಪಾಯಿ ದಾಟಿದ್ದು 400 ಕೋಟಿಯತ್ತ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ ಎನ್ನುವ ಚರ್ಚೆ ಶುರುವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಕಾಂತಾರ ಒಟಿಟಿ ಸ್ಟ್ರೀಮಿಂಗ್ ಪ್ರಾರಂಭಿಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಮುಂದೂಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ನವೆಂಬರ್ 4ಕ್ಕೆ ಕಾಂತಾರ ಸಿನಿಮಾ OTTಗೆ ಬರಲಿದೆ, ನವೆಂಬರ್ 18ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೀಗ ಮತ್ತೆ ಮುಂದಕ್ಕೆ ಹಾಕಲಾಗಿದೆ. 

ಅಂದಹಾಗೆ ಕಾಂತಾರ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಗಿದೆ. ಎಲ್ಲಾ ಭಾಷೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಕಾಂತಾರ ಹೊಸ ಒಟಿಟಿ ರಿಲೀಸ್ ಡೇಟ್ ವೈರಲ್ ಆಗಿದೆ. ಹೌದು ಈ ವರ್ಷದ ಸೂಪರ್ ಹಿಟ್ ಕನ್ನಡ ಸಿನಿಮಾಗಳಲ್ಲಿ ಒಂದಾಗಿರುವ ಕಾಂತಾರ ಸಿನಿಮಾ ಇದೇ ತಿಂಗಳು ನವೆಂಬರ್ 24ರಂದು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ನವೆಂಬರ್ 24ಕ್ಕೆ ಡೇಟ್ ಫಿಕ್ಸ್ ಮಾಡುವ ಮೊದಲು ಅನೇಕ ಬಾರಿ ಡೇಟ್ ಇಟ್ಟು ಬದಲಾಯಿಸಲಾಗಿದೆ. ಅಂದಹಾಗೆ ಕಾಂತಾರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾರಣ ಒಟಿಟಿ ರಿಲೀಸ್ ಮುಂದೂಡಲಾಗಿದೆ ಎನ್ನಲಾಗುತ್ತಿದೆ. 400 ಕೋಟಿ ಕ್ಲಬ್ ಸೇರಿದ ಬಳಿಕ ಒಟಿಟಿಗೆ ಬರಲಿದೆ ಎನ್ನಲಾಗಿದೆ.  

50 ದಿನ ಪೂರೈಸಿದ ಕಾಂತಾರ: ಅಭಿಮಾನಿಗಳ ಗಮನ ಸೆಳೆದ ಮರಳಲ್ಲಿ ಮೂಡಿದ ಪಂಜುರ್ಲಿ ಕಲಾಕೃತಿ

Tap to resize

Latest Videos

ಮೂಲಗಳ ಪ್ರಕಾರ ಕಾಂತಾರ ಸಿನಿಮಾದ ಸಂಗೀತ ವಿವಾದಲ್ಲಿ ಸಿಲುಕಿರುವ ಕಾರಣ ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಮುಂದೂಡಲಾಗುತ್ತಿದೆ ಎನ್ನಲಾಗಿದೆ. ಕಾಂತಾರ ಸಿನಿಮಾದ 'ವರಾಹ ರೂಪಮ್...' ಹಾಡನ್ನು ಮಲಯಾಳಂನ ಆಲ್ಬಂ ಸಾಂಗ್‌ನಿಂದ ಕಾಪಿ ಮಾಡಲಾಗಿದೆ ಎಂದು ಮೂಲ ಸಾಂಗ್ ನಿರ್ಮಾಪಕರು ದೂರು ದಾಖಲಿಸಿದ್ದರು. ಬಳಿಕ ಹಾಡನ್ನು ಸಿನಿಮಾದಿಂದ ತೆಗೆಯ ಬೇಕೆಂದು ಕೇರಳದ ಸ್ಥಳಿಯ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಅನೇಕ ಮ್ಯೂಸಿಕ್ ಆಪ್‌ಗಳಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ. ಹಾಗಾಗಿ ಒಟಿಟಿಯಲ್ಲಿ ರಿಲೀಸ್ ಆದರೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಮುಂದೂಡಲಾಗಿದೆ ಎನ್ನಲಾಗಿದೆ. 

Rishab Shetty ಮಂಗಳೂರಿನಲ್ಲಿ ಥಿಯೇಟರ್‌ ಸಿಕ್ಕಿರಲಿಲ್ಲ; ಸಹಾಯ ಮಾಡಿದ ಆರ್‌ಜೆಗೆ ರಿಟರ್ನ್‌ ಶೋ ಕೊಟ್ಟ ಶೆಟ್ರು

ಕಾಂತಾರ ಬಗ್ಗೆ, 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ.  ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.

 

click me!