Rakshit Shetty ಥಾಯ್‌ ಬಳಿಕ ಜಪಾನಿ ಭಾಷೆಯಲ್ಲಿ 777 ಚಾರ್ಲಿ: ಕಿರಣ್‌ರಾಜ್‌

By Suvarna News  |  First Published Nov 18, 2022, 9:26 AM IST

ರಕ್ಷಿತ್‌ ಶೆಟ್ಟಿನಟನೆಯ ‘777 ಚಾರ್ಲಿ’ ಸಿನಿಮಾಕ್ಕೆ ವಿಶ್ವಾದ್ಯಂತ ಬೇಡಿಕೆ ಬರುತ್ತಿದೆ. ಈಗಾಗಲೇ ಸಿನಿಮಾದ ಥಾಯ್‌ ವರ್ಶನ್‌ನ ಟ್ರೇಲರ್‌ ಬಿಡುಗಡೆಯಾಗಿದೆ. ಥೈಲ್ಯಾಂಡ್‌ನಲ್ಲಿ ಡಿ.1ಕ್ಕೆ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ


ರಕ್ಷಿತ್‌ ಶೆಟ್ಟಿನಟನೆಯ ‘777 ಚಾರ್ಲಿ’ ಸಿನಿಮಾಕ್ಕೆ ವಿಶ್ವಾದ್ಯಂತ ಬೇಡಿಕೆ ಬರುತ್ತಿದೆ. ಈಗಾಗಲೇ ಸಿನಿಮಾದ ಥಾಯ್‌ ವರ್ಶನ್‌ನ ಟ್ರೇಲರ್‌ ಬಿಡುಗಡೆಯಾಗಿದೆ. ಥೈಲ್ಯಾಂಡ್‌ನಲ್ಲಿ ಡಿ.1ಕ್ಕೆ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಈ ಬಗ್ಗೆ ವಿವರ ನೀಡುವ 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ರಾಜ್‌, ‘ಥಾಯ್‌ ಜನರು ಪ್ರಾಣಿ ಪ್ರಿಯರು. ನಮ್ಮ ಸಿನಿಮಾ ಇಲ್ಲಿ ರಿಲೀಸ್‌ ಆದಾಗಲೇ ಥಾಯ್‌ ವರ್ಶನ್‌ ಹಕ್ಕುಗಳನ್ನು ಕೇಳಿದ್ದರು. ಅಲ್ಲಿ ಸಿನಿಮಾ ಯಶಸ್ವಿಯಾಗುವ ವಿಶ್ವಾಸವಿದೆ. ಇದೀಗ ಜಪಾನ್‌, ರಷ್ಯಾ, ಚೈನಾ ಭಾಷೆಗಳಲ್ಲಿ ಚಿತ್ರದ ಹಕ್ಕುಗಳಿಗೆ ಬೇಡಿಕೆ ಬಂದಿದೆ. ಸ್ವಲ್ಪ ಸಮಯದಲ್ಲಿ ಜಪಾನ್‌ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಉಳಿದ ದೇಶ-ಭಾಷೆಗಳ ರಿಲೀಸ್‌ ಕುರಿತಾಗಿ ಮಾತುಕತೆ ನಡೆಯುತ್ತಿದೆ. ದಂಗಲ್‌ನಂಥಾ ಬಾಲಿವುಡ್‌ ಸಿನಿಮಾ ಅತ್ಯಧಿಕ ಗಳಿಕೆ ಮಾಡಿದ್ದೇ ಚೀನಾದಲ್ಲಿ. ಅಲ್ಲಿ 75,000ಕ್ಕೂ ಅಧಿಕ ಥಿಯೇಟರ್‌ಗಳಿವೆ. ಗಳಿಕೆಯ ಅಧಿಕ ಭಾಗ ಆ ದೇಶಕ್ಕೆ ಹೋಗುತ್ತೆ. ಆದರೆ ಪರ್ಸಂಟೇಜ್‌ ಕಡಿಮೆ ಬಂದರೂ ಥಿಯೇಟರ್‌ ಸಂಖ್ಯೆ ಅಧಿಕ ಇರುವ ಕಾರಣ ಚಿತ್ರ ಗೆದ್ದರೆ ಸಾವಿರ ಕೋಟಿ ಗಳಿಕೆ ಮಾಡಬಹುದು. ಸದ್ಯಕ್ಕೀಗ ನಮ್ಮ ಸಿನಿಮಾ ರಿಲೀಸ್‌ಗೆ ಸಂಬಂಧಿಸಿ ಚೀನಾ ಜೊತೆಗಿನ ಮಾತುಕತೆ ಪ್ರಗತಿಯಲ್ಲಿದೆ. ಅಲ್ಲಿ ಕಡಿಮೆ ಸಿನಿಮಾ ಬಿಡುಗಡೆ ಮಾಡುವ ಕಾರಣ ರಿಲೀಸ್‌ ವಿಳಂಬವಾಗಬಹುದು’ ಎನ್ನುತ್ತಾರೆ. ಪರಂವಃ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ರಕ್ಷಿತ್‌ ಶೆಟ್ಟಿಈ ಸಿನಿಮಾ ನಿರ್ಮಿಸಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.

Tap to resize

Latest Videos

ನಿರ್ದೇಶಕ ಕಿರಣ್‌ ರಾಜ್‌ ಸದ್ಯ ಹೊಸ ಹಾರರ್‌ ಸಿನಿಮಾ ಕೆಲಸದಲ್ಲಿ ಮುಳುಗಿದ್ದಾರೆ. ಅದಿನ್ನೂ ಸ್ಕ್ರಿಪ್ಟ್‌ ಹಂತದಲ್ಲಿದೆ.

ನಾಯಕಿ ಸಂಗೀತ ಮಾತು:

ಇಡೀ ಸಿನಿಮಾ ಚಾರ್ಲಿ ಅನ್ನುವ ನಾಯಿಯ ಸುತ್ತ ಸಾಗುವ ಕಥೆ. ದಕ್ಷಿಣ ಭಾರತಕ್ಕೇ ಬಹಳ ಅಪರೂಪದ ಸಿನಿಮಾ ಇದು. ನನ್ನ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ದೇವಿಕಾ ಆರಾಧ್ಯ ಅನ್ನುವ ಪಾತ್ರ ನನ್ನದು. ಎನಿಮಲ್‌ ವೆಲ್‌ಫೇರ್‌ ಆಫೀಸರ್‌ ರೋಲ್‌. ಇಡೀ ಟೀಮ್‌ ಜೊತೆಗೆ ಕಳೆದ ಪ್ರತೀ ಕ್ಷಣವೂ ಅದ್ಭುತ. ಹಾಗೆ ನೋಡಿದ್ರೆ ಟೀಮ್‌ನಲ್ಲಿ ನಾನೊಬ್ಳೇ ಫೀಮೇಲ್‌ ಇದ್ದದ್ದು, ಆದ್ರೆ ಒಂಚೂರೂ ಕಸಿವಿಸಿ ಆಗಿಲ್ಲ. ಈ ಟೀಮ್‌ ಜೊತೆಗೆ ಯಾವ ಸಿನಿಮಾ ಮಾಡಲೂ ನಾನು ರೆಡಿ ಅನ್ನುವಷ್ಟುಆಪ್ತವಾಗಿತ್ತು. ರಾಜಸ್ಥಾನ, ಗುಜರಾತ್‌, ಗೋವಾದಲ್ಲೆಲ್ಲ ಶೂಟಿಂಗ್‌ ಆಯ್ತು. ಅಲ್ಲಿನ ಸಂಸ್ಕೃತಿ, ಸ್ಥಳೀಯರು ಹೊಸಬರನ್ನು ಸ್ವಾಗತಿಸಿದ ರೀತಿ ಕಂಡು ಹೃದಯ ತುಂಬಿ ಬಂತು.

‘ಚಾರ್ಲಿ’ ಸಿನಿಮಾ ಪ್ರೇರಣೆ: ಪೊಲೀಸ್‌ ಶ್ವಾನಕ್ಕೆ ‘Charlie’ ನಾಮಕರಣ!

 ಚಾರ್ಲಿ  ಟ್ರೈನಿಂಗ್ ಮಾಡದ್ಹೇಗೆ?

‘ಮನುಷ್ಯರಿಂದಲೇ ಆ್ಯಕ್ಟಿಂಗ್ ಮಾಡಿಸೋದು ಕಷ್ಟ. ಇನ್ನು ಪ್ರಾಣಿಗಳಿಂದ ನಟನೆ ತೆಗೆಸೋದು ಹೇಗಿರಬಹುದು ಕಲ್ಪಿಸಿಕೊಳ್ಳಿ. ಚಾರ್ಲಿ ಜೊತೆಗಿನ ಸೀನ್‌ಗಳಲ್ಲಿ 30 ರಿಂದ 40 ಟೇಕ್‌ಗಳು ಕಾಮನ್ ಆಗಿದ್ದವು. ನಲವತ್ತನೇ ಶಾಟ್‌ನಲ್ಲಿ ಚಾರ್ಲಿ ಚೆನ್ನಾಗಿ ಮಾಡಿ, ನಾನು ಚೆನ್ನಾಗಿ ಮಾಡದಿದ್ರೆ ಅಲ್ಲಿ ನಲವತ್ತೊಂದನೇ ಶಾಟ್‌ಗೆ ಅವಕಾಶ ಇರಲಿಲ್ಲ. ಚಾರ್ಲಿ ತರಬೇತುದಾರ ಪ್ರಮೋದ್ ನಾಲ್ಕು ವರ್ಷಗಳಿಂದ ಈ ಸಿನಿಮಾಕ್ಕಾಗಿಯೇ ಎರಡು ನಾಯಿಗಳನ್ನು ರೆಡಿ ಮಾಡಿದ್ದಾರೆ. ಪ್ರತೀ ಸೀನ್‌ಗೂ ಒಂದೊಂದು ತಿಂಗಳ ತರಬೇತಿ ಬೇಕಿತ್ತು. ನಮ್ಮ ನಿರ್ದೇಶಕ ಕಿರಣ್ ರಾಜ್ ಅವರು ಏನೆಲ್ಲ ಮಾಡಬೇಕು ಅನ್ನುವ ಲಿಸ್‌ಟ್ ಕೊಟ್ಟರೆ ಅವರು ಅದಕ್ಕೆ ತಕ್ಕ ಹಾಗೆ ಪಳಗಿಸುತ್ತಿದ್ದರು. ಇದರಲ್ಲಿ ಕಿರಣ್ ರಾಜ್ ಅವರ ಕೆಲಸವೂ ದೊಡ್ಡದಿದೆ. ಹಾಗೆ ನೋಡಿದರೆ ಇಲ್ಲಿ ಅವರೇ ಎಲ್ಲರಿಗಿಂತ ದೊಡ್ಡ ಹೀರೋ’ ಎನ್ನುತ್ತಾರೆ ರಕ್ಷಿತ್.

click me!