ರಿಷಬ್ ಶೆಟ್ಟಿ ನಟನೆಯ ಕಾಂತಾರ 1 ಶೂಟಿಂಗ್‌ ಬಹುತೇಕ ಪೂರ್ಣ: ಯಾವಾಗ ಸಿನಿಮಾ ರಿಲೀಸ್?

Published : Aug 02, 2024, 06:02 PM ISTUpdated : Aug 02, 2024, 06:59 PM IST
ರಿಷಬ್ ಶೆಟ್ಟಿ ನಟನೆಯ ಕಾಂತಾರ 1 ಶೂಟಿಂಗ್‌ ಬಹುತೇಕ ಪೂರ್ಣ: ಯಾವಾಗ ಸಿನಿಮಾ ರಿಲೀಸ್?

ಸಾರಾಂಶ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುಮಾರು 125 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. 

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾದ ಶೂಟಿಂಗ್‌ ಮುಕ್ತಾಯದತ್ತ ಸಾಗಿದೆ. ಕುಂದಾಪುರದ ಕೆರಾಡಿಯಲ್ಲಿ ಬೃಹತ್‌ ಸೆಟ್‌ ಹಾಕಿ ಶೂಟಿಂಗ್‌ ನಡೆದಿದ್ದು, ಮೂಲಗಳ ಪ್ರಕಾರ ಇನ್ನೂ ಹದಿನೈದರಿಂದ ಇಪ್ಪತ್ತು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ‘ಕಾಂತಾರ ಅಧ್ಯಾಯ 1’ ಚಿತ್ರದಲ್ಲಿ ವಿಎಫ್‌ಎಕ್ಸ್‌ ಕೆಲಸ ಹೆಚ್ಚಿದೆ. ಹಾಲಿವುಡ್‌ನ ‘ಲಯನ್‌ ಕಿಂಗ್’ನಂಥಾ ಸಿನಿಮಾಕ್ಕೆ ವಿಎಫ್‌ಎಕ್ಸ್‌ ವರ್ಕ್‌ ಮಾಡಿದ ದಿ ಮಿಲ್‌ ಹಾಗೂ ಎಂಪಿಸಿ ಕಂಪನಿಗಳು ಈ ಸಿನಿಮಾಕ್ಕೆ ವಿಎಫ್‌ಎಕ್ಸ್‌ ಕೆಲಸ ಮಾಡಲಿವೆ. 

ಪೋಸ್ಟ್‌ ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುಮಾರು 125 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ಏಪ್ರಿಲ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸಿದೆ.

ಪ್ರಗತಿ ಜೊತೆ ರಿಷಬ್‌ ಬ್ಯೂಟಿಫುಲ್ ವೆಕೇಷನ್: ಹೋಯ್ ಶೆಟ್ರೆ ಕಾಂತಾರ ಅಪ್‌ಡೇಟ್‌ ಕೊಡಿ ಎಂದ ಫ್ಯಾನ್ಸ್!

ಓಟಿಟಿಯವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲ: ಎಲ್ಲರಿಗೂ ಕಾಂತಾರ 1 ಸಿನಿಮಾ ಬಗ್ಗೆ ಕುತೂಹಲ ಇದೆ. ಆ ಕುರಿತು ನಾನು ಸದ್ಯ ಹೆಚ್ಚೇನೂ ಬಿಟ್ಟು ಕೊಡಲಾರೆ. ಸಿನಿಮಾ ದೊಡ್ಡದು. ಪ್ರಮೋಷನ್‌ ಕೂಡ ದೊಡ್ಡದಾಗಿರಬೇಕು. ಅದಕ್ಕೆ ತಕ್ಕಂತೆ ನಿರ್ಮಾಣ ಸಂಸ್ಥೆಯವರು ಪ್ಲಾನ್‌ ಮಾಡಿರುತ್ತಾರೆ. ಅವರ ಜೊತೆ ನಾನು ನಿಲ್ಲಬೇಕು. ಯಾಕೆಂದರೆ ಅವರು ನನ್ನನ್ನು ತುಂಬಾ ದೊಡ್ಡ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಓಟಿಟಿಯವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲ. ಅವರ ಸ್ಥಾನದಲ್ಲಿ ನಿಂತು ನೋಡಿದರೆ ಅದರಲ್ಲಿ ಅ‍ವರ ತಪ್ಪು ಕಾಣಿಸುವುದಿಲ್ಲ. ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಒಳ್ಳೆಯ ಕಂಟೆಂಟ್ ಬೇಕು. ನಾವು ಕೊಡುತ್ತಿದ್ದೇವಾ.

ಒಳ್ಳೆಯ ಕಂಟೆಂಟ್ ಕೊಡುವುದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿದ್ದೇವಾ ಎಂಬುದರ ಕುರಿತು ಆಲೋಚಿಸಬೇಕು. ಓಟಿಟಿಗಳ ಬಳಿ ನನ್ನ ಹೋರಾಟ ನಡೆಯುತ್ತಲೇ ಇದೆ. ಕಾಂತಾರ 1 ಚಿತ್ರ 125 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿಗಳು ಬಂದಿವೆ. ಆ ಸಂಖ್ಯೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆ ಅಂಕಿಯ ಅಕ್ಕಪಕ್ಕ ಇರುವ ಒಂದು ದೊಡ್ಡ ಮೊತ್ತಕ್ಕೆ ಸಿನಿಮಾ ಮಾರಾಟ ಆಗಿದೆ. ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ. ಹಾಗಾಗಿ ನನ್ನದು ಹೋರಾಟದ ಬದುಕು. ಯಾವುದೂ ಸುಲಭವಾಗಿ ಸಿಗುವುದಿಲ್ಲ. ಸುಲಭವಾಗಿ ಸಿಕ್ಕಿದ್ದು ಎಂದರೆ ನನ್ನ ಪತ್ನಿ ಪ್ರಗತಿ.

ಹೂವಿನ ಡ್ರೆಸ್‌ನಲ್ಲಿ ಮಿಂಚಿದ ಪಟಾಕ ಪೋರಿ ನಭಾ ನಟೇಶ್: ಬಾನಿಂದ ಜಾರಿದ ಬೆಳದಿಂಗಳ ಬಾಲೆ ಎಂದ ಫ್ಯಾನ್ಸ್‌!

ನನಗೆ ಗೊತ್ತಿದ್ದಂತೆ ಯಶ್‌ ಕೂಡ ಒಂದು ದಿನವೂ ಸುಮ್ಮನೆ ಕೂತಿಲ್ಲ. ನಾನು ನೂರಾರು ಮಂದಿಯ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ. ಇನ್ನೂ ನೂರು ದಿನ ಬೇಕು. ಗಾತ್ರ ದೊಡ್ಡದಿದ್ದಾಗ ಸಮಯವೂ ಜಾಸ್ತಿ ಬೇಕು. ಎಲ್ಲಾ ಕಡೆ ಎಂಟರ್‌ಟೇನ್‌ಮೆಂಟ್ ಇದೆ. ಎಲ್ಲರೂ ರೀಲ್‌ ಮಾಡುತ್ತಿದ್ದಾರೆ. ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರ ಸಂಖ್ಯೆ ಜಾಸ್ತಿಯಾಗಿದೆ. ಇಂಥಾ ಹೊತ್ತಲ್ಲಿ ನಾವು ಸಿನಿಮಾವನ್ನು ಎಲ್ಲಾ ರೀತಿಯಲ್ಲೂ ಒಳ್ಳೆಯ ಪ್ಯಾಕೇಜ್‌ ಮಾಡಿ ಕೊಡಬೇಕು. ಒಂದೊಳ್ಳೆ ಅನುಭವ ಕಟ್ಟಿಕೊಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep